ಇಂದಿನ ದಿನಭವಿಷ್ಯ : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ, ನಿಮ್ಮ ರಾಶಿಗೂ ಇದೆಯಾ ಅದೃಷ್ಟ

ಇಂದು ಪರಾಭವ ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಷಾಢ ಮಾಸದ ಶುಕ್ಲ ಪಕ್ಷ ಬುಧವಾರ ಜುಲೈ 22, 2026. ದ್ವಾದಶ ರಾಶಿಗಳ ಮೇಲೆ ಇಂದು ಸ್ವಾತಿ ನಕ್ಷತ್ರದ ಪ್ರಭಾವ ಇರಲಿದೆ. ನಕ್ಷತ್ರಗಳ ವಿಶೇಷ ಪ್ರಭಾವದಿಂದ ಮೇಷದಿಂದ ಮೀನರಾಶಿಯವರೆಗೆ ದ್ವಾದಶ ರಾಶಿಗಳ ಇಂದಿನ ಫಲಾಫಲ ಹೇಗಿದೆ ತಿಳಿಯೋಣಾ.

ದಿನಭವಿಷ್ಯ : ಇಂದು ಪರಾಭವ ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಷಾಢ ಮಾಸದ ಶುಕ್ಲ ಪಕ್ಷ ಬುಧವಾರ ಜುಲೈ 22, 2026. ದ್ವಾದಶ ರಾಶಿಗಳ ಮೇಲೆ ಇಂದು ಸ್ವಾತಿ ನಕ್ಷತ್ರದ ಪ್ರಭಾವ ಇರಲಿದೆ. ನಕ್ಷತ್ರಗಳ ವಿಶೇಷ ಪ್ರಭಾವದಿಂದ ಮೇಷದಿಂದ ಮೀನರಾಶಿಯವರೆಗೆ ದ್ವಾದಶ ರಾಶಿಗಳ ಇಂದಿನ ಫಲಾಫಲ ಹೇಗಿದೆ ತಿಳಿಯೋಣಾ.

ಮೇಷ ರಾಶಿ (Aries)

ಬಹಳಷ್ಟು ಉತ್ಸಾಹದಿಂದ ಕೂಡಿರುವ ದಿನವಾಗಿರಲಿದೆ. ನಿಮ್ಮ ಪಾಲಿಗೆ ವೃತ್ತಿ ಜೀವನದಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ಉದ್ಯೋಗಸ್ಥರು ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತಾರೆ. ಆರ್ಥಿಕವಾಗಿ ಲಾಭದಾಯಕವಾದ ದಿನ ಆಗಿದ್ದರೂ ಕೂಡ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳಿತು. ಸಾಂಸಾರಿಕವಾಗಿ ನೆಮ್ಮದಿಯನ್ನು ತರಲಿದ್ದು, ಸಂಗಾತಿಯ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ, ಹೊರಗಿನ ಆಹಾರ ಸೇವನೆಯಿಂದ ದೂರ ಇರುವುದು ಉತ್ತಮ. ವಿದ್ಯಾರ್ಥಿಗಳ ಪಾಲಿಗೆ ಇಂದು ಶುಭದಾಯಕವಾಗಿರುವ ದಿನ.

ಶುಭ ಬಣ್ಣ: ಕೆಂಪು | ಶುಭ ಸಂಖ್ಯೆ: 9

ವೃಷಭ ರಾಶಿ (Taurus)

ಹೊಸ ಸವಾಲುಗಳನ್ನು ನೀವಿಂದು ಎದುರಿಸುತ್ತೀರಿ. ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ. ವ್ಯಾಪಾರಸ್ಥರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಉತ್ತ ಲಾಭ ಪಡೆಯಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಹೂಡಿಕೆ ಮಾಡುವ ಮೂಲಕ ಪರಿಣಿತರ ಸಲಹೆ ಪಡೆಯುವುದು ಉತ್ತಮ. ಆಪ್ತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಲಿದ್ದು, ಆರೋಗ್ಯ ಸ್ಥಿತಿ ಹೆಚ್ಚು ಸ್ಥಿರವಾಗಿ ಇರಲಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಧ್ಯಾನ ಮತ್ತು ಯೋಗವನ್ನು ಮಾಡಿ.

ಶುಭ ಬಣ್ಣ: ಬಿಳಿ | ಶುಭ ಸಂಖ್ಯೆ: 6

ಮಿಥುನ ರಾಶಿ (Gemini)

ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಕೆ ಮನ್ನಣೆ ಸಿಗಲಿದೆ. ಇಡೀ ದಿನವು ನಿಮಗೆ ಮಿಶ್ರ ಫಲಿತಾಂಶವನ್ನು ನೀಡಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಬಾಕಿ ಉಳಿದಿರುವ ಹಣ ನಿಮ್ಮ ಕೈ ಸೇರಲಿದ್ದು, ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಉದ್ಯೋಗಸ್ಥ ಯುವಕರ ನಿರೀಕ್ಷೆಗಳು ಈಡೇರಿಕೆ ಆಗಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ. ವಾಹನ ಚಾಲನೆಯ ವೇಳೆಯಲ್ಲಿ ಎಚ್ಚರಿಕೆ ಅತೀ ಅಗತ್ಯ.

ಶುಭ ಬಣ್ಣ: ಹಸಿರು | ಶುಭ ಸಂಖ್ಯೆ: 5

ಕರ್ಕಾಟಕ ರಾಶಿ(Cancer)

ನಿಮ್ಮ ಪಾಲಿಗೆ ಇಂದು ಅಚ್ಚರಿಯ ದಿನ ಆಗಿದ್ದರೂ ಕೂಡ ಸಕಾರಾತ್ಮಕ ಸುದ್ದಿ ನಿಮಗೆ ದೊರೆಯಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕನಸೊಂದು ನನಸಾಗುವ ಸಾಧ್ಯತೆಯಿದೆ. ಆರ್ಥಿಕವಾಗಿ ಸದೃಢ ಆಗಲಿದ್ದು, ಸಾಲವನ್ನು ನೀಡುವಾಗ ಎಚ್ಚರಿಕೆಯಿಂದ ಇರಿ. ಕುಟುಂಬ ಸದಸ್ಯರ ಜೊತೆಗೆ ಮನಸ್ತಾಪ ಉಂಟಾಗದಂತೆ ಹೊಂದಾಣಿಕೆ ಅತೀ ಅಗತ್ಯ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುವ ದಿನವಾಗಿದ್ದು, ಕೃಷಿಕರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಒಳಿತು.

ಶುಭ ಬಣ್ಣ: ಬೆಳ್ಳಿ | ಶುಭ ಸಂಖ್ಯೆ: 2

ಸಿಂಹ ರಾಶಿ (Leo)

ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ. ನಾಯಕತ್ವ ಗುಣಗಳು ನಿಮಗೆ ವಿಶೇಷ ಲಾಭವನ್ನು ತಂದು ಕೊಡಲಿದೆ. ವ್ಯವಹಾರಿಕ ಕ್ಷೇತ್ರದಲ್ಲಿ ಹೆಚ್ಚಿನ ಧನಲಾಭ ಆಗಲಿದ್ದು, ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ. ಕಾನೂನು ಅಥವಾ ಕೋರ್ಟ್‌ ವ್ಯಾಜ್ಯಗಳಲ್ಲಿಯೂ ಹೆಚ್ಚಿನ ಲಾಭ ದೊರೆಯಲಿದೆ. ಕೌಟುಂಬಿಕ ಜೀವನದಲ್ಲಿ ಸಂತಸ ತರಲಿದೆ. ಪೋಷಕರ ಆರೋಗ್ಯವೂ ಸುಧಾರಣೆ ಕಾಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದ್ದು, ಕಲೆ, ಸಾಹಿತ್ಯ ಕ್ಷೇತ್ರದವರಿಗೆ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಅತಿಯಾದ ಕೋಪವನ್ನು ನಿಯಂತ್ರಿಸಿ, ದೂರ ಪ್ರಯಾಣವು ಲಾಭದಾಯಕವಾಗಿ ಇರಲಿದೆ.

ಶುಭ ಬಣ್ಣ: ಕಿತ್ತಳೆ | ಶುಭ ಸಂಖ್ಯೆ: 1

ಕನ್ಯಾ ರಾಶಿ (Virgo)

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಿದ್ರೆ, ನೀವು ಅದನ್ನು ಯಶಸ್ವಿ ಆಗಿ ಪೂರ್ಣಗೊಳಿಸುತ್ತೀರಿ. ಸರಕಾರಿ ಉದ್ಯೋಗಕ್ಕೆ ಕಾಯುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಯುವ ಉದ್ಯಮಿಗಳ ಪಾಲಿಗೆ ಶುಭದಾಯಕವಾಗಿದ್ದು, ಹೊಸ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ. ಆರ್ಥಿಕ ವ್ಯವಹಾರಗಳಲ್ಲಿಯೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ. ಇಲ್ಲದೇ ಇದ್ರೆ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಕೌಟುಂಬಿಕವಾಗಿ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ. ಸಂಗಾತಿ ನಿಮ್ಮ ಬೆಂಬಕ್ಕೆ ನಿಲ್ಲಲಿದ್ದು, ಸಣ್ಣ ಪುಟ್ಟ ಸಮಸ್ಯೆಗಳು ಪರಿಹಾರ ಕಾಣಲಿದೆ.

ಶುಭ ಬಣ್ಣ: ಹಸಿರು | ಶುಭ ಸಂಖ್ಯೆ: 5

ತುಲಾ ರಾಶಿ (Libra)

ಮಾನಸಿಕವಾಗಿ ನೆಮ್ಮದಿಯ ದಿನ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡು ಕುಟುಂಬದವರ ಜೊತೆಗೆ ಸಮಯವನ್ನು ಕಳೆಯುತ್ತೀರಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಪಾಲಿಗೆ ಇಂದು ಸಾಮಾನ್ಯವಾಗಿರುವ ದಿನ. ದೊಡ್ಡ ಮಟ್ಟದ ಹೂಡಿಕೆಗೆ ಯೋಚಿಸುತ್ತಿದ್ರೆ, ಸದ್ಯದಲ್ಲಿ ಅದನ್ನು ಮುಂದೂಡುವುದು ಒಳಿತು.ವ್ಯಾಪಾರಸ್ಥರು, ಗ್ರಾಹಕರ ಜೊತೆಗೆ ತಾಳ್ಮೆಯಿಂದ ವರ್ತಿಸುವುದು ಅತೀ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಯನ್ನು ಎದುರು ನೋಡ್ತಾ ಇರುವವರಿಗೆ ಇದು ಸರಿಯಾದ ಸಮಯ ಅಲ್ಲ. ಸಾಮಾಜಿಕವಾಗಿಯೂ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಲಿದ್ದು, ಪ್ರೇಮ ಜೀವನದಲ್ಲಿ ಸಿಹಿ ಮತ್ತು ಕಹಿಯ ಅನುಭವ ಆಗಲಿದೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.

ಶುಭ ಬಣ್ಣ: ಗುಲಾಬಿ | ಶುಭ ಸಂಖ್ಯೆ: 6

ವೃಶ್ಚಿಕ ರಾಶಿ (Scorpio)

ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಿದೆ ಬೀಳಿದೆ. ಅಲ್ಲದೇ ಯಶಸ್ವಿಯಾಗಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಲಾಭ ಖಚಿತ. ಯಾವುದೇ ಕಾರಣಕ್ಕೂ ಯಾರನ್ನೂ ನೀವು ಕುರುಡಾಗಿ ನಂಬ ಬೇಡಿ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಬಿರುಕು ಮೂಡಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ರಕ್ತದ ಒತ್ತಡ, ಮಧು ಮೇಹ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಿ. ಆಧ್ಯಾತ್ಮಿಕ ಚಿಂತನೆಗಳಲ್ಲಿ ಒಲವು ಮೂಡಲಿದ್ದು, ಶಾಂತಿ ನೆಮ್ಮದಿ ಸಿಗಲಿದೆ.

ಶುಭ ಬಣ್ಣ: ಕೆಂಪು | ಶುಭ ಸಂಖ್ಯೆ: 9

ಧನಸ್ಸು ರಾಶಿ (Sagittarius)

ನಿಮ್ಮ ಕೆಲಸದ ವೇಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಆರ್ಥಿಕವಾಗಿ ಪ್ರಬಲರಾಗುವಿರಿ, ಕುಟುಂಬದಲ್ಲಿ ಹಬ್ಬದ ವಾತಾವರಣ ಇರಲಿದೆ. ಅವಿವಾಹಿತರಿಗೆ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಕೀಲು ಅಥವಾ ಮಂಡಿ ನೋವಿನ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಮಾರ್ಗಗಳು ಗೋಚರಿಸಲಿವೆ. ಮನೆ ನಿರ್ಮಾಣ ಅಥವಾ ಜಮೀನು ಖರೀದಿಯ ಬಗ್ಗೆ ಗಂಭೀರವಾಗಿ ಯೋಚಿಸುವಿರಿ. ಕಲಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೂರದ ಪ್ರಯಾಣವನ್ನು ಆದಷ್ಟು ತಪ್ಪಿಸುವುದು ಇಂದಿನ ಮಟ್ಟಿಗೆ ಒಳ್ಳೆಯದು.

ಶುಭ ಬಣ್ಣ: ಹಳದಿ | ಶುಭ ಸಂಖ್ಯೆ: 3

ಮಕರ ರಾಶಿ (Capricorn)

ಮಿಶ್ರ ಫಲದಾಯಕ ದಿನ. ಹಳೆಯ ವಾಹನ ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಮತ್ತು ಸಂಗಾತಿಯ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗಲಿದೆ. ಅತಿಯಾದ ಕೆಲಸದ ಹೊರೆಯಿಂದಾಗಿ ಆಯಾಸ ಮತ್ತು ಮಾನಸಿಕ ಒತ್ತಡ ಉಂಟಾಗಬಹುದು. ವ್ಯಾಪಾರದಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಲಾಭ ಸಿಗಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ವಿಷಯಗಳಲ್ಲಿ ಇತರರು ಮೂಗು ತೂರಿಸದಂತೆ ನೋಡಿಕೊಳ್ಳಿ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ದಾರಿ ಸುಗಮವಾಗಲಿದೆ.

ಶುಭ ಬಣ್ಣ: ನೀಲಿ | ಶುಭ ಸಂಖ್ಯೆ: 8

ಕುಂಭರಾಶಿ (Aquarius)

ದ್ಯೋಗದಲ್ಲಿ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಿಗುವ ಬಲವಾದ ಯೋಗವಿದೆ. ಮನೆಯಲ್ಲಿ ಶುಭ ಕಾರ್ಯವೊಂದು ನಡೆಯುವ ಲಕ್ಷಣಗಳಿವೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಜನಬೆಂಬಲ ಮತ್ತು ಪ್ರಶಂಸೆ ದೊರೆಯಲಿದೆ. ಉ ಆರೋಗ್ಯ ಉತ್ತಮವಾಗಿರುತ್ತದೆ. ತಂದೆಯ ಸಲಹೆಗಳನ್ನು ಪಾಲಿಸುವುದು ಶ್ರೇಯಸ್ಕರ. ಪ್ರೀತಿಯಲ್ಲಿರುವವರು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಮನೆಯವರ ಒಪ್ಪಿಗೆ ಪಡೆಯಬಹುದು. ಹೊಸ ಯೋಜನೆಗಳನ್ನು ರೂಪಿಸಲು ಅತ್ಯುತ್ತಮವಾದ ದಿನ. ಸಮಾಜದ ಗಣ್ಯ ವ್ಯಕ್ತಿಗಳ ಭೇಟಿಯಿಂದ ನಿಮಗೆ ಭವಿಷ್ಯದಲ್ಲಿ ಲಾಭವಾಗಲಿದೆ. ಯಂತ್ರೋಪಕರಣಗಳ ಬಳಕೆಯಲ್ಲಿ ಎಚ್ಚರಿಕೆ ಇರಲಿ.

ಶುಭ ಬಣ್ಣ: ಕಪ್ಪು | ಶುಭ ಸಂಖ್ಯೆ: 8

ಮೀನ ರಾಶಿ (Pisces)

ಉದ್ಯೋಗದ ಸ್ಥಳದಲ್ಲಿ ನಿಮ್ಮ ಸಹವರ್ತಿಗಳೊಂದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಿ. ಕುಟುಂಬದಲ್ಲಿ ಅಣ್ಣ-ತಮ್ಮಂದಿರ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ. ನಿಮ್ಮ ಆಲೋಚನೆಗಳು ಸ್ಪಷ್ಟವಾಗಿರಲಿದ್ದು, ಕಠಿಣ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳುವಿರಿ. ಆರ್ಥಿಕವಾಗಿ ಸ್ವಲ್ಪ ಏರುಪೇರುಗಳಾಗಬಹುದು, ಆದ್ದರಿಂದ ಬಜೆಟ್ ಮೀರಿ ಖರ್ಚು ಮಾಡದಿರಿ. ಹೊಸ ಸ್ನೇಹಿತರ ಒಡನಾಟದಿಂದ ನಿಮ್ಮ ಆಲೋಚನಾ ಕ್ರಮದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗಲಿವೆ. ಚರ್ಮ ಅಥವಾ ಅಲರ್ಜಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಆಧ್ಯಾತ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಮನಸ್ಸಿನ ನೆಮ್ಮದಿ ಹೆಚ್ಚಿಸಿಕೊಳ್ಳುವಿರಿ.

ಶುಭ ಬಣ್ಣ: ಹಳದಿ | ಶುಭ ಸಂಖ್ಯೆ: 3

daily horoscope 22 july 2026 rashi bhavishya kannada

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021