India vs Zimbabwe T20 : ಐರ್ಲೆಂಡ್, ಇಂಗ್ಲೆಂಡ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಜಿಂಬಾಬ್ವೆ ಸವಾಲು, ಕೋಚ್‌ ಗಂಭೀರ್‌ಗೆ ಕೋಕ್‌

ಭಾರತ ಹಾಗೂ ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಭಾರತ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ದದ ಸೋಲು ಭಾರತದ ಅಭಿಮಾನಿಗಳಿಗೆ ಢವ ಢವ ಮೂಡುವಂತೆ ಮಾಡಿದೆ. ಟೀಂ ಇಂಡಿಯಾದ ಕೋಚ್‌ ಗೌತಮ್‌ ಗಂಭೀರ್‌ಗೆ ಈ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.

ind vs zim t20 : ಹರಾರೆ: ಭಾರತ ಕ್ರಿಕೆಟ್‌ ತಂಡ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಯುವ ಪಡೆಯೊಂದಿಗೆ ಜಿಂಬಾಬ್ವೆ ವಿರುದ್ದ ಸೆಣೆಸಾಡಲು ಸಜ್ಜಾಗಿದೆ. ಜಿಂಬಾಬ್ವೆ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಗೆ ಮತ್ತೊಮ್ಮೆ ಯುವ ಪಡೆಯ ಮೂಲಕ ಅಗ್ನಿ ಪರೀಕ್ಷೆಗೆ ಮುಂದಾಗಿದೆ. ಆದರೆ ಭಾರತಕ್ಕೆ ಜಿಂಬಾಬ್ವೆ ವಿರುದ್ದ ಸರಣಿಯಲ್ಲಿ ಎದುರಾಗುವ ಸವಾಲುಗಳು ಏನೇನು ? ಹೇಗಿದೆ ತಂಡದ ಬಲಾಬಲ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ ನೋಡಿ.

ಕೋಚ್‌ ಗಂಭೀರ್‌ಗೆ ಕೋಕ್‌ – ಲಕ್ಷ್ಮಣ್‌ಗೆ ಪಟ್ಟ

ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ದದ ಸರಣಿಗೆ ಭಾರತ ತಂಡದಲ್ಲಿ ಅಷ್ಟೊಂದು ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಾಗದೇ ಇದ್ರೂ ಕೂಡ, ಕೋಚ್‌ ಗೌತಮ್‌ ಗಂಭೀರ್‌ ಅವರಿಗೆ ಕೋಕ್‌ ನೀಡಿದೆ. ಗೌತಮ್‌ ಗಂಭೀರ್‌ ಅವರ ಸ್ಥಾನದಲ್ಲಿ ಬಿಸಿಸಿಐ ಲಕ್ಷ್ಮಣ್‌ ಅವರನ್ನು ಕೋಚ್‌ ಅನ್ನಾಗಿ ನೇಮಕ ಮಾಡಿದೆ. ಸತತ ಸೋಲುಗಳ ಬೆನ್ನಲ್ಲೇ ಕೋಚ್‌ ಗೌತಮ್‌ ಗಂಭೀರ್‌ ವಿರುದ್ದ ಗಂಭೀರ ಆರೋಪಗಳು ಕೇಳಿಬಂದಿತ್ತು. ಇದೇ ಕಾರಣದಿಂದಲೇ ಗಂಭೀರ್‌ ಅವರನ್ನು ಕೈ ಬಿಡಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಬಿಸಿಸಿಐ ಸತತ ಸರಣಿಯ ಕಾರಣದಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎನ್ನುತ್ತಿದೆ.

ವೈಭವ್ ಸೂರ್ಯವಂಶಿಯತ್ತ ಎಲ್ಲರ ಚಿತ್ತ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆದಿದ್ದ ವೈಭವ್‌ ಸೂರ್ಯವಂಶಿಗೆ ಐರ್ಲೆಂಡ್‌ ವಿರುದ್ದ ಸರಣಿಯಲ್ಲಿ ಆಡುವುದಕ್ಕೆ ಅವಕಾಶವೇ ಸಿಗಲಿಲ್ಲ. ಆದರೆ ಇಂಗ್ಲೆಂಡ್‌ ಪಿಚ್‌ಗೆ ಹೊಂದಿಕೊಂಡು ಆಡುವುದಕ್ಕೆ ವಂಡರ್‌ ಬಾಯ್‌ಗೆ ಸಾಧ್ಯವಾಗಲಿಲ್ಲ. ಆದರೆ ಜಿಂಬಾಬ್ವೆ ವಿರುದ್ದದ ಸರಣಿಗೆ ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ಪಡೆಯದ ಹಿನ್ನೆಲೆಯಲ್ಲಿ ವೈಭವ್‌ ಸೂರ್ಯವಂಶಿ ಆರಂಭಿಕನಾಗಿ ಕಣಕ್ಕೆ ಇಳಿಯೋದು ಖಚಿತ. ಅಭಿಷೇಕ್‌ ಶರ್ಮಾ ಜೊತೆಗೆ ವೈಭವ್‌ ಸೂರ್ಯವಂಶಿ ಇನ್ನಿಂಗ್ಸ್‌ ಆರಂಭಿಸಲುದ್ದು, ಹರಾರೆಯ ಮೈದಾನದಲ್ಲಿಯೇ ಅಭಿಷೇಕ್‌ ಶರ್ಮಾ ಚೊಚ್ಚಲ ಶತಕ ಬಾರಿಸಿದ್ದರು. ಇನ್ನು ಕಳೆದ ವರ್ಷ ಅಂಡರ್‌ 19 ವಿಶ್ವಕಪ್‌ ಫೈನಲ್‌ ಪಂದ್ಯ ಇದೇ ಮೈದಾನದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಇಂಗ್ಲೆಂಡ್‌ ತಂಡದ ವಿರುದ್ದ ಭರ್ಜರಿ ಶತಕ ಸಿಡಿಸಿದ್ದರು. ಹೀಗಾಗಿ ಈ ಬಾರಿ ಜಿಂಬಾಬ್ವೆ ಪ್ರವಾಸದಲ್ಲಿಯೂ ವೈಭವ್‌ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುವ ನಿರೀಕ್ಷೆಯಿದೆ.

ಹರಾರೆ ಪಿಚ್ ಭಾರತ ಕ್ರಿಕೆಟ್‌ ತಂಡಕ್ಕೆ ಸವಾಲು

ಭಾರತ ಹಾಗೂ ಜಿಂಬಾಬ್ವೆ ಪ್ರವಾಸದಲ್ಲಿ ಭಾರತಕ್ಕೆ ಸವಾಲಾಗಿರುವುದು ಹರಾರೆಯ ಪಿಚ್.‌ ಸಾಮಾನ್ಯವಾಗಿ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ತೇವಾಂಶ ಮತ್ತು ಬೌನ್ಸ್ ನೀಡುತ್ತದೆ, ಇದು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸವಾಲು ಒಡ್ಡಬಹುದು. ಬ್ಲೆಸಿಂಗ್ ಮುಜರಬಾನಿ ಮತ್ತು ರಿಚರ್ಡ್ ನ್ಗಾರವಾ ಅವರ ವೇಗದ ದಾಳಿಯನ್ನು ಎದುರಿಸುವುದು ಅವರಿಗೆ ಸುಲಭವಲ್ಲ. ಉಪನಾಯಕ ತಿಲಕ್ ವರ್ಮಾ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಸವಾಲಾಗಲಿದೆ. ಇನ್ನು ಇಶಾನ್‌ ಕಿಶಾನ್‌ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದು, ರಿಂಕು ಸಿಂಗ್‌ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವುದು ಹೆಚ್ಚು ಸೂಕ್ತ.

ಭಾರತ – ಜಿಂಬಾಬ್ವೆ ಟಿ20 ಸರಣಿ ತಂಡ

ಭಾರತ ತಂಡ : ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ಹರ್ಷ್ ದುಬೆ, ಸೂರ್ಯಾಂಶ್ ಶೆಡ್ಗೆ, ಯಶ್ ಠಾಕೂರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅಶೋಕ್ ಶರ್ಮಾ, ರವಿ ಬಿಷ್ಣೋಯ್, ಸಿಂಗ್, ಪ್ರಭುಸಿಮ್ಕುರಾನ್.

ಜಿಂಬಾಬ್ವೆ ತಂಡ : ಸಿಕಂದರ್ ರಜಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ತನಕಾ ಚಿವಂಗಾ, ಬೆನ್ ಕರ್ರಾನ್, ಬ್ರಾಡ್ ಇವಾನ್ಸ್, ವೆಸ್ಲಿ ಮಾಧೆವೆರೆ, ಟಿ ಮರುಮಾನಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರವ, ನ್ಯೂಮನ್ ಎನ್, ಟಿಗಾರಾವ, ನ್ಯೂಮನ್ ಎನ್, ಮಿಲ್ಟನ್.

ind vs zim t20 ireland england loss gautam gambhir

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »