ಬೆಂಗಳೂರು : ಪಾಪಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುವ ಮೂಲಕ ದೇಶದ್ರೋಹದ ಆರೋಪಕ್ಕೆ ಗುರಿಯಾಗಿರೋ ಅಮೂಲ್ಯ ಲಿಯೋನಾ ತನ್ನ ಭಾಷಣಕ್ಕೆ ಫೇಸ್ಬುಕ್ ಮೂಲಕ ಆಹ್ವಾನ್ ನೀಡಿದ್ದಳು ಅನ್ನೋದು ಬಯಲಾಗಿದೆ.

ಅಮೂಲ್ಯ ನಿನ್ನೆ ರಾತ್ರಿಯೇ ತನ್ನ ಫೇಸ್ಬುಕ್ ಖಾತೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಸಂಸದ ಅಸಾದುಲ್ಲಾ ಓವೈಸಿ ಭಾಗಿಯಾಗಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ತಾನು ಭಾಷಣ ಮಾಡುತ್ತೇನೆ. ನನ್ನ ಭಾಷಣವನ್ನು ಕೇಳಲು ನೀವೆಲ್ಲರೂ ಬನ್ನಿ ಅಂತಾ ಎಲ್ಲರಿಗೂ ಆಹ್ವಾನ ನೀಡಿದ್ದಾಳೆ.

ಅಮೂಲ್ಯ ಪಾಕಿಸ್ತಾನಪರ ಘೋಷಣೆಗಳನ್ನು ಕೂಗಲು ಮೊದಲೇ ಪ್ಲಾನ್ ಮಾಡಿದ್ದಳಾ, ಇಲ್ಲಾ ಕಾರ್ಯಕ್ರಮ ಆಯೋಜಕರೇ ಆಕೆಯ ಬಾಯಿಯಿಂದ ಇಂತಹ ಘೋಷಣೆಗಳನ್ನು ಕೂಗಿಸಿದ್ದಾರಾ ಅನುಮಾನ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ಬೆಂಗಳೂರು, ಮಂಗಳೂರು, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಅಮೂಲ್ಯ ಭಾಗಿಯಾಗಿದ್ದಳು.