ಸೋಮವಾರ, ಏಪ್ರಿಲ್ 28, 2025
HomeSportsCricketVirat Kohli Fitness Secret : “ಜಪ್ಪಯ್ಯ ಅಂದ್ರೂ ಅದನ್ನು ತಿನ್ನಲ್ಲ..” ಬಯಲಾಯ್ತು ವಿರಾಟ್ ಕೊಹ್ಲಿಯ...

Virat Kohli Fitness Secret : “ಜಪ್ಪಯ್ಯ ಅಂದ್ರೂ ಅದನ್ನು ತಿನ್ನಲ್ಲ..” ಬಯಲಾಯ್ತು ವಿರಾಟ್ ಕೊಹ್ಲಿಯ ಫಿಟ್’ನೆಸ್ ಸೀಕ್ರೆಟ್

- Advertisement -

ಬೆಂಗಳೂರು: (Virat Kohli Fitness Secret) ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯ ರೂಪಾಂತರ ಒಂದು ಅದ್ಭುತ ಯಶೋಗಾಥೆ. ಅಂಡರ್-19 ಕ್ರಿಕೆಟ್ ಆಡುತ್ತಿದ್ದಾಗ ದಷ್ಟ- ಪುಷ್ಟ ಯುವಕ. ಈಗಕ್ರಿಕೆಟ್ ಮೈದಾನದ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟರ್… ಆಟದಂತೆ ಕೊಹ್ಲಿಯ ಫಿಟ್’ನೆಸ್ ಕೂಡ ಯುವ ಕ್ರಿಕೆಟಿಗರಿಗೆ ಮಾದರಿ. ಭಾರತೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಹೊಸ ಫಿಟ್’ನೆಸ್ ಸಂಪ್ರದಾಯವನ್ನೇ ಹುಟ್ಟು ಹಾಕಿದ್ದಾರೆ. ಟೀಮ್ ಇಂಡಿಯಾ ಪರ ಆಡ್ಬೇಕು ಅಂದ್ರೆ ಮೊದ್ಲು ಫಿಟ್ ಆಗಿರ್ಬೇಕು. ಇದು ಕೊಹ್ಲಿ ಹುಟ್ಟು ಹಾಕಿರೋ ಸಂಪ್ರದಾಯ.. ಹಾಗಾದ್ರೆ ವಿರಾಟ್ ಕೊಹ್ಲಿಯವರ ಫಿಟ್ನೆಸ್ ಸೀಕ್ರೆಟ್ ಏನು? ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ 14 ವರ್ಷಗಳು ತುಂಬಿರೋ ಹೊತ್ತಲ್ಲಿ ತಮ್ಮ ಫಿಟ್ನೆಸ್ ರಹಸ್ಯವನ್ನು ಸ್ವತಃ ವಿರಾಟ್ ಕೊಹ್ಲಿಯವರೇ ಬಿಚ್ಟಿಟ್ಟಿದ್ದಾರೆ.

33 ವರ್ಷದ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟು ಇವತ್ತಿಗೆ (ಆಗಸ್ಟ್ 18) ಭರ್ತಿ 14 ವರ್ಷ. 2008ರ ಆಗಸ್ಟ್ 18ರಂದು ಕೊಹ್ಲಿ ತಮ್ಮ ವೃತ್ತಿಜೀವನದ ಮೊದಲ ಏಕದಿನ ಪಂದ್ಯವಾಡಿದ್ದರು. ಶ್ರೀಲಂಕಾ ವಿರುದ್ಧ ದಾಂಬುಲಾದಲ್ಲಿ ನಡೆದ ಆ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ಕೊಹ್ಲಿ, ಕೇವಲ 12 ರನ್ ಗಳಿಸಿ ಔಟಾಗಿದ್ದರು.

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ 14 ವರ್ಷಗಳು ತುಂಬಿರುವ ಹೊತ್ತಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.

“ಅದೊಂದು ಕಾಲವಿತ್ತು. ಆಗ ನಾನು ಡಯೆಟ್ ಬಗ್ಗೆಯಾಗಲೀ, ಫಿಟ್ನೆಸ್ ಬಗ್ಗೆಯಾಗಲೀ ಗಮನ ಕೊಟ್ಟವನಲ್ಲ. ಆದರೆ ಕಳೆದ ಕೆಲ ವರ್ಷಗಳಲ್ಲಿ ನಾನು ನನ್ನ ಆಹಾರ ಪದ್ಧತಿಯನ್ನೇ ಬದಲಿಸಿಕೊಂಡಿದ್ದು, ಈ ವಿಚಾರದಲ್ಲಿ ತುಂಬಾ ಶಿಸ್ತನ್ನು ಪಾಲಿಸುತ್ತಿದ್ದೇನೆ. ಆಹಾರ ಸೇವನೆಯ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಿದ್ದೇನೆ. ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಸಂಸ್ಕರಿಸಿದ ಸಕ್ಕರೆ, ಅಂಟು ಪದಾರ್ಥಗಳನ್ನು ನಾನು ತಿನ್ನುವುದಿಲ್ಲ. ಸಾಧ್ಯವಾದಷ್ಟು ಡೈರಿ ಉತ್ಪನ್ನಗಳಿಂದ ದೂರವಿರುತ್ತೇನೆ. ನನ್ನ ಹೊಟ್ಟೆಯ ಸಾಮರ್ಥ್ಯದ 90% ಅಷ್ಟೇ ತಿನ್ನುವುದು ನನ್ನನ್ನು ಆರೋಗ್ಯವಂತನಾಗಿ ಇರಿಸಿದೆ. ನಾನು ಆಹಾರಪ್ರಿಯ. ಹೀಗಾಗಿ ಇದನ್ನೆಲ್ಲಾ ಪಾಲಿಸುವುದು ಸುಲಭವಲ್ಲ. ಆದರೆ ಈ ಆಹಾರ ಪದ್ಧತಿಯಿಂದ ನಿಮ್ಮ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬಂದಾಗ, ಆರೋಗ್ಯವಂತನಾಗಿರುವುದು ಸಾಧ್ಯವಾದಾಗ ಅದೇ ಆಹಾರ ಪದ್ಧತಿಗೆ ಅಂಟಿಕೊಂಡು ಬಿಡುತ್ತಿರಿ”.

  • ವಿರಾಟ್ ಕೊಹ್ಲಿ, ಕ್ರಿಕೆಟಿಗ.

ಸದ್ಯ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟರ್. ವಿರಾಟ್ ಕೊಹ್ಲಿಯ ಫಿಟ್ನೆಸ್ ಭಾರತದ ಆಟಗಾರರಿಗಷ್ಟೇ ಅಲ್ಲ, ಬೇರೆ ಬೇರೆ ದೇಶಗಳ ಕ್ರಿಕೆಟಿಗರಿಗೂ ಮಾದರಿಯಾಗಿದೆ. ಕೊಹ್ಲಿ ಫಿಟ್ನೆಸ್ ರೂಟಿನ್ ಅನ್ನು ಹಲವಾರು ಕ್ರಿಕೆಟಿಗರು ಫಾಲೋ ಮಾಡ್ತಿದ್ದಾರೆ.

ಇದನ್ನೂ ಓದಿ : Highest score in ODI Debut : ಏಕದಿನ ಪದಾರ್ಪಣೆಯಲ್ಲಿ ಅತೀ ಹೆಚ್ಚು ರನ್: ಟಾಪ್-5ನಲ್ಲಿ ನಾಲ್ವರು ಕನ್ನಡಿಗರು

ಇದನ್ನೂ ಓದಿ : Vinod Kambli : ಸಚಿನ್ ಆತ್ಮೀಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುರ್ಗತಿ ? ಕೆಲಸ ಹುಡುಕುತ್ತಿದ್ದಾರೆ ಮಾಜಿ ಕ್ರಿಕೆಟರ್

Team India Player Virat Kohli Fitness Secret

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular