Maharashtra on high alert : ಮಹಾರಾಷ್ಟ್ರದಲ್ಲಿ ಉಗ್ರ ಚಟುವಟಿಕೆ ಆತಂಕ : ಶಸ್ತ್ರಾಸ್ತ್ರ ತುಂಬಿದ್ದ ದೋಣಿ ಪತ್ತೆ

ಮಹಾರಾಷ್ಟ್ರ : Maharashtra on high alert : ರಾಯಗಢ ಜಿಲ್ಲೆಗೆ ಕಳ್ಳ ಸಾಗಣೆ ಮಾಡಲಾಗುತ್ತಿದ್ದ ಎಕೆ 47 ರೈಫಲ್​​ಗಳನ್ನು ಹೊಂದಿದ್ದ ದೋಣಿಯನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದು ಮಹಾರಾಷ್ಟ್ರದಲ್ಲಿ ಇಂದು ಹೈ ಅಲರ್ಟ್​ ಘೋಷಣೆಯಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ಬಳಿಕ ರಾಯಗಢ ಜಿಲ್ಲೆಯಲ್ಲಿ ಸಂಪೂರ್ಣ ನೌಕಾ ಮಾರ್ಗಗಳನ್ನು ಬಂದ್​ ಮಾಡಲಾಗಿದೆ.


ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಪ್ರಕಾರ ಸಂಬಂಧಪಟ್ಟ ರಾಯಗಡದ ಹರಿಹರೇಶ್ವರ ಬೀಚ್​ ಸಮೀಪದಲ್ಲಿದ್ದ ದೋಣಿಯನ್ನು ದಡಕ್ಕೆ ತೆಗೆದುಕೊಂಡು ಬರಲಾಗಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ರಾಯಗಢ ಪೊಲೀಸ್​ ವರಿಷ್ಠಾಧಿಕಾರಿ ಅಶೋಕ್​ ದುಧೆ ಹಾಗೂ ಇತರೆ ಹಿರಿಯ ಅಧಿಕಾರಿಗಳು ದೋಣಿಯ ಶೋಧ ಕಾರ್ಯವನ್ನು ನಡೆಸಿದ್ದಾರೆ. ದೋಣಿಯಲ್ಲಿ ಮೂರು ಎಕೆ 47 ರೈಫಲ್​ಗಳು ಹಾಗೂ ಕೆಲವು ಬುಲೆಟ್​ಗಳು ಪತ್ತೆಯಾಗಿದೆ. ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.


ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಯಗಢದ ಹರಿಹರೇಶ್ವರ ಹಾಗೂ ಶ್ರೀವರ್ಧನ್​​ನ ಭಾರರ್​​ಖೋಲ್​​ನಲ್ಲಿ ಶಸ್ತ್ರಾಸ್ತ್ರಗಳು ಹಾಗೂ ದಾಖಲೆಗಳನ್ನು ಹೊಂದಿರುವ ಕೆಲವು ದೋಣಿಗಳು ಪತ್ತೆಯಾಗಿವೆ. ಸ್ಥಳೀಯ ಪೊಲೀಸರು ಈ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ. ಎಟಿಎಸ್​​ ಅಥವಾ ರಾಜ್ಯ ಎಜೆನ್ಸಿಯ ವಿಶೇಷ ತಂಡವನ್ನು ತುರ್ತಾಗಿ ನೇಮಕ ಮಾಡುವಂತೆ ನಾನು ಸಿಎಂ ಹಾಗೂ ಡಿಸಿಎಂನ್ನು ಒತ್ತಾಯಿಸಿದ್ದೇನೆಂದು ಶಾಸಕರಾದ ಅಧಿರಿ ತಟ್ಕರೆ ಹಾಗೂ ಶ್ರೀವರ್ಧನ್​ ಹೇಳಿದರು.


ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಈ ವರ್ಷದ ಜೂನ್​ ತಿಂಗಳಲ್ಲಿ ಕರಾವಳಿಯಲ್ಲಿ ಬಳಿಯಲ್ಲಿ ಈ ದೋಣಿಯಲ್ಲಿದ್ದ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಇದೀಗ ದೋಣಿಯಲ್ಲಿ ರೈಫಲ್​ಗಳು ಪತ್ತೆಯಾಗುತ್ತಿದ್ದಂತೆಯೇ ರಾಯಗಢ ಜಿಲ್ಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸುಳಿವು ಪತ್ತೆಗಾಗಿ ಪೊಲೀಸರು ಸ್ಥಳೀಯರು ಹಾಗೂ ಮೀನುಗಾರರನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಇದನ್ನು ಓದಿ : KKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್

ಇದನ್ನೂ ಓದಿ : KKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್

Maharashtra on high alert after suspected terror boat found in Raigad, officials claim no security threat

Comments are closed.