ಅಡಿಲೇಡ್: NED vs SA: ಈ ಬಾರಿ ವಿಶ್ವಕಪ್ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡುತ್ತಿದೆ. ವಿಶ್ವಕಪ್ ಫೈನಲ್ ಪ್ರವೇಶದ ಕನಸು ಕಾಣುತ್ತಿದ್ದ ದಕ್ಷಿಣ ಆಫ್ರಿಕಾ ಇದೀಗ ಪಂದ್ಯಾಕೂಟದಿಂದಲೇ ಹೊರಬಿದ್ದಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಚೋಕರ್ಸ್ ಎಂಬುದು ಮತ್ತೊಮ್ಮೊ ಸಾಬೀತಾಗಿದೆ. ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ ಆಘಾತಕಾರಿ ಸೋಲು ಕಂಡ ಹರಿಣ ಪಡೆ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಿಂದ ಹೊರ ನಡೆದಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಗ್ರೂಪ್-2ರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ (South Africa Vs Netherlands) ದಕ್ಷಿಣ ಆಫ್ರಿಕಾ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿತ್ತು. ಆದರೆ ಆಗಿದ್ದೇ ಬೇರೆ. 13 ರನ್’ಗಳಿಂದ ಹರಿಣಗಳಿಗೆ ಶಾಕ್ ಕೊಟ್ಟ ನೆದರ್ಲೆಂಡ್ಸ್ ವಿಶ್ವಕಪ್’ನಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದ್ದಷ್ಟೇ ಅಲ್ಲದೆ, ದಕ್ಷಿಣ ಆಫ್ರಿಕಾವನ್ನು ಟೂರ್ನಿಯಿಂದ ಹೊರದಬ್ಬಿತು. ಆಡಿದ 5 ಪಂದ್ಯಗಳಿಂದ ಕೇವಲ 5 ಅಂಕ ಗಳಿಸಿದ ಹರಿಣ ಪಡೆ ತಾನು ಚೋಕರ್ಸ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು.
ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್’ಗಳಲ್ಲಿ 8 ವಿಕೆಟಿ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ವಿಶ್ವಕಪ್ ಆರಂಭದಿಂದಲೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ಸೋಲಿನೊಂದಿಗೆ ವಿಶ್ವಕಪ್‌ನಲ್ಲಿ ಮುಗ್ಗರಿಸಿದೆ.
Pure magic from Roelof van der Merwe!
— T20 World Cup (@T20WorldCup) November 6, 2022
Iconic moments like this from every game will be available as officially licensed ICC digital collectibles with @0xFanCraze
Visit https://t.co/EaGDgPxhJN today to see if this could be a Crictos of the Game. pic.twitter.com/vmSWRa8OvG
ದಕ್ಷಿಣ ಆಫ್ರಿಕಾ ತಂಡದ ಸೋಲಿನೊಂದಿಗೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳ ಸೆಮಿಫೈನಲ್ ಕನಸು ಚಿಗುರಿದೆ. ಉಭಯ ತಂಡಗಳು ಅಡಿಲೇಡ್ ಓವಲ್ ಮೈದಾನದಲ್ಲಿ ಮುಖಾಮುಖಿಯಾಗಿದ್ದು, ಗೆದ್ದ ತಂಡ ಗ್ರೂಪ್-2 ರಿಂದ 2ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಗ್ರೂಪ್-2ರಲ್ಲಿ ಭಾರತ ಈಗಾಗಲೇ ಅಗ್ರಸ್ಥಾನದೊಂದಿಗೆ ಸೆಮಿಫೈನಲ್’ ಗೆ ಲಗ್ಗೆಯಿಟ್ಟಿದೆ. ಭಾರತ ತಂಡ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : T20 World Cup: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮೀಸ್‌ಗೆ, ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಿಕೌಟ್
ಇದನ್ನೂ ಓದಿ : Danushka Gunathilaka : ಅತ್ಯಾಚಾರ ಆರೋಪ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅರೆಸ್ಟ್
NED vs SA NED beats SA by 13 runs SA out from T20 world cup 2022