ಸೋಮವಾರ, ಏಪ್ರಿಲ್ 28, 2025
HomeSportsCricketRavindra Jadeja out : ರವೀಂದ್ರ ಜಡೇಜಾ ಅನ್'ಫಿಟ್, ಬಾಂಗ್ಲಾ ಪ್ರವಾಸದಿಂದ ಔಟ್

Ravindra Jadeja out : ರವೀಂದ್ರ ಜಡೇಜಾ ಅನ್’ಫಿಟ್, ಬಾಂಗ್ಲಾ ಪ್ರವಾಸದಿಂದ ಔಟ್

- Advertisement -

ಬೆಂಗಳೂರು: Ravindra Jadeja out : ಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಆಲ್ರೌಂಡರ್ ರವೀಂದ್ರ ಜಡೇಜ ಇನ್ನೂ ಫಿಟ್ ಆಗದ ಕಾರಣ ಮುಂಬರುವ ಬಾಂಗ್ಲಾದೇಶ ಪ್ರವಾಸದಿಂದ (India tour of Bangladesh) ಹೊರ ಬಿದ್ದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಡಿಸೆಂಬರ್ 4ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ರವೀಂದ್ರ ಜಡೇಜ ಅಲಭ್ಯರಾಗಿದ್ದು, ಅವರ ಬದಲು ಬಂಗಾಳದ ಎಡಗೈ ಸ್ಪಿನ್ ಆಲ್ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದ ಉತ್ತರ ಪ್ರದೇಶದ ಎಡಗೈ ಮಧ್ಯಮ ವೇಗಿ ಯಶ್ ದಯಾಳ್ ಕೂಡ ಗಾಯದ ಕಾರಣ ಬಾಂಗ್ಲಾ ಪ್ರವಾಸದಿಂದ ಹೊರ ಬಿದ್ದಿದ್ದಾರೆ. ಯಶ್ ದಯಾಳ್ ಬದಲು ಮಧ್ಯಪ್ರದೇಶದ ಯುವ ಬಲಗೈ ವೇಗಿ ಕುಲ್ದೀಪ್ ಸೇನ್ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪರಿಷ್ಕೃತ ತಂಡ

ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ಪೀಪ್ ಸೇನ್.

ಭಾರತದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿ

ಡಿಸೆಂಬರ್ 04: ಮೊದಲ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 07: 2ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 10: 3ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 14-18: ಮೊದಲ ಟೆಸ್ಟ್ (ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಛಟ್ಟೊಗ್ರಾಮ್)
ಡಿಸೆಂಬರ್ 22-26: 2ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)

ಬಾಂಗ್ಲಾದೇಶ ‘ಎ’ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ‘ಎ’ ತಂಡ

ಅಭಿಮನ್ಯು ಈಶ್ವರಪ್ (ನಾಯಕ), ರೋಹನ್ ಕಣ್ಣುಮ್ಮಲ್, ಯಶಸ್ವಿ ಜೈಸ್ವಾಲ್, ಯಶ್ ಧುಳ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಸೌರಭ್ ಕುಮಾರ್, ರಾಹುಲ್ ಚಹರ್, ಜಯಂತ್ ಯಾದವ್, ಮುಕೇಸ್ ಕುಮಾರ್, ನವದೀಪ್ ಸೈನಿ, ಅತೀತ್ ಸೇಠ್.

ಬಾಂಗ್ಲಾದೇಶ ‘ಎ’ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತ ‘ಎ’ ತಂಡ

ಅಭಿಮನ್ಯು ಈಶ್ವರಪ್ (ನಾಯಕ), ರೋಹನ್ ಕಣ್ಣುಮ್ಮಲ್, ಯಶಸ್ವಿ ಜೈಸ್ವಾಲ್, ಯಶ್ ಧುಳ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಸೌರಭ್ ಕುಮಾರ್, ರಾಹುಲ್ ಚಹರ್, ಜಯಂತ್ ಯಾದವ್, ಮುಕೇಸ್ ಕುಮಾರ್, ನವದೀಪ್ ಸೈನಿ, ಅತೀತ್ ಸೇಠ್, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಕೆ.ಎಸ್ ಭರತ್ (ವಿಕೆಟ್ ಕೀಪರ್).

ಇದನ್ನೂ ಓದಿ : Pandya on Samson : “ಇದು ನನ್ನ ತಂಡ, ನನ್ನ ನಿರ್ಧಾರ.. ಸ್ಯಾಮ್ಸನ್’ಗೆ ಸಿಗದ ಚಾನ್ಸ್, ಕ್ಯಾಪ್ಟನ್ ಪಾಂಡ್ಯ ಖಡಕ್ ಉತ್ತರ

ಇದನ್ನೂ ಓದಿ : MS Dhoni tennis : ಟೆನಿಸ್ ಡಬಲ್ಸ್ ಚಾಂಪಿಯನ್‌ಷಿಪ್ ಗೆದ್ದ ಕ್ರಿಕೆಟ್ ಮೈದಾನದ ಕೂಲ್ ಕ್ಯಾಪ್ಯನ್ ಎಂ.ಎಸ್ ಧೋನಿ

Ravindra jadeja out indian cricket team India tour of Bangladesh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular