Kamal Haasan : ಖ್ಯಾತ ನಟ ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು

ನಟ ಕಮಲ್‌ ಹಾಸನ್‌ (Kamal Haasan) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದಾ ಸಿನಿಮಾರಂಗದಲ್ಲಿ ಸಕ್ರಿಯವಾಗಿರುವ ಕಮಲ್‌ ಹಾಸನ್‌ಗೆ ಈಗ 68ನೇ ವಯಸ್ಸು. ಯಾವಾಗಲೂ ನಟನೆ ಹಾಗೂ ಸಿನಿಮಾ ನಿರ್ಮಾಣಗಳಲ್ಲಿ ಬ್ಯುಸಿಯಾಗಿದ್ದು, ಇದೀಗ “ತಮಿಳು ಬಿಗ್‌ಬಾಸ್‌ ಸೀಸನ್‌ 6″ನ್ನು ನಡೆಸಿಕೊಡುತ್ತಿದ್ದಾರೆ. ನಿನ್ನೆ ರಾತ್ರಿ ಚೆನ್ನೈನ ಶ್ರೀರಾಮಚಂದ್ರ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಸಾಮಾನ್ಯ ಜ್ವರದಿಂದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಕಮಲ್‌ ಹಾಸನ್‌ ಅವರು ನಿರ್ಮಿಸಿ, ನಟಿಸಿದ “ವಿಕ್ರಮ್‌” ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾ ಸೂಪರ್‌ ಹಿಟ್‌ ಆಗಿ ಸಿನಿಪ್ರೇಕ್ಷಕರ ಮನ ಗೆದ್ದಿದೆ. ಹಾಗಾಗಿ ಈ ಸಿನಿಮಾದ ಮೂಲಕ ಕಮಲ್‌ ಹಾಸನ್‌ ದೊಡ್ಡ ಗೆಲುವನ್ನು ಪಡೆದುಕೊಂಡಿದ್ದರು. ತಮ್ಮ ಅದ್ಭುತ ನಟನೆ ಜೊತೆಗೆ ಒಳ್ಳೆಯ ನಿರ್ಮಾಪಕನಾಗಿಯೂ ಗೆಲುವನ್ನು ಸಾಧಿಸಿದ್ದಾರೆ.ಈಗ ಅವರು “ಇಂಡಿಯನ್‌ 2” ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಹೊತ್ತಲ್ಲೇ ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಅಭಿಮಾನಿಗಳಿಗೆ ಆತಂಕವನ್ನು ಉಂಟು ಮಾಡಿದೆ. ಆದರೆ ಈ ಕುರಿತು ಆತಂಕಕ್ಕೆ ಒಳಾಗಾಗುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಇದನ್ನೂ ಓದಿ : Priyanka Chopra Daughter: ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಛೋಪ್ರಾ; ಎಷ್ಟು ಮುದ್ದಾಗಿದೆ ಅಂದ್ರು ಅಭಿಮಾನಿಗಳು

ಇದನ್ನೂ ಓದಿ : Kantara Daiva Disguise : ಕಾಂತಾರ ಸಿನಿಮಾದ ದೈವದ ವೇಷದಲ್ಲಿ ಮಿಂಚಿದ ಪೊಲೀಸ್‌ ಸಿಬ್ಬಂದಿ

ಇದನ್ನೂ ಓದಿ : Hansika Motwani : ಪ್ರೀ ವೆಡ್ಡಿಂಗ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಹನ್ಸಿಕಾ ಮೋಟ್ವಾನಿ ಜೋಡಿ

ಇದನ್ನೂ ಓದಿ : Vaishnavi Gowda Engagement: ಎಂಗೇಜ್ ಮೆಂಟ್ ಮಾಡಿಕೊಂಡ್ರಾ ನಟಿ ವೈಷ್ಣವಿ ಗೌಡ..? ವೈರಲ್ ಆದ ಫೋಟೋದ ಅಸಲಿಯತ್ತೇನು..

ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲಾಗಿದ್ದು ಸಾಕಷ್ಟು ವದಂತಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಸ್ಟಾರ್‌ ನಟ-ನಟಿಯರು ಆಸ್ಪತ್ರೆಗೆ ದಾಖಲಾದರೆ ಸಾಕಷ್ಟು ಸುದ್ದಿಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ. ಕಮಲ್‌ ಹಾಸನ್‌ ಅರೋಗ್ಯದ ವಿಚಾರದಲ್ಲೂ ಅದೇ ಆಗಿರುತ್ತದೆ. ಆದರೆ ಕಮಲ್‌ ಹಾಸನ್‌ ಅವರು ಆಸ್ಪತ್ರೆಗೆ ತೆರಳಿರುವುದು ಸಾಮಾನ್ಯ ಆರೋಗ್ಯ ತಪಾಸಣೆಗೆ ಅಷ್ಟೇ ಎಂದು ವೈದ್ಯರು ಸ್ಪಷ್ಟನೆ ನೀಡಿರುವುದರಿಂದ ಅಭಿಮಾನಿಗಳು ನಿಟ್ಟುಸಿರನ್ನು ಬಿಟ್ಟಿದ್ದಾರೆ.

Famous actor Kamal Haasan admitted to hospital

Comments are closed.