Agricultural fair : ನವೆಂಬರ್ 3 ರಿಂದ 6 ರವರೆಗೆ ಕೃಷಿಮೇಳ : ರೈತರ ಹಬ್ಬಕ್ಕೆ ಸಿದ್ಧವಾಯ್ತು ಜಿಕೆವಿಕೆ

Agricultural fair : ಸದಾ ರೈತರಿಗೆ ಬೆನ್ನಲುಬಾಗಿ ನಿಲ್ಲೋ ಬೆಂಗಳೂರು ಕೃಷಿ ವಿವಿ ಪ್ರತಿವರ್ಷದಂತೆ ಅದ್ದೂರಿ ಕೃಷಿ‌ಮೇಳ(Agricultural fair)ಕ್ಕೆ ಸಿದ್ಧತೆ ನಡೆಸಿದೆ. ಮಾಹಿತಿ,ಪ್ರದರ್ಶನ ಹಾಗೂ ಸೌಲಭ್ಯಗಳನ್ನು ಪರಿಚಯಿಸುವ ಈ ಕೃಷಿ‌ಮೇಳ ಈ ಭಾರಿ ಮಣ್ಣು ರಹಿತ ಕೃಷಿ ಪ್ರಯೋಗಗಳನ್ನು ಪರಿಚಯಿಸುವ ಮೂಲಕ ರೈತರಿ(Agricultural fair)ಗೆ ನೆರವಾಗಲು ಭರ್ಜರಿ ಸಿದ್ದತೆ ನಡೆಸಿದೆ.

ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರಿನ ಜಿಕೆವಿಕೆ ನವೆಂಬರ್ 3 ರಿಂದ 6 ರವರೆಗೆ ಕೃಷಿ ಮೇಳ(Agricultural fair) ಆಯೋಜಿಸುತ್ತಿದೆ. ಕೃಷಿ ನವ್ಯೋದ್ಯಮ ವಾಕ್ಯದಡಿಯಲ್ಲಿ ಜಿಕೆವಿಕೆ ಕೃಷಿ ಮೇಳಕ್ಕೆ ಸಿದ್ಧತೆ ಆರಂಭಿಸಿದೆ.

ಈ ವರ್ಷದ ಕೃಷಿ ಮೇಳದಲ್ಲಿ ಭತ್ತ ,ಜೋಳ, ಎಳ್ಳು ,ಮೇವಿನ ಜೋಳ ಸೇರಿದಂತೆ ಅಂದಾಜು 9 ಹೊಸ ತಳಿಯ ಬೆಳೆಗಳನ್ನು ಪರಿಚಯಿಸಲು ಈಗಾಗಲೇ ಜಿಕೆವಿಕೆ ಸಿದ್ಧವಾಗಿದೆ.

ಇದನ್ನೂ ಓದಿ : Nandini Milk Price Hike : ನಂದಿನಿ ಹಾಲಿನ ದರ 3 ರೂಪಾಯಿ ಏರಿಕೆ ?

ಇದಲ್ಲದೇ ನೂತನವಾದ 38 ಕೃಷಿ ಸಂಬಂಧಿತ ಟೆಕ್ನಾಲಜಿಗಳನ್ನು ಕೂಡಾ ರೈತರಿಗೆ ಪರಿಚಯಿಸಲು ಕೃಷಿ ತಜ್ಞರು ಸಜ್ಜಾಗಿದ್ದಾರೆ. ರಾಜ್ಯದ ಹಲವು ಕೃಷಿ ಸಾಧಕರನ್ನು ಸನ್ಮಾನಿಸಲು ಜಿಕೆವಿಕೆ ಈಗಾಗಲೇ ಪ್ಲ್ಯಾನ್ ಮಾಡಿದೆ.

ಕೃಷಿ‌ಮೇಳದ ಪ್ರಮುಖ ಆಕರ್ಷಣೆ 697 ಸ್ಟಾಲ್ ಗಳಾಗಿದ್ದು, ಇದರಲ್ಲಿ ಬೆಳೆಗಳಿಗೆ ಬೇಕಾದ ಗೊಬ್ಬರ, ಬೀಜಗಳು, ಕರಕುಶಲ ಸಾಮಾಗ್ರಿಗಳು,ಜಾನುವಾರುಗಳು, ಆಹಾರ ಪದಾರ್ಥಗಳು ಕೂಡ ಸಿಗಲಿದೆ.

ಇದನ್ನೂ ಓದಿ : PM Kisan Samman Nidhi : ಪತಿ ಮತ್ತು ಪತ್ನಿ ಇಬ್ಬರೂ ವರ್ಷಕ್ಕೆ 6,000 ರೂ. ಕ್ಲೈಮ್ ಮಾಡಿಕೊಳ್ಳಬಹುದಾ; ಪಿಎಂ ಕಿಸಾನ್ ಯೋಜನೆಯ ನಿಯಮ ಹೇಳುವುದಾದರೂ ಏನು…

ಈ ಭಾರಿಯ ಕೃಷಿ ಮೇಳದ ಪ್ರಮುಖ ಆಕರ್ಷಣೆ ಎಂದರೇ ಮಣ್ಣು ರಹಿತ ಬೆಳೆ ಬೆಳೆಯುವಿಕೆ. ಜಿಕೆವಿಕೆ ತಮ್ಮ ವ್ಯಾಪ್ತಿಯ ರೈತರಿಗೆ ಮಣ್ಣು ರಹಿತವಾಗಿ ಬೆಳೆ ಬೆಳೆಯೋದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಡಲಿದೆ.

ಇದನ್ನೂ ಓದಿ : Pm kisan : ರೈತರಿಗೆ ದೀಪಾವಳಿ ಗಿಫ್ಟ್ ಕೊಟ್ಟ ಮೋದಿ : ಪಿಎಂ ಕಿಸಾನ್ 12 ನೇ ಕಂತು ಬಿಡುಗಡೆ

ಸಾಮಾನ್ಯವಾಗಿ ಬೆಳೆಗಳನ್ನು ಬೆಳೆಯಲು ಫಲವತ್ತಾದ ಮಣ್ಣು ಮುಖ್ಯ. ಆದರೆ ಜಿಕೆವಿಕೆ ತಜ್ಞರು, ಜಲ್ಲಿಕಲ್ಲು,ಪೀಚ್ ಪಾಚಿ,ಗರಗಸದ ಧೂಳು,ಕಾಯಿರ್ ಧೂಳು,ತೆಂಗಿನ ಕಾಯಿ ನಾರು, ರಾಕ್ ಪೂಲ್ ನಂತಹ ಪದಾರ್ಥಗಳನ್ನು ಬಳಸಿಕೊಂಡು ಮತ್ತು ನೀರು ಬಳಸಿಕೊಂಡು ಬೆಳೆ ಬೆಳೆಯೋದು ಎಂಬುದನ್ನು ರೈತರಿಗೆ ಕೃಷಿಮೇಳ ತೋರಿಸಿಕೊಡಲಿದೆ.

ಈ ಭಾರಿ ಕೃಷಿ ಮೇಳದಲ್ಲಿ 15 ಲಕ್ಷಕ್ಕೂ ಅಧಿಕ ರೈತರು ಪಾಲ್ಗೊಳ್ಳುವ ನೀರಿಕ್ಷೆ ಜಿಕೆವಿಕೆಯವರಿಗಿದ್ದು, ಇದಕ್ಕಾಗಿ ಭರದ ಸಿದ್ಧತೆ ಕೂಡ ನಡೆದಿದೆ.ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಈ ಕೃಷಿಕರ ಹಬ್ಬ ಮತ್ತೆ ಅದ್ದೂರಿಯಾಗಿ ನಡೀತಿರೋದು ಕೃಷಿಕರ ಸಂಭ್ರಮಕ್ಕೆ ಕಾರಣವಾಗಿದೆ.

Introducing information, demonstration and facilities, this Krishi Mela has made great preparations to help the farmers by introducing these massive soilless farming experiments.

Comments are closed.