Namma Yatri App : ಓಲಾ, ಊಬರ್ ಕಾಟಕ್ಕೆ ಸಿಗಲಿದೆ ಮುಕ್ತಿ : ರಸ್ತೆಗಿಳಿಯಲಿದೆ “ನಮ್ಮ ಯಾತ್ರಿ”

ಬೆಂಗಳೂರು : (Namma Yatri App)ರಾಜ್ಯದ ರಾಜ್ಯಧಾನಿ ಬೆಂಗಳೂರಿನಲ್ಲಿ ಅಟೋಗಳು ಸುಲಿಗೆ ಮಾಡುತ್ತೇ ಅನ್ನೋ ಮಾತಿತ್ತು. ಆದರೆ ಇತ್ತೀಚಿಗೆ ಈ ಮಾತಿಗೆ ಓಲಾ ಊಬರ್ ಗಳೇ ಸಾಕ್ಷಿ ಎಂಬಂತಾಗಿತ್ತು. ಈಗ ಓಲಾ ಮತ್ತು ಊಬರ್ ಗೆ ಸೆಡ್ಡು ಹೊಡೆಯಲು ಸಿಲಿಕಾನ್ ಸಿಟಿಯ ಅಟೋಚಾಲಕರೇ ತಮ್ಮದೊಂದು ಆ್ಯಪ್ ಸಿದ್ಧಪಡಿಸಿದ್ದು ಕನ್ನಡ ರಾಜ್ಯೋತ್ಸವದಂದು “ನಮ್ಮ ಯಾತ್ರಿ” ಎಂಬ ಆ್ಯಪ್ ಸಿದ್ಧಪಡಿಸಿ ಬಳಕೆಗೆ ತರಲಿದ್ದಾರೆ.

ನಗರದಲ್ಲಿ ಸಾವಿರಾರು ಅಟೋ ಚಾಲಕರು ಓಲಾ ಹಾಗೂ ಊಬರ್ ನಂಬಿ ಬದುಕು ಕಟ್ಟಿಕೊಂಡಿದ್ದರು. ಆದರೆ ಓಲಾ ಊಬರ್ ಕಂಪನಿಗಳು ಜನರಿಂದ ಸುಲಿಗೆ ಮಾಡಿ ಅದನ್ನು ಅಟೋ ಚಾಲಕರಿಗೂ ನೀಡದೇ ತಮಗೆ ಲಾಭ ಮಾಡಿಕೊಳ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿವಾದ ಕೊನೆಗೆ ಸರ್ಕಾರದ ಹಂತವನ್ನು ದಾಟಿ ಹೈಕೋರ್ಟ್ ವರೆಗೂ ತಲುಪಿತ್ತು. ಈಗ ಓಲಾ ಊಬರ್ ಸಹವಾಸವೇ ಬೇಡ ಎಂಬ ಕಾರಣಕ್ಕೆ ಸಿಡಿದೆದ್ದ ಬೆಂಗಳೂರಿನ ಆಟೋ ಚಾಲಕರು ತಮ್ಮದೇ ಒಂದು ಟೀಂ ರಚಿಸಿಕೊಂಡು ಆ್ಯಪ್ ಸಿದ್ದಪಡಿಸಿ ಜನರಿಗೆ ಸರ್ವೀಸ್ ನೀಡಲು ಸಿದ್ದರಾಗಿದ್ದಾರೆ.

“ನಮ್ಮ ಯಾತ್ರಿ” ಎಂಬ ಆ್ಯಪ್ ಸಿದ್ಧಪಡಿಸಲಾಗಿದ್ದು ಇದರ ಮೂಲಕ ಸಾರಿಗೆ ಇಲಾಖೆ ನಿಗದಿಪಡಿಸಿದ ದರಕ್ಕೆ ಅಟೋ ಸೇವೆ ನೀಡಲು ಅಟೋ ಚಾಲಕರ ಸಂಘ ನಿರ್ಧರಿಸಿದೆ. ಸದ್ಯಕ್ಕೆ “ನಮ್ಮ ಯಾತ್ರಿ” ಆ್ಯಪ್ ಟೆಸ್ಟಿಂಗ್ ಹಂತದಲ್ಲಿದ್ದು, ನಾಳೆಯಿಂದ ಪ್ರಯಾಣಿಕರಿಗೆ ಸೇವೆಗೆ ಲಭ್ಯವಾಗಲಿದೆ. “ನಮ್ಮ ಯಾತ್ರಿ” ಆ್ಯಪ್ ಪ್ರಕಾರ ಪ್ರತಿ ಎರಡು ಕಿಲೋಮೀಟರ್ ಗೆ 30 ರೂಪಾಯಿ ಹಾಗೂ ಅದಾದ ಬಳಿಕ ಪ್ರತಿ ಕಿಲೋಮೀಟರ್ ಗೆ 15 ರೂಪಾಯಿ ಚಾರ್ಜ್ ಫಿಕ್ಸ್ ಮಾಡಿದೆ.

ಇದನ್ನೂ ಓದಿ : Karnatak Rains : ಕರ್ನಾಟಕದಲ್ಲಿ ‌ನಾಳೆಯಿಂದ ಬಾರೀ ಮಳೆ  ; ಯೆಲ್ಲೋ  ಅಲರ್ಟ್​ ಘೋಷಣೆ

ಇದನ್ನೂ ಓದಿ : Karnataka Rajyotsava : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ, ಬಾವುಟ ; ಸಂಪೂರ್ಣ ಮಾಹಿತಿ

ಇದನ್ನೂ ಓದಿ : Kannada Rajyotsava 2022 : ಪುನೀತ್‌ ರಾಜ್‌ಕುಮಾರ್‌ಗೆ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ

ಅಲ್ಲದೇ ಅಟೋ ಚಾಲಕರು 10 ರೂಪಾಯಿ ಮಾತ್ರ ಸರ್ವೀಸ್ ಚಾರ್ಜ್ ಪಡೆಯಲಿದ್ದಾರೆ.ಇನ್ನು ಈ ಅ್ಯಪ್ ನಲ್ಲಿ ದುಪ್ಪಟ್ಟು ದರ ಪಡೆಯೋದನ್ನು ತಡೆಯಲು ಡ್ರೈವರ್ ಗಳಲ್ಲಿ ಆಯ್ಕೆ ಇರಲಿದೆ. ಈಗಾಗಲೇ ಸೃಷ್ಟಿಯಾದ ವಿವಾದಗಳಿಂದ ಊಬರ್ ತನ್ನ ಸೇವಾ ದರದಲ್ಲಿ ಕೊಂಚ ಇಳಿಕೆ ಮಾಡಿಕೊಂಡಿದೆಯಾದರೂ ಓಲಾ ಯಾವುದೇ ರೀತಿಯಲ್ಲೂ ದರ ಇಳಿಸಿಲ್ಲ.ನಾಳೆಯಿಂದ “ನಮ್ಮ ಯಾತ್ರಿ” ಕೇವಲ ಪ್ರಯೋಗಾರ್ಥವಾಗಿ ಬಳಕೆಗೆ ಸಿಗಲಿದ್ದು, ಜನರ ರೆಸ್ಪಾನ್ಸ್ ಹೇಗಿದೆ ಅನ್ನೋದರ ಮೇಲೆ ಆ್ಯಪ್ ಭವಿಷ್ಯ ನಿರ್ಧಾರವಾಗಲಿದೆ.

Ola, Uber will get relief: “Namma Yatri App ” will hit the road

Comments are closed.