Grow Tomatoes : ನಿಮ್ಮ ಕೈತೋಟದಲ್ಲಿ ಜ್ಯೂಸಿ ಟೊಮೆಟೋ ಬೆಳೆಯುವುದು ಹೇಗೆ ಗೊತ್ತಾ?

ನಿಮ್ಮ ತರಕಾರಿಗಳ(Vegetables) ತೋಟಕ್ಕೆ(Garden) ಕಿರೀಟವೆಂದರೆ ಅದು ಕೆಂಪಾದ ಜ್ಯೂಸಿ ಟೊಮೆಟೋಗಳು (Grow Tomatoes). ಹೊಸದಾಗಿ ತರಕಾರಿಗಳ ಕೈತೊಟ ಮಾಡಲು ಆರಂಭಿಸಿದವರಿಗೆ ಸ್ವಲ್ಪ ಕಷ್ಟವಾಗಬಹುದು. ಪ್ರತಿಯೊಬ್ಬ ಟೊಮೆಟೋ ಪ್ರಿಯರಿಗೂ ಉತ್ಕೃಷ್ಟ ಸಿಹಿ, ಹುಳಿ ಮತ್ತು ಪರಿಮಳದ ಹಣ್ಣುಗಳನ್ನು ಬೆಳೆಯಬೇಕೆಂಬುದೇ ದೊಡ್ಡ ಕನಸಾಗಿರುತ್ತದೆ.

ದುರಂತವೇನೆಂದರೆ ಕೆಲವು ತರಕಾರಿಗಳಿಗಿಂತ ಟೊಮೆಟೋ ಬೆಳೆಯುವುದು ಸ್ವಲ್ಪ ಕಷ್ಟವೇ. ಒಳ್ಳೆಯ ರುಚಿಯಾದ ಟೊಮೆಟೋ ಬೆಳೆಯುವ ಉಪಾಯವೆಂದರೆ ಉತ್ತಮ ಜಾತಿಯ ಟೊಮೆಟೋ ಬೀಜಗಳನ್ನು ಆರಿಸುವುದು, ಸರಿಯಾದ ಸಮಯಕ್ಕೆ ಸಸಿಗಳನ್ನು ಬೆಳೆಯಲು ಪ್ರಾರಂಭಿಸುವುದು ಮತ್ತು ರೋಗಗಳು ತಗಲುವ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.

ನಾವು ಇಲ್ಲಿ ನಿಮಗಾಗಿ ಟೊಮೆಟೋ ಬೆಳೆಯುಲು (Grow Tomatoes) ಸಹಾಯವಾಗುವ ಕೆಲವು ಟಿಪ್ಸ್‌ಗಳನ್ನು ಹೇಳುತ್ತಿದ್ದೇವೆ. ಅವುಗಳನ್ನು ಪಾಲಿಸಿ ಉತ್ತಮ ಇಳುವರಿ ಪಡೆದುಕೊಳ್ಳಿ.

ಟೊಮೆಟೋ ಬೀಜಗಳನ್ನು ಹಾಕುವುದು:
ನೀವು ಬೀಜದಿಂದ ಟೊಮೆಟೋ ಬೆಳೆಯಬೇಕೆಂದುಕೊಂಡಿದ್ದರೆ ಮೊಳಕೆ ಬರಲು ಸಾಕಷ್ಟು ಜಾಗವನ್ನು ನೀಡಿ. ಒಂದು ಚಿಕ್ಕ ಪಾಟ್‌ ಅಥವಾ ಸಸಿಗಳನ್ನು ಮಾಡುವ ಕವರ್‌ಗೆ ಒಂದೇ ಬೀಜಗಳನ್ನು ಹಾಕುವುದು ಅವಶ್ಯಕ. ಚಿಕ್ಕದಾದ ಮತ್ತು ದುರ್ಬಲಾದ ಮೊಳಕೆಗಳನ್ನು ತೆಗೆದುಹಾಕಿ. ಅವುಗಳನ್ನು ಗಾಳಿಯಾಡುವ ಜಾಗದಲ್ಲಿ ಇಡಿ. ಮೊದಲ ನಿಜವಾದ ಎಲೆಗಳು ಬಂದ ನಂತರ ಅವುಗಳನ್ನು 4 ಇಂಚಿನ ದೊಡ್ಡ ಪಾಟ್‌ಗಳಿಗೆ ವರ್ಗಾಯಿಸಿ.

ಸರಿಯಾದ ಪ್ರಮಾಣದ ಸೂರ್ಯನ ಶಾಖ ಸಸಿಗಳಿಗೆ ಒದಗಿಸುವುದು :
ಮೊಳಕೆಯೊಡೆಯುವ ಟೊಮೆಟೋ ಸಸಿಗಳಿಗೆ ಸರಿಯಾದ ಪ್ರಮಾಣದ ಸೂರ್ಯನ ಶಾಖದ ಅವಶ್ಯಕತೆ ಇದೆ. ಅದಕ್ಕಾಗಿ ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಇಡಿ.

ಮಲ್ಚಿಂಗ್‌:
ಮಲ್ಚಿಂಗ್‌ ಎಂದರೆ ಸಸಿಗಳ ಸುತ್ತ ಎಲೆ ಅಥವಾ ಹುಲ್ಲುಗಳಿಂದ ಮುಚ್ಚುವುದು. ಹೀಗೆ ಮಾಡುವುದುರಿಂದ ನೀರು ಆವಿಯಾಗದಂತೆ ಹಿಡಿದಿಟ್ಟುಕೊಳ್ಳಲು ಸಹಾಯವಾಗುವುದು. ಸಸ್ಯಗಳಿಗೆ ಮಣ್ಣಿನಿಂದ ಹರಡುವ ರೋಗಗಳನ್ನು ತಡೆಯಬಹುದು.

ಕತ್ತರಿಸುವಿಕೆ :
ಎರಡು ಶಾಖೆಗಳ ಸಂಧಿಯಲ್ಲಿ ರೂಪುಗೊಳ್ಳುವ ಚಿಕ್ಕ ಎಲೆ(ಸಕ್ಕರ್ಗ) ಗಳನ್ನು ತೆಗೆದುಹಾಕಿ. ಅವು ಹಣ್ಣುನ್ನು ಉತ್ಪಾದಿಸುವುದಿಲ್ಲ ಬದಲಿಗೆ, ಸಸ್ಯದ ಶಕ್ತಿ ಕಡಿಮೆ ಮಾಡುತ್ತದೆ. ಹಣ್ಣುಗಳಿಗೂ ಸೂರ್ಯನ ಶಾಖದ ಅವಶ್ಯಕತೆ ಇರುತ್ತದೆ, ಅದಕ್ಕಾಗಿ ಕೆಲವು ಎಲೆಗಳನ್ನು ತೆಗೆದುಹಾಕಬಹುದು. ಆದರೆ ಎಚ್ಚರಿಕೆಯಿಂದ ಎಲೆಗಳನ್ನು ತೆಗೆದು ಹಾಕುವುದು ಉತ್ತಮ ಏಕೆಂದರೆ ಎಲೆಗಳು ಹಣ್ಣುಗಳಿಗೆ ಪರಿಮಳ ಮತ್ತು ಸಿಹಿಯನ್ನು ಒದಗಿಸುತ್ತವೆ.

ನೀರು ಪೂರೈಕೆ :
ಹಣ್ಣುಗಳು ಪಕ್ವವಾಗುತ್ತಿರುವಾಗ ಗಿಡಗಳಿಗೆ ಆಗಾಗ ನೀರು ಹಾಕುವುದು ಅವಶ್ಯಕ. ಆದರೆ ನಿಯಮಿತವಾಗಿ ಮತ್ತು ಅತಿಯಾಗದಂತೆ ನೀರುಣಿಸಿ. ಗಿಡಗಳಿಗೆ ನೀರುಣಿಸುವ ಸರಳ ವಿಧಾನವೆಂದರೆ ನಿಮ್ಮ ಸಸ್ಯಗಳು ಬಹುಪಾಲು ಒಣಗಿದಂತೆ ಕಂಡುಬಂದರೆ ಅದಕ್ಕೆ ನೀರಿನ ಅವಶ್ಯಕತೆ ಇದೆ ಎಂದರ್ಥ.

ಇದನ್ನೂ ಓದಿ : Tamarind Leaves Benefits: ಕೂದಲ ಸಂರಕ್ಷಣೆಗೆ ಹುಣಸೆ ಎಲೆ; ಹುಣಸೆ ಎಲೆಯ ಅದ್ಭುತ ಪ್ರಯೋಜನಗಳು ಏನು ಗೊತ್ತಾ!

ಇದನ್ನೂ ಓದಿ : Solution for disease Of Coconut Tree : ತೆಂಗಿಗೆ ಅಣಬೆ ರೋಗ ಬಂದರೆ ಏನು ಮಾಡಬೇಕು? ಇಲ್ಲಿದೆ ಪರಿಹಾರೋಪಾಯ

(Grow Tomatoes how to grow tomatoes in your small garden)

Comments are closed.