Ghulam Nabi Azad new party : ಹೊಸ ಪಕ್ಷ ಘೋಷಿಸಿದ ಗುಲಾಂ ನಬಿ ಆಜಾದ್

ನವದೆಹಲಿ : (Ghulam Nabi Azad new party) ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಅವರ ಮುಂದಿನ ನಡೆ ಬಗ್ಗೆ ಭಾರೀ ಚರ್ಚೆ ಗಳು ನಡೆದಿವೆ. ಈ ನಡುವಲ್ಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ‌ ಎಂಬ ಮಾತುಗಳು ಕೇಳಿಬಂದಿದ್ದವು. .(Former Congress leader Ghulam Nabi Azad) ಆದರೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ದಿನವೇ ಜಮ್ಮು-ಕಾಶ್ಮೀರದಲ್ಲಿ ಹೊಸ ಪಕ್ಷ ರಚಿಸುವ ನಿರ್ಧಾರ ಪ್ರಕಟಿಸಿದ್ದರು. ಹೊಸ ಪಕ್ಷ ಕಟ್ಟಲು ನಿರ್ಧರಿಸಿರುವ ಗುಲಾಂ ನಬಿ ಆಜಾದ್ 14 ದಿನಗಳಲ್ಲಿ ತಮ್ಮ ಹೊಸ ಪಕ್ಷವನ್ನು ಘೋಷಿಸಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ತಾಜ್ ಮೊಹಿಯುದ್ದೀನ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ತಮ್ಮ ತವರು ನೆಲದಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. “ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುತ್ತೇನೆ. ನನ್ನ ರಾಜ್ಯದಲ್ಲಿ ನನ್ನದೇ ಪಕ್ಷ ಕಟ್ಟುತ್ತೇನೆ. ನಂತರ ರಾಷ್ಟ್ರೀಯ ರಾಜಕಾರಣದ ಬಗ್ಗೆ ಪರಿಶೀಲಿಸುತ್ತೇನೆ ಎಂದು ನಬಿ ಆಜಾದ್ ಹೇಳಿದ್ದಾರೆ. ಈ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ. 14ರೊಳಗೆ ಕಾಂಗ್ರೆಸ್‌ನ ಮಾಜಿ ನಾಯಕ ಹೊಸ ಪಕ್ಷವನ್ನು ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಮೊಹಿಯುದ್ದೀನ್, ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಸ್ವಂತ ಪಕ್ಷ ರಚಿಸುತ್ತೇವೆ. ಮುಂದಿನ 14 ದಿನಗಳಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ. ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸುತ್ತೇವೆ. ನಾವು ಯಾವುದೇ ಪಕ್ಷದೊಂದಿಗೆ ವಿಲೀನ ಮಾಡುವುದಿಲ್ಲ. ಆದರೆ ನಮಗೆ ಸ್ಥಾನ ಬೇಕಿದ್ದರೆ ಮಾತ್ರ ಎನ್‌ಸಿ ಅಥವಾ ಪಿಡಿಪಿ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಾಲ್ಫ್​​ ಮೈದಾನದಲ್ಲಿ ಬಗೆಹರಿಯದ ಚಿರತೆ ಸಮಸ್ಯೆ : ನನ್ನ ರಾಜೀನಾಮೆಯಿಂದ ಚಿರತೆ ಸಿಗುತ್ತೆ ಎಂದರೆ ನಾನು ಸಿದ್ಧ : ಸಚಿವ ಕತ್ತಿ

ಇದನ್ನೂ ಓದಿ: ಗೋವಾಕ್ಕೆ ಪಲಾಯನ ಮಾಡಿದ್ರಾ ಮುರುಘಾ ಶರಣರು : ನಂಬರ್​ಪ್ಲೇಟ್​ ಇಲ್ಲದ ಕಾರಿನಿಂದ ಎಸ್ಕೇಪ್

ಕಾಂಗ್ರೆಸ್‌ನಲ್ಲಿ ಗುಲಾಂ ನಬಿ ಆಜಾದ್ ಅವರ ಪಾತ್ರವನ್ನು ಶ್ಲಾಘಿಸಿದ ಮಾಜಿ ಸಚಿವ ಮೊಹಿಯುದ್ದೀನ್, “ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದ ಇಂದಿನ ನಾಯಕರವರೆಗೂ ಆಜಾದ್ ಸಾಹಿಬ್ ಕಾಂಗ್ರೆಸ್‌ನಲ್ಲಿ ಬಹಳ ನೆಚ್ಚಿನವರಾಗಿದ್ದರು. ಕಾಂಗ್ರೆಸ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋನಿಯಾ ಗಾಂಧಿ ಅವರಿಗೆ ಭಾರೀ ಬೆಂಬಲ ನೀಡಿದ ಪ್ರಮುಖ ನಾಯಕ ಎಂದು ಹೇಳಿದರು.

Former Congress leader Ghulam Nabi Azad will announce a new party within 14 days

Comments are closed.