Honda Dio Sports : ಹೊಸ ಅಪ್ಡೇಟ್‌ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಹೊಂಡಾ ಡಿಯೋ ಸ್ಪೋರ್ಟ್ಸ್‌! ಬೆಲೆ ಜಸ್ಟ್‌ ರೂ. 68,317 !

ಹೋಂಡಾ(Honda) ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತದಲ್ಲಿ ಹೊಸ ಹೋಂಡಾ ಡಿಯೋ ಸ್ಪೋರ್ಟ್ಸ್ ಸ್ಕೂಟರ್ ( Honda Dio Sports Scooter) ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ. ಆದರೆ ಇದು ಮಾರುಕಟ್ಟೆಯಲ್ಲಿ ಲಿಮಿಟೆಡ್‌ ಎಡಿಷನ್‌ ಆಗಿದೆ. ಸ್ಟ್ಯಾಂಡರ್ಡ್ ರೂಪಾಂತರವು 68,317 ರೂ (ಎಕ್ಸ್ ಶೋ ರೂಂ) ಆಗಿದ್ದರೆ, ಡಿಲಕ್ಸ್ ರೂಪಾಂತರವು ರೂ 73,317 (ಎಕ್ಸ್ ಶೋ ರೂಂ) ನಲ್ಲಿ ಮಾರಾಟವಾಗಲಿದೆ. ಹೊಸ ಡಿಯೋ ಸ್ಪೋರ್ಟ್ಸ್ ತನ್ನ ಅತ್ಯಾಕರ್ಷಕ ಗ್ರಾಫಿಕ್ಸ್ ಮತ್ತು ಎರಡು ಹೊಸ ಬಣ್ಣದ ಸ್ಕೀಮ್‌ಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ ಸ್ಟ್ರಾಂಷಿಯಂ ಸಿಲ್ವರ್ ಮೆಟಾಲಿಕ್ ವಿತ್ ಬ್ಲ್ಯಾಕ್ ಮತ್ತು ಸ್ಪೋರ್ಟ್ಸ್ ರೆಡ್ ವಿತ್ ಬ್ಲ್ಯಾಕ್. ಈ ಎರಡು ಬಣ್ಣಗಳು ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ರೂಪಾಂತರಗಳ ಸ್ಕೂಟರ್‌ನಲ್ಲಿ ಕಾಣಬಹುದಾಗಿದೆ.

ಹೊಸ ಹೋಂಡಾ ಡಿಯೊ ಸ್ಪೋರ್ಟ್ಸ್ ಸ್ಕೂಟರ್‌ ಅನ್ನು ಯುವಕರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ. ಹೊಸ ಬಣ್ಣಗಳ ಹೊರತಾಗಿ ಸ್ಕೂಟರ್ ಕೆಂಪು ಹಿಂಭಾಗದ ಕುಶನ್ ಸ್ಪ್ರಿಂಗ್ ಅನ್ನು ಸಹ ಪಡೆದುಕೊಂಡಿದೆ. ಸ್ಟ್ಯಾಂಡರ್ಡ್ ಮತ್ತು ಡೀಲಕ್ಸ್ ರೂಪಾಂತರಗಳು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡೀಲಕ್ಸ್ ರೂಪಾಂತರವು ಹೆಚ್ಚುವರಿಯಾಗಿ ಸ್ಪೋರ್ಟಿ ಅಲಾಯ್‌ ಅನ್ನು ಪಡೆದುಕೊಂಡಿದೆ . ಹೋಂಡಾ ಡಿಯೊ ಸ್ಪೋರ್ಟ್ಸ್ ಅದರ ಹಿಂದಿನ ವೈಶಿಷ್ಟ್ಯಗಳಿಂದ ಮುಂಭಾಗದ ಪಾಕೆಟ್‌ನಂತಹ ವೈಶಿಷ್ಟ್ಯವನ್ನು ಹಾಗೆ ಉಳಿಸಿಕೊಂಡಿದೆ. ಇದರಿಂದ ಸವಾರರಿಗೆ ಉತ್ತಮ ಅನುಭವನೀಡುತ್ತದೆ.

ಮೋಟೋ-ಸ್ಕೂಟರ್ ಡಿಎನ್‌ಎಯನ್ನು ಹೊಂದಿರುವ ಹೋಂಡಾ ಡಿಯೊ, ಹೋಂಡಾದಿಂದ 110cc PGM-FI ಎಂಜಿನ್‌ನೊಂದಿಗೆ ಸ್ಮಾರ್ಟ್ ಪವರ್ (eSP) ಜೊತೆಗೆ ಹೆಚ್ಚಿಸಲ್ಪಟ್ಟಿದೆ. ಜೊತೆಗೆ ಟೆಲಿಸ್ಕೋಪಿಂಗ್ ಸಸ್ಪೆನ್ಷನ್, ಇಂಟಿಗ್ರೇಟೆಡ್ ಡ್ಯುಯಲ್ ಫಂಕ್ಷನ್ ಸ್ವಿಚ್, ಬಾಹ್ಯ ವೈಶಿಷ್ಟ್ಯಗಳಂತಹ ಪ್ರಾಯೋಗಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇಂಧನ ಮುಚ್ಚಳ, ಇಂಟಿಗ್ರೇಟೆಡ್‌ ಡ್ಯೂಯಲ್‌ ಫಂಕ್ಷನಲ್‌ ಸ್ವಿಚ್ ಮತ್ತು ಸೈಡ್ ಸ್ಟ್ಯಾಂಡ್ ಸೂಚಕ (ಎಂಜಿನ್ ಕಟ್-ಆಫ್) ಅಳವಡಿಸಿಕೊಂಡಿದೆ. ಡಿಯೋ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚಿನ ಇಂಧನ ದಕ್ಷತೆಗಾಗಿ 3 ಹಂತದ ಇಕೋ ಇಂಡಿಕೇಟರ್ ಮತ್ತು ಕಾಂಬಿ-ಬ್ರೇಕ್ ಸಿಸ್ಟಮ್ (CBS) ಸಮೀಕರಣ ಮತ್ತು ಮೂರು ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾಗಿದೆ ಹಿಂಭಾಗದ ಸಸ್ಪೆನ್ಷನ್‌ ಒಳಗೊಂಡಿದೆ.

ಇದನ್ನೂ ಓದಿ : Pingali Venkayya : ತ್ರಿವರ್ಣ ಧ್ವಜದ ವಿನ್ಯಾಸಗಾರ ಪಿಂಗಲಿ ವೆಂಕಯ್ಯ ಯಾರು ಗೊತ್ತಾ?

ಇದನ್ನೂ ಓದಿ : New Maruti Suzuki Alto Launch : ಹೊಸ ಆಲ್ಟೋ ಗಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ! ಆಗಸ್ಟ್‌ 18ಕ್ಕೆ ಬಿಡುಗಡೆ ಸಾಧ್ಯತೆ

(Honda Dio Sports limited edition scooter launched in India)

Comments are closed.