India Vs West Indies 3rd T20 : ಕೆರಿಬಿಯನ್ ನಾಡಿನಲ್ಲಿ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಪೋಸ್ಟರ್

ಸೇಂಟ್ ಕಿಟ್ಸ್: ( India Vs West Indies 3rd T20 ) ಜಗತ್ತಿನ ಯಾವುದೇ ಮೂಲೆಗೆ ಹೋದ್ರೂ, ಅಲ್ಲೊಬ್ಬ ಕನ್ನಡಿಗ ಇದ್ದೇ ಇರ್ತಾನೆ. ಭಾರತ ಕ್ರಿಕೆಟ್ ತಂಡದ ಪ್ರಪಂಚದ ಯಾವ್ದೇ ಮೈದಾನದಲ್ಲಿ ಕ್ರಿಕೆಟ್ ಪಂದ್ಯವಾಡ್ಲಿ, ತಂಡವನ್ನು ಬೆಂಬಲಿಸೋದಕ್ಕೆ ಕನ್ನಡಿಗರು ಬಂದೇ ಬರ್ತಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲೂ ಇದು ಸಾಬೀತಾಗಿದೆ.

ಸೇಂಟ್ ಕಿಟ್ಸ್’ನ ವಾರ್ನರ್ ಪಾರ್ಕ್ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20 (India Vs West Indies T20 Series) ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕನ್ನಡ ಪೋಸ್ಟರ್ ಒಂದು ಕಾಣಿಸಿದೆ. “ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಜೈ ಕರ್ನಾಟಕ” ಎಂದು ಬರೆದಿದ್ದ ಪೋಸ್ಟರ್ ಅನ್ನು ಕರ್ನಾಟಕದ ಕ್ರಿಕೆಟ್ ಅಭಿಮಾನಿಯೊಬ್ಬರು ಪ್ರದರ್ಶಿಸಿದ್ದಾರೆ. ಸಪ್ತಸಾಗರದಾಚೆಯ ಕೆರಬಿಯನ್ ನಾಡಿನಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಕನ್ನಡ ಪೋಸ್ಟರ್ ರಾರಾಜಿಸಿರುವುದನ್ನು ಕಂಡು ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.

ವಾರ್ನರ್ ಪಾರ್ಕ್ ಮೈದಾನದಲ್ಲಿ ಮಂಗಳವಾರ ತಡರಾತ್ರಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ 7 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್, ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ವಿಂಡೀಸ್ ಪರ ಓಪನರ್ ಕೈಲ್ ಮೇಯರ್ಸ್ 50 ಎಸೆತಗಳಲ್ಲಿ ಸ್ಫೋಟಕ 73 ರನ್ ಬಾರಿಸಿದರು.

ಗುರಿ ಬೆನ್ನಟ್ಟಿದ್ದ ರೋಹಿತ್ ಶರ್ಮಾ ಬಳಗ 19 ಓವರ್’ಗಳಲ್ಲಿ 3 ವಿಕೆಟ್ ಕಳೆದುಕೊಂಡು 165 ರನ್ ಗಳಿಸುವ ಮೂಲಕ ಸುಲಭ ಜಯ ದಾಖಲಿಸಿತು. ಮತ್ತೆ ಆರಂಭಿಕನಾಗಿ ಕಣಕ್ಕಿಳಿದ ಮುಂಬೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಕೇವಲ 44 ಎಸೆತಗಳಲ್ಲಿ 88 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ 76 ರನ್ ಸಿಡಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಅಮೋಘ ಫಾರ್ಮ್’ನಲ್ಲಿರುವ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್”ಗಳಿದು ಸಿಡಿಲಬ್ಬರದ ಶತಕ ಬಾರಿಸಿದ್ದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯ ಆಗಸ್ಟ್ 6ರದು ನಡೆಯಲಿದೆ.

ಇದನ್ನೂ ಓದಿ : Asia Cup 2022 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ : ಟೂರ್ನಿಯ ಫಾರ್ಮ್ಯಾಟ್, ಭಾರತದಲ್ಲಿ Live Streaming, ಒಂದೇ ಕ್ಲಿಕ್‌ನಲ್ಲಿ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Suryakumar Yadav : ಸೂರ್ಯಕುಮಾರ್ ಯಾದವ್ ಬಾರಿಸಿದ ಅದ್ಭುತ ಶಾಟ್‌ ನೋಡಿದ್ರೆ ನೀವೂ ಕ್ಲೀನ್ ಬೌಲ್ಡ್ ಆಗ್ತೀರಿ

Kannadave Satya Kannadave Nitya poster in India Vs West Indies 3rd T20

Comments are closed.