Hyundai December Discounts : ಡಿಸೆಂಬರ್‌ ತಿಂಗಳಿನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಿದ ಹುಂಡೈ

ದಕ್ಷಿಣ ಕೋರಿಯಾದ ಕಾರು ತಯಾರಿಕಾ ಕಂಪನಿ ಹುಂಡೈ (Hyundai) ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಅನ್ನು ಘೋಷಿಸಿದೆ (Hyundai December Discounts). ಈ ಡಿಸ್ಕೌಂಟ್‌ ಅನ್ನು ವಿವಿಧ ಆವೃತ್ತಿಗಳ ಅನುಗುಣವಾಗಿ ನೀಡಿದೆ. ಅತಿ ಹೆಚ್ಚಿನ 1.5 ಲಕ್ಷಗಳವರೆಗಿನ ಡಿಸ್ಕೌಂಟ್‌ ಅನ್ನು ಸಹ ನೀಡಿರುವುದು ವಿಶೇಷವಾಗಿದೆ. ಹುಂಡೈ ಭರ್ಜರಿ ಡಿಸ್ಕೌಂಟ್‌ಗಳನ್ನು i10 ನಿಯೋಸ್‌, i20, ಔರಾ, ಮತ್ತು ಇಲೆಕ್ಟ್ರಿಕ್‌ SUV ಆದ ಕೊನಾ ಇಲೆಕ್ಟ್ರಿಕ್‌ ಕಾರುಗಳ ಮೇಲೆ ನೀಡಿದೆ. ಹುಂಡೈ ಯಾವ ಕಾರಿಗೆ ಎಷ್ಟು ಡಿಸ್ಕೌಂಟ್‌ಗಳನ್ನು ನೀಡಿದೆ ಅನ್ನುವ ಮಾಹಿತಿ ಇಲ್ಲಿದೆ ಓದಿ.

ಹುಂಡೈ ಗ್ರಾಂಡ್‌ i10 ನಿಯೋಸ್‌ :
ಹುಂಡೈ ತನ್ನ ಗ್ರಾಂಡ್‌ i10 ನಿಯೋಸ್‌ ಹ್ಯಾಚ್‌ಬ್ಯಾಕ್‌ ಕಾರಿಗೆ 63,000 ರೂ.ಗಳ ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. 1.0 ಲೀ. ಟರ್ಬೋಚಾರ್ಜ್ಡ್ ಮೂರು-ಸಿಲಿಂಡರ್ ಇರುವ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ಗ್ರಾಂಡ್ i10 ನಿಯೋಸ್‌ನ ರೂಪಾಂತರಗಳಿಗೆ 50,000 ರೂ.ಗಳ ನಗದು ರಿಯಾಯಿತಿ ಜೊತೆಗೆ 10,000 ರೂ.ಗಳ ವಿನಿಮಯ ಬೋನಸ್ ಮತ್ತು 3,000 ರೂ. ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ರೂಪಾಂತರಗಳಿಗೆ, ಈ ಆಫರ್‌ನಲ್ಲಿ ನಗದು ರಿಯಾಯಿತಿಯು 20,000 ರೂ. ಆಗಿದೆ. ಅದರ ಜೊತೆಗೆ 10,000 ರೂ. ಗಳ ಸಾಮಾನ್ಯ ವಿನಿಮಯ ಬೋನಸ್ ಮತ್ತು 3,000 ರೂ.ಗಳ ಕಾರ್ಪೊರೇಟ್ ಬೋನಸ್ ನೀಡುತ್ತಿದೆ. CNG ರೂಪಾಂತರದ ಕಾರುಗಳಿಗೆ ನಗದು ರಿಯಾಯಿತಿಯನ್ನು 25,000 ರೂ. ಗಳಿಗೆ ಹೆಚ್ಚಿಸಿದೆ. ಆದರೆ ಇತರೆ ಪ್ರಯೋಜನಗಳು ಒಂದೇ ರೀತಿ ಆಗಿರುತ್ತದೆ.

ಹುಂಡೈ ಔರಾ:
ಹುಂಡೈನ ಔರಾ ಕಾರು ಕ್ಯಾಂಪಾಕ್ಟ್‌ ಸೆಡಾನ್‌ ಕಾರಾಗಿದೆ. ಇದರ ಮೇಲೆ ಡಿಸೆಂಬರ್‌ 2022 ಕ್ಕೆ 43,000 ರೂ.ಗಳ ವರೆಗೆ ರಿಯಾಯಿತಿ ನೀಡುತ್ತಿದೆ. ನೀವು ಸಂಪೂರ್ಣ 43,000ರೂ. ಡಿಸ್ಕೌಂಟ್‌ ಪಡೆಯಲು ಔರಾದ CNG ಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಇದು 30,000 ರೂ.ಗಳ ನಗದು ರಿಯಾಯಿತಿ, 10,000 ರೂ.ಗಳ ವಿನಿಮಯ ಬೋನಸ್‌ ಮತ್ತು 3,000 ರೂ.ಗಳ ಕಾರ್ಪೋರೇಟ್‌ ರಿಯಾಯಿತಿಗಳನ್ನು ನೀಡಿದೆ. ಔರಾದ 1.0-ಲೀಟರ್ ಮತ್ತು 1.2-ಲೀಟರ್ ಎರಡೂ ಪೆಟ್ರೋಲ್ ಆವೃತ್ತಿಗಳಿಗೆ ನಗದು ರಿಯಾಯಿತಿಯನ್ನು ರೂ 20,000 ಕ್ಕೆ ನಿಗದಿಪಡಿಸಿದೆ. ಎರಡೂ ಪೆಟ್ರೋಲ್‌ ಆವೃತ್ತಿಗಳಿಗೆ 10,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 3,000 ರೂಪಾಯಿಗಳ ಕಾರ್ಪೊರೇಟ್‌ ರಿಯಾಯಿತಿ ನೀಡುತ್ತಿದೆ.

ಹ್ಯುಂಡೈ i20:
ಹುಂಡೈ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ i20ಗೂ ಸಹ 30,000 ರೂ. ಗಳ ಡಿಸ್ಕೌಂಟ್‌ ನೀಡಿದೆ. 30,000 ರೂ.ಗಳ ವರೆಗೆ ರಿಯಾಯಿತಿಯನ್ನು ಅದು i20 ಯ ಪೆಟ್ರೋಲ್‌ ಮತ್ತು ಡೀಸೆಲ್‌ ಎರಡೂ ಮಾದರಿಯ ಮ್ಯಾಗ್ನಾ ಮತ್ತು ಸ್ಪೋರ್ಟ್ಸ್‌ ರೂಪಾಂತರಗಳಿಗೆ ಮಾತ್ರ ನೀಡಲಾಗಿದೆ. ಈ ರಿಯಾಯಿತಿಯು 20, 000 ರೂ.ಗಳ ನಗದು ರಿಯಾಯಿತಿ ಮತ್ತು 10,000 ರೂ.ಗಳ ವಿನಿಮಯ ಬೋನಸ್‌ ಅನ್ನು ಒಳಗೊಂಡಿದೆ.

ಹುಂಡೈ ಕೋನಾ EV:
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿರುವ ಏಕೈಕ ಕಂಪನಿ ಹುಂಡೈ. ಹುಂಡೈನ ಇಲೆಕ್ಟ್ರಿಕ್‌ ಕಾರು ಕೋನಾ EV ಯ ಮೇಲೆ 1.5 ಲಕ್ಷ ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಗ್ರಾಹಕರು ARAI ಪ್ರಮಾಣೀಕೃತ ಶ್ರೇಣಿಯ ಕಾರನ್ನು ಆಯ್ದುಕೊಳ್ಳಲು ಬಯಸುತ್ತಿದ್ದರೆ ಈ ಕಾರಿನ ಮೇಲೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ 452 ಕಿಮಿ ಓಡುವ ಈ ಕಾರು ಡಿಸೆಂಬರ್‌ ತಿಂಗಳಲ್ಲಿ 1.5 ಲಕ್ಷ ರೂಪಾಯಿಗಳ ಫ್ಲಾಟ್ ಕ್ಯಾಶ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಪ್ರತಿವರ್ಷ ಡಿಸೆಂಬರ್‌ ತಿಂಗಳಿನಲ್ಲಿ ವಿತರಕರು ಆ ವರ್ಷದ ಸ್ಟಾಕ್‌ ಅನ್ನು ಕ್ಲೀಯರ್‌ ಮಾಡಿಕೊಳ್ಳುವ ಸಲುವಾಗಿ ಗ್ರಾಹಕರಿಗೆ ದೊಡ್ಡ ಮೊತ್ತದ ರಿಯಾಯಿತಿಗಳನ್ನು ನೀಡುತ್ತಾರೆ.

ಇದನ್ನೂ ಓದಿ : Volkswagen Tiguan : ಫೋಕ್ಸ್‌ವ್ಯಾಗನ್‌ ಎಕ್ಸ್‌ಕ್ಲೂಸಿವ್‌ ಎಡಿಷನ್‌ ಟಿಗಾನ್‌ ಅನಾವರಣ

ಇದನ್ನೂ ಓದಿ : Used EV Purchase : ನಿಮಗಿದು ಗೊತ್ತಾ; ಸೆಕೆಂಡ್‌ ಹ್ಯಾಂಡ್‌ ಇಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವ ಮೊದಲು ಏನೇನು ಚೆಕ್‌ ಮಾಡಬೇಕು ಎಂದು…

(Hyundai December Discounts. You can save up to rs 1.5 lakhs)

Comments are closed.