M-K border dispute: ಎಮ್‌ಇಎಸ್‌ ಬಳಿಕ ಎಮ್‌ಎನ್‌ಎಸ್‌ ನಿಂದ ಕಿಡಿಗೇಡಿ ಕೃತ್ಯ: ಕರ್ನಾಟಕ ಬ್ಯಾಂಕ್‌ ಗಳ ಮೇಲೂ ಕಪ್ಪು ಮಸಿ

ನಾಸೀಕ್‌ : (M-K border dispute) ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಬೆನ್ನಲ್ಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯಿಂದ ಪುಂಡಾಟಿಕೆ ಮುಂದುವರೆದಿದೆ. ಈಗಾಗಲೇ ಎಮ್‌ಇಎಸ್‌ ಪುಂಡರು ಸಿಡಿಸಿದ ಕಿಡಿಗೆ ಗಡಿ ಭಾಗದ ಜನರು ಹೈರಾಣಾಗಿದ್ದು, ಇದೀಗ ಮತ್ತೆ ಎಮ್‌ಇಎಸ್‌ ಪುಂಡರು ಕರ್ನಾಟಕದ ಬಸ್‌, ಬ್ಯಾಂಕ್‌ ಮೇಲೆ ಕಿಡಿಗೇಡಿತನ ಮೆರೆಯುತ್ತಿದ್ದಾರೆ.

ಎಮ್‌ಇಎಸ್‌ ಬಳಿಕ ಇದೀಗ ಮಹಾರಾಷ್ಟ್ರದ ನಾಸೀಕ್‌ ನಲ್ಲಿ ಎಮ್‌ಎನ್‌ಎಸ್‌ ಪುಂಡರು ಪುಂಡಾಟ (M-K border dispute) ನಡೆಸುತ್ತಿದ್ದು, ಇನ್ನೂ ಈ ಪುಂಡಾಟಿಕೆ ನಿಲ್ಲುವಂತೆ ಕಾಣುತ್ತಿಲ್ಲ. ಇಷ್ಟು ದಿನ ಕರ್ನಾಟಕದ ಬಸ್‌ ಗಳು, ಲಾರಿಗಳ ಮೇಲೆ ಕಪ್ಪಿ ಮಸಿ ಬಳಿದು ಪುಂಡಾಟಿಕೆ ನಡೆಸುತ್ತಿದ್ದ ಪುಂಡರು ಇದೀಗ ಕರ್ನಾಟಕ ಬ್ಯಾಂಕ್‌ ಗಳ ಮೇಲೂ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದ ಬಸ್‌, ಬ್ಯಾಂಕ್‌ ಗಳನ್ನೇ ಟಾರ್ಗೆಟ್‌ ಮಾಡಿದ ಪುಂಡರು, ಬರೀ ಕರ್ನಾಟಕದ ವಾಹನಗಳಿಗಷ್ಟೇ ಅಲ್ಲದೆ ಕರ್ನಾಟಕ ಬ್ಯಾಂಕ್‌ ಮೇಲೂ ಮಸಿ ಬಳಿದು ಉದ್ಘಟತನವನ್ನ ಮೆರೆದಿದ್ದಾರೆ. ಸ್ವರಾಜ್ಯ ಸಂಘಟನೆಯ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿನ ಕರ್ನಾಟಕ ಬ್ಯಾಂಕ್‌ ಗಳಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದ್ದು, ಬಸ್‌ ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆಯನ್ನು ಮೆರೆಯುತ್ತಿದ್ದಾರೆ.

ಇದನ್ನೂ ಓದಿ : Datta Jayanti 2022: ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ : ಇಂದು ಶೋಭಾಯಾತ್ರೆ

ಇದನ್ನೂ ಓದಿ : M-K border dispute: ಮಹಾರಾಷ್ಟ್ರದಲ್ಲಿ ಬಣ ಬಡಿದಾಟ: ಕರ್ನಾಟಕದ ಗಡಿ ಭಾಗದ ಜನರು ಹೈರಾಣು

ಇದನ್ನೂ ಓದಿ : Hanuma Jayanthi: ಮೂರು ದಿನ ಮದ್ಯ ಮಾರಾಟ ನಿಷೇಧ : 1 ದಿನ ಶಾಲೆ, ಕಾಲೇಜಿಗೆ ರಜೆ

ಇದನ್ನೂ ಓದಿ : Post Office New Offer : ಇಂಡಿಯನ್ ಪೋಸ್ಟ್ ನಿಂದ ಭರ್ಜರಿ ಆಫರ್ : ವಿವಾಹಿತರ ಖಾತೆಗೆ 59,400 ರೂ.ಜಮಾ

M-K border dispute: ಗಡಿ ಭಾಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಈ ಘಟನೆಗಳ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ತೆರಳುವ ಹಲವು ಬಸ್‌ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ರೀತಿಯ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ. ಆದರೂ ಮಹಾರಾಷ್ಟ್ರದ ಪುಂಡರ ಪುಂಡಾಟಿಕೆ ಮಾತ್ರ ಕೊನೆಗಾಣುತ್ತಿಲ್ಲ.

(M-K border dispute) After the Maharashtra-Karnataka border dispute, insurgency by the Maharashtra Nav Nirman Sena continues. The people of the border area have already been harassed by the MES thugs, and now again the MES thugs are wreaking havoc on the buses and banks of Karnataka.

Comments are closed.