ವ್ಹಾವ್​.. ವ್ಹಾವ್​.. ವ್ಹಾವ್​ : ಕೇವಲ 999 ರೂ. ನೀಡಿ ಬುಕ್​ ಮಾಡಿದ್ರೆ ಸಾಕು, ನಿಮಗೆ ಸಿಗುತ್ತೆ ಎಲೆಕ್ಟ್ರಿಕ್ ಬೈಕ್​

ಎಲೆಕ್ಟ್ರಿಕ್​ ವಾಹನಗಳ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ Automobile.co, ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರನ್ನು ಸೆಳೆಯಲು ಸೂಪರ್​ ಆಗಿರುವ ಎರಡು ಆಫರ್​ಗಳನ್ನು ನೀಡಿದೆ

ಈಗೀಗ ಎಲೆಕ್ಟ್ರಿಕ್​ ಬೈಕ್​ಗಳು ಹೆಚ್ಚು ಪ್ರಚಲಿತದಲ್ಲಿ ಇರೋದ್ರಿಂದ ಹಣ ಉಳಿತಾಯ ಮಾಡುವ ದೃಷ್ಟಿಯಿಂದ ಅನೇಕರು ಎಲೆಕ್ಟ್ರಿಕ್​ ಬೈಕ್​ಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ನೀವು ಕೂಡ ಈ ಬಾರಿಯ ಹಬ್ಬದ ಸೀಸನ್​ಗೆ ಹೊಸ ಬೈಕ್​ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್​ ಖರೀದಿ ಮಾಡಬೇಕು ಎಂದು ಪ್ಲಾನ್​ ಏನಾದ್ರೂ ಹಾಕಿಕೊಂಡಿದ್ದರೆ ಇದಕ್ಕಿಂತ ಸರಿಯಾದ ಸಮಯ ನಿಮಗೆ ಮತ್ತೆ ಸಿಗಲಿಕ್ಕಿಲ್ಲ. ಆದರೆ ನೀವು  ಇಂದು ಆಟಮ್ ವಾಡರ್ ಎಲೆಕ್ಟ್ರಿಕ್ ಬೈಕ್ (atum vader electric bike) ​ ಬುಕ್​ ಮಾಡಿದ್ರೆ ಮಾತ್ರ ಈ ಸದಾವಕಾಶ ನಿಮ್ಮದಾಗಲಿದೆ.

ಎಲೆಕ್ಟ್ರಿಕ್​ ವಾಹನಗಳ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ Automobile.co, ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರನ್ನು ಸೆಳೆಯಲು ಸೂಪರ್​ ಆಗಿರುವ ಎರಡು ಆಫರ್​ಗಳನ್ನು ನೀಡಿದೆ. ದೀಪಾವಳಿ ಹಬ್ಬದ ಈ ಆಫರ್​ನ್ನು ಬಳಸಿಕೊಂಡು ನೀವು ಅತೀ ಕಡಿಮೆ ದರದಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ನ ಮಾಲೀಕರಾಗಬಹುದಾಗಿದೆ.

atum vader electric bike up to 28000 offers available Monthly pay EMI just 999 new
Image Credit : atum vader

ಈ ಬೈಕ್​ನ ಬೆಲೆಯು . 1,36,000 ರೂಪಾಯಿಯಾಗಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ಬೈಕ್​ಗಳ ಖರೀದಿಗೆ ನಿಮಗೆ 27,500 ರೂಪಾಯಿ ರಿಯಾಯಿತಿ ಸಿಗಲಿದೆ. ಅಂದರೆ ನೀವು ಕೇವಲ 1.08.500 ರೂಪಾಯಿಗೆ ಇ ಎಲೆಕ್ಟ್ರಿಕ್​ ಬೈಕ್​ನ ಮಾಲೀಕರಾಗಬಹುದಾಗಿದೆ. ಇನ್ನೊಂದು ವಿಶೇಷತೆ ಏನು ಅಂದ್ರೆ ಈ ಬೈಕ್​ನ್ನು ನೀವು ಪ್ರಿ ಬುಕ್​ ಮಾಡಬೇಕು ಎಂದುಕೊಂಡಿದ್ದರೆ ಕೇವಲ 999 ರೂಪಾಯಿ ಪಾವತಿ ಮಾಡಿದ್ರೆ ಸಾಕು.

ಇದನ್ನೂ ಓದಿ : ಜಾಗತಿಕವಾಗಿ ಲಾಂಚ್​ ಆಗಿದೆ ಹೊಸ ಆವೃತ್ತಿಯ ಹಿಮಾಲಯನ್​ ಮೋಟಾರ್​ ಸೈಕಲ್​: ಇಲ್ಲಿದೆ ವಿಶೇಷತೆ

ಬೈಕ್​ ಖರೀದಿ ಮಾಡುವ ಸಂದರ್ಭದಲ್ಲಿ ನೀವು ಬಾಕಿ ಮೊತ್ತವನ್ನು ಪಾವತಿ ಮಾಡಿದರೆ ಸಾಕಾಗುತ್ತದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಈ ಹೊಚ್ಚ ಹೊಸ ಎಲೆಕ್ಟ್ರಿಕ್​ ಬೈಕ್​ ನಿಮಗೆ ಗರಿಷ್ಠ ಅಂದ್ರೆ ಗಂಟೆಗೆ 65 ಕಿಲೋಮೀಟರ್​ ವೇಗವನ್ನು ನೀಡಲಿದೆ. ಮೂರರಿಂದ ನಾಲ್ಕು ಗಂಟೆಗಳ ಅವಧಿಯಲ್ಲಿ ಈ ಬೈಕ್​ಗಳು ಚಾರ್ಜ್ ಆಗಲಿವೆ.

atum vader electric bike up to 28000 offers available Monthly pay EMI just 999 new
Image Credit : atum vader

2.4 kWh ಬ್ಯಾಟರಿ ಪ್ಯಾಕ್ ಇದೆ. ಪೋರ್ಟಬಲ್ ಬ್ಯಾಟರಿ ಆಯ್ಕೆಯೂ ಇದರಲ್ಲಿ ಲಭ್ಯವಿದೆ. ಲೈಫ್ ಟೈಮ್ ಫ್ರೇಮ್ ವಾರಂಟಿ ಕೂಡ ನಿಮಗೆ ಸಿಗಲಿದೆ. ಅಲ್ಲದೇ ಈ ಬೈಕ್​ಗಳು ಗ್ರಾಹಕರಿಗೆ ಕೆಂಪು, ಕಪ್ಪು, ಬಿಳಿ, ಬೂದು ಹಾಗೂ ನೀಲಿ ಬಣ್ಣದ ವಿನ್ಯಾಸಗಳಲ್ಲಿ ಲಭ್ಯವಿದೆ. ಇನ್ನು ಒಂದು ಬಾರಿಗೆ ನೀವು ಬೈಕ್​ನ್ನು ಫುಲ್ ಜಾರ್ಜ್ ಮಾಡಿದಲ್ಲಿ 100 ಕಿಲೋಮೀಟರ್​ವರೆಗೆ ಮೈಲೇಜ್​ ಪಡೆಯಲಿದ್ದೀರಿ.

ಇದನ್ನೂ ಓದಿ : ದೀಪಾವಳಿ ಹಬ್ಬಕ್ಕೆ ಇಲ್ಲಿದೆ ಬಂಪರ್​ : ಒಂದು ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿಗೆ ಇನ್ನೊಂದು ಇ ಸ್ಕೂಟರ್​ ಉಚಿತ

25 ಕಿ.ಮೀ ವೇಗದಲ್ಲಿ ಹೋದರೆ ನಿಮಗೆ 100 ಕಿಲೋಮೀಟರ್​ವರೆಗೂ ಚಾರ್ಜ್​ ಬರಲಿದೆ. ಅದೇ ನೀವು ಗಂಟೆಗೆ 45 ಕಿಲೋ ಮೀಟರ್​ ವೇಗದಲ್ಲಿ ಬೈಕ್​ ಚಲಾಯಿಸಿದಲ್ಲಿ ನಿಮಗ 80 ಕಿಲೋ ಮೀಟರ್​ವರೆಗೆ ಬ್ಯಾಟರಿ ಚಾರ್ಜ್ ಬಾಳಿಕೆ ಬರಲಿದೆ.

ಹೀಗಾಗಿ ಈ ಬೈಕ್​ನಿಂದ ಹೆಚ್ಚು ಮೈಲೇಜ್​ ಪಡೆಯುವುದು ನಿಮ್ಮ ಮೇಲೆಯೇ ಅವಲಂಭಿಸಿ ಇರುತ್ತದೆ. ಸದ್ಯ ಏರುತ್ತಿರುವ ಪೆಟ್ರೋಲ್​ ದರಗಳನ್ನೆಲ್ಲ ಗಮನಿಸಿದ್ರೆ ಈ ಎಲೆಕ್ಟ್ರಿಕ್​ ಬೈಕ್​ಗಳು ಖಂಡಿತವಾಗಿಯೂ ನಿಮಗೆ ಉತ್ತಮ ಆಯ್ಕೆ ಎಂದೇ ಹೇಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು Automobile.co ವೆಬ್​ಸೈಟ್​ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ : ಮಾರುತಿ ದಸರಾ ಆಫರ್‌ : ಮಾರುತಿ ಸುಜುಕಿ ಜಿಮ್ನಿ ಕಾರು ಖರೀದಿಸಿದ್ರೆ ಸಿಗುತ್ತೆ 50000 ರೂ.

atum vader electric bike up to 28000 offers available Monthly pay EMI just 999

Comments are closed.