Bajaj Pulsar N160 : ಕಾರ್ಕಳ : ಬಜಾಜ್‌ ಪಲ್ಸರ್‌ ಎನ್‌ 160 ಮಾರುಕಟ್ಟೆಗೆ ಬಿಡುಗಡೆ

ಕಾರ್ಕಳ : ಆಧುನಿಕ ಜಗತ್ತಿನಲ್ಲಿ ಯುವಕ, ಯುವತಿಯರಿಗೆ ಬೈಕ್ ಕ್ರೇಜ್ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಆದ್ರೀಗ ಬಜಾಜ್ ಕಂಪೆನಿ ಗ್ರಾಹಕರ ಮನಗೆದ್ದ ಪಲ್ಸರ್ ಮಾದರಿಯಲ್ಲಿ ಹೊಸ ವಿನ್ಯಾಸದ ಬೈಕ್ ಬಜಾಜ್‌ ಪಲ್ಸರ್‌ ಎನ್‌ 160(Bajaj Pulsar N160) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಕಾರ್ಕಳದ ಅಧಿಕೃತ ಬಜಾಜ್‌ ಸರ್ವಿಸ್‌ ಸೆಂಟರ್‌ ಆದ ಕಾಬೆಟ್ಟು ಶಾಂತ ಬಜಾಜ್‌ನಲ್ಲಿ ಬಜಾಜ್‌ ಪಲ್ಸರ್‌ ಎನ್‌160 ಪ್ರಪ್ರಥಮ ಬಾರಿಗೆ ಕಾರ್ಕಳ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಮಾರಾಟಕ್ಕೆ ಲಭ್ಯವಾಗಿದೆ.

ಕಾಬೆಟ್ಟು ಶಾಂತ ಬಜಾಜ್‌ನಲ್ಲಿ ಕಾರ್ಕಳ ನಗರ ಪೊಲೀಸ್‌ ಠಾಣೆಯ ಅಧಿಕಾರಿಯಾದ ಎಎಸ್‌ಐ ಪ್ರಕಾಶ್‌ ಅವರು ಬಜಾಜ್‌ ಪಲ್ಸರ್‌ ಎನ್‌ 160(Bajaj Pulsar N160)ಯನ್ನು ಅನಾವರಣಗೊಳಿಸುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಕಾರ್ಕಳ ಮಾರುಕಟ್ಟೆಯಲ್ಲಿ ಪ್ರಪ್ರಥಮವಾಗಿ ಬಿಡುಗಡೆಯಾದ ಬಜಾಜ್‌ ಪಲ್ಸರ್‌ ಎನ್‌ 160ನ್ನು ಗ್ರಾಹಕರೊಬ್ಬರು ಖರೀದಿಸಿದ್ದಾರೆ. ಆ ಸಂದರ್ಭದಲ್ಲಿ ಕಾರ್ಕಳದ ಗೋಪಾಲ್‌ ಪೈ ಅವರಿಂದ ಗ್ರಾಹಕ ನಿತಿನ್‌ ಅವರಿಗೆ ಮೊದಲ ಬಜಾಜ್‌ ಪಲ್ಸರ್‌ ಎನ್‌ 160ನ್ನು ಹಸ್ತಾಂತರಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಶಾಂತ ಬಜಾಜ್‌ನ ಮಾಲಕರಾದ ಅಶೋಕ್‌ ಪೈ ಉಪಸ್ಥಿತಿಯಲ್ಲಿ, ಇದರ ಪ್ರಬಂಧಕರಾದ ನಾಗರಾಜ್‌ ಬಂದಿರುವ ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಹಾಗೆ ಕಾರ್ಯಕ್ರಮದಲ್ಲಿ ಶಾಂತ ಬಜಾಜಿನ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ.

ಹಲವು ವರ್ಷಗಳಿಂದಲೂ ಗ್ರಾಹಕರ ಮನ ಗೆದ್ದಿರುವ ಕಾಬೆಟ್ಟು ಶಾಂತ ಬಜಾಜ್‌ ಸಂಸ್ಥೆ ಮೋಟರ್‌ ಬೈಕ್‌ಗಳ ಸೇಲ್‌ ಹಾಗೂ ಸರ್ವಿಸ್‌ನ್ನು ನೆಡೆಸುತ್ತಿದ್ದು, ಗ್ರಾಹಕರಿಗೆ ಉತ್ತಮವಾದ ಸರ್ವಿಸ್‌ನ್ನು ನೀಡುತ್ತಾ ಬಂದಿದೆ. ಅಷ್ಟೇ ಅಲ್ಲದೇ ಇಲ್ಲಿ ಎಲ್ಲಾ ತರಹದ ಮೋಟರ್‌ ಬೈಕ್‌ಗಳ ಸೇಲ್‌ ಹಾಗೂ ಸರ್ವಿಸ್‌ನ ಜೊತೆ ವಾಹನದ ಬಿಡಿಭಾಗಳು ದೊರೆಯುತ್ತದೆ.

ಇದನ್ನೂ ಓದಿ : Hero Xtreme 160R : 1.30 ಲಕ್ಷ ರೂಪಾಯಿಗೆ ಬಿಡುಗಡೆಯಾದ ಹೀರೋ ಎಕ್ಸ್‌ಟ್ರೀಮ್‌ 160R ಸ್ಟೀಲ್ತ್‌ ಎಡಿಷನ್‌ 2.0

ಇದನ್ನೂ ಓದಿ : Kawasaki W175 : ಭಾರತದಲ್ಲಿ ಬಿಡುಗಡೆಯಾದ ಕವಾಸಕಿ W175 ರೆಟ್ರೊ ಮೋಟಾರ್‌ಸೈಕಲ್‌

ಇದನ್ನೂ ಓದಿ : Navratri Pre-booking Offer : ‘ನವರಾತ್ರಿ ಪ್ರೀ–ಬುಕಿಂಗ್‌’ ಕೊಡುಗೆ ನೀಡಿದ ಹೀರೋ ಮೋಟೋಕಾರ್ಪ್‌; ದ್ವಿಚಕ್ರ ವಾಹನ ಖರೀದಿದಾರರಿಗೆ ಸಿಹಿ ಸುದ್ದಿ

ಇದನ್ನೂ ಓದಿ : TVS Motor Launched 2 New Bike: ಟಿವಿಎಸ್‌ ಹೊಸದಾಗಿ ಮಾರುಕಟ್ಟೆಗೆ ಲಾಂಚ್ ಮಾಡಲಿದೆ Apache RTR 160 ಮತ್ತು Apache RTR 180

ಬಜಾಜ್‌ ಪಲ್ಸರ್‌ ಎನ್‌ 160ರ ವಿಶೇಷತೆ:
ಮಾರುಕಟ್ಟೆಗೆ ಬಿಡುಗಡೆಯಾದ ಬಜಾಜ್‌ ಪಲ್ಸರ್‌ ಎನ್‌ 160 ಯಲ್ಲಿ ಎಬಿಎಸ್‌, ಎಲ್‌ಇಡಿ ಜೊತೆ ಪ್ರೊಜೆಕ್ಟರ್‌ ಹಾಗೂ ಇಂಡಿಕೇಶನ್‌ ನಂತಹ ಮುಂತಾದ ವಿಶೇಷತೆಗಳನ್ನು ಒಳಗೊಂಡಿದೆ.

Karkala: Bajaj Pulsar N160 launched in the market

Comments are closed.