Malabar Spinach:ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ

(Malabar Spinach): ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ ಕಿರಿಯರಿಂದ ಹಿಡಿದು ಹಿರಿಯರವರೆಗೂ ರಕ್ತಹೀನತೆ ಸಮಸ್ಯೆ ಮತ್ತು ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವುದು ಹೆಚ್ಚಾಗಿ ಕಂಡು ಬರುತ್ತದೆ.ಇದಷ್ಟೆ ಅಲ್ಲದೆ ಮಕ್ಕಳಲ್ಲಿಯೂ ಪೋಷಕಾಂಶಗಳ ಕೊರತೆ ಸಾಮಾನ್ಯವಾಗಿದೆ. ಆದರೆ ರಕ್ತಹೀನತೆಯ ಸಮಸ್ಯೆಗೆ ಬಸಳೆ ಸೊಪ್ಪಿನಿಂದ ಸುಲಭವಾಗಿ ಪರಿಹಾರ ಸಿಗುತ್ತದೆ.

ಬೇಕಾಗುವ ಸಾಮಗ್ರಿಗಳು:
ಬಸಳೆ
ಜೇನುತುಪ್ಪ

ಮಾಡುವ ವಿಧಾನ:

(Malabar Spinach) ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ ಹಸಿ ಬಸಳೆಯನ್ನು ಜಜ್ಜಿ ಎರಡು ಸ್ಪೂನ್ ಆಗುವಷ್ಟು ರಸವನ್ನು ತೆಗೆದುಕೊಳ್ಳಬೇಕು. ತೆಗೆದುಕೊಂಡ ಬಸಳೆಯ ರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಇಪ್ಪತ್ತೊಂದು ದಿನಗಳ ಕಾಲ ಸೇವಿಸುತ್ತಾ ಬಂದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲದೆ. ರಕ್ತ ವೃದ್ಧಿಗು ಕೂಡ ಉಪಯುಕ್ತ ವಾಗಿದೆ.

ಇದನ್ನೂ ಓದಿ:Rishabh Pant Urvashi Rautela: “ಹೃದಯವನ್ನು ಹಿಂಬಾಲಿಸಿ ಬಂದಿದ್ದೇನೆ..” ರಿಷಭ್ ಪಂತ್‌ಗಾಗಿ ಆಸೀಸ್‌ಗೆ ಹಾರಿದ್ರಾ ನಟಿ ಊರ್ವಶಿ ರೌಟೇಲಾ..?

ಇದನ್ನೂ ಓದಿ:Gandhadagudi Trailer Release : ಪುನೀತ್ ರಾಜ್ ಕುಮಾರ್ “ಗಂಧದಗುಡಿ”ಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ:Bigg Boss Season 9:ಬಿಗ್‌ ಬಾಸ್‌ ಎರಡನೇ ವಾರದ ಎಲಿಮಿನೆಷನ್ : ಯಾರು ಆಗ್ತಾರೆ ಔಟ್

ಬಸಳೆ ಸೊಪ್ಪನ್ನು ಜಜ್ಜಿ ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಉರಿಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಕಣ್ಣು ಉರಿ ಬಂದರೆ ಬಸಳೆ ಸೊಪ್ಪಿನ ರಸವನ್ನು ಕಣ್ಣಿನ ಸುತ್ತ ಹಂಚಿಕೊಂಡರೆ ಉರಿ ಕಡಿಮೆಯಾಗುತ್ತದೆ. ಬಸಳೆ ಸೊಪ್ಪು ಬಾಯಿ ಮತ್ತು ಹೊಟ್ಟೆ ಹುಣ್ಣನ್ನು ಕಡಿಮೆ ಮಾಡುವುದರ ಜೊತೆಗೆ ಗ್ರಾಸ್ಟಿಕ್ ಸಮಸ್ಯೆಯನ್ನು ಪರಿಹರಿಸುತ್ತದೆ. ಇಷ್ಟೆ ಅಲ್ಲದೆ ನಿದ್ರಾಹಿನತೆ ಕಡಿಮೆ ಮಾಡುವ ಶಕ್ತಿ ಬಸಳೆ ಸೊಪ್ಪಿಗಿದೆ.

ಸೊಂಟ ನೋವು ಹಾಗೂ ಮೂಳೆಗಳಿಗೆ ಉತ್ತಮ ಈ ಉಂಡೆ

ಬೇಕಾಗುವ ಸಾಮಾಗ್ರಿ :

1 ಕಪ್‌ ಎಳ್ಳು(ಬಿಳಿಎಳ್ಳು ಅಥವಾ ಕಪ್ಪುಎಳ್ಳು)
1 ಕಪ್‌ ನೆಲಗಡಲೆ
1 ಕಪ್‌ ಹುರಿಗಡಲೆ
1 ಕಪ್‌ ಒಣಕಾಯಿತುರಿ
ಬೆಲ್ಲ

ತಯಾರಿಸುವ ವಿಧಾನ :
ಮೊದಲಿಗೆ ಗ್ಯಾಸ್‌ನ್ನು ಹೊತ್ತಿಸಿ ಅದರ ಮೇಲೆ ಬಾಣಲೆಯನ್ನು ಇಟ್ಟುಕೊಳ್ಳಬೇಕು. ಅದು ಬಿಸಿ ಆದಮೇಲೆ ಒಂದು ಕಪ್‌ ನೆಲಗಡಲೆಯನ್ನು ಹಾಕಿ ಮಿಡಿಯಮ್‌ ಉರಿಯಲ್ಲಿ ಗರಿಗರಿಯಾಗುವರೆಗೆ ಹುರಿದುಕೊಳ್ಳಬೇಕು. ಹುರಿದುಕೊಂಡ ನೆಲಗಡಲೆಯನ್ನು ಬಿಸಿ ಆರಿದ ಮೇಲೆ ಅದರ ಸಿಪ್ಪೆಯನ್ನು ತೆಗೆದು ಒಂದು ಪಾತ್ರೆಯಲ್ಲಿ ತೆಗೆದು ಇಟ್ಟುಕೊಳ್ಳಬೇಕು. ನಂತರ ಒಂದು ಕಪ್‌ ಎಳ್ಳನ್ನು ಹುರಿದುಕೊಳ್ಳಬೇಕು. ಹಾಗೆ ತುರಿದು ಇಟ್ಟುಕೊಂಡ ಒಣಕೊಬ್ಬರಿಯನ್ನು ಅದರ ಜೊತೆಯಲ್ಲೇ ಹುರಿಗಡಲೆಯನ್ನು ಹುರಿದುಕೊಳ್ಳಬೇಕು. ಹೀಗೆ ಹುರಿದ ನೆಲಗಡಲೆ, ಎಳ್ಳು, ಹುರಿಗಡಲೆ ಹಾಗೂ ಕೊಬ್ಬರಿಯನ್ನು ಡ್ರೈ ಇರುವ ಮಿಕ್ಸಿ ಜಾರಿನಲ್ಲಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಜಾಸ್ತಿ ನುಣ್ಣಗೆ ರುಬ್ಬಿಕೊಳ್ಳುವುದು ಬೇಡ ಯಾಕೆಂದರೆ ತರಿ ತರಿಯಾಗಿ ರುಬ್ಬಿಕೊಳ್ಳುವುದರಿಂದ ತಿನ್ನಲು ರುಚಿಯಾಗಿರುತ್ತದೆ. ಅದರ ಜೊತೆಯಲ್ಲಿಯೇ ಸಿಹಿಗೆ ಬೇಕಾದಷ್ಟು ಪುಡಿ ಮಾಡಿದ ಬೆಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಉಂಡೆ ತರ ಮಾಡಿಕೊಳ್ಳಬೇಕು.

Anemia problem is solved with Malabar Spinach

Comments are closed.