ಭಾರಿ ರಿಯಾಯಿತಿ ಟೆಕ್ನಿಕ್‌ನೊಂದಿಗೆ ಸದ್ದು ಮಾಡಲು ಸಜ್ಜಾಗಿರುವ ಕವಾಸಕಿ ನಿಂಜಾ 300 ಬೈಕ್
Kawasaki Ninja 300: ಕಳೆದ ಒಂದು ದಶಕದಿಂದ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಬೈಕ್ ಕವಾಸಕಿ ನಿಂಜಾ. ಇಂದಿನ ಯುವ ಪೀಳಿಗೆಯವರಿಗಂತೂ ಬಹಳ ಅಚ್ಚುಮೆಚ್ಚು.
ದಶಕಗಳಿಂದಲೂ ವಿನ್ಯಾಸ, ವೈಶಿಷ್ಟ್ಯ ಹಾಗೂ ಮೆಕ್ಯಾನಿಕಲ್ ವಿಷಯದಲ್ಲಿ ಹೆಚ್ಚಾಗಿ ಬದಲಾಗದೇ ಇರುವ ಕವಾಸಕಿ ನಿಂಜಾ 300 ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಿಸುವ ಸಲುವಾಗಿ ಹೊಸ ಮಾರ್ಗವೊಂದನ್ನು ಹುಡುಕಿದೆ.
ಅದೇನೆಂದರೆ ಜನರನ್ನು ಹೆಚ್ಚೆಚ್ಚು ಆಕರ್ಷಿಸಲು ಕಂಪನಿಯು ನಿಂಜಾ 300 ಬೈಕ್ ಮೇಲೆ ದೊಡ್ಡ ಮೊತ್ತದ ರಿಯಾಯಿತಿಯನ್ನು ನೀಡುತ್ತಿದೆ.
3.17 (ಎಕ್ಸ್ ಶೋ ರೂಂ ಬೆಲೆ) ಲಕ್ಷ ಬೆಲೆಯ ಈ ಬೈಕ್ ಈಗ 25000 ರೂ. ಗಳ ಭಾರಿ ರಿಯಾಯಿತಿ ಪಡೆದುಕೊಂಡು 2.92 (ಎಕ್ಸ್ ಶೋ ರೂಂ ಬೆಲೆ) ಲಕ್ಷಕ್ಕೆ ಸಿಗಲಿದೆ. ಈ ಕೊಡುಗೆ ಡಿಸೆಂಬರ್ 31 ರವರೆಗೆ ಮಾತ್ರ ಎಂದು ಕಂಪನಿ ಹೇಳಿಕೊಂಡಿದೆ.
ಕವಾಸಕಿ ನಿಂಜಾ 300 ಬೈಕ್ ವೈಶಿಷ್ಟ್ಯ
ಕವಾಸಕಿ ನಿಂಜಾ 300 296 ಸಿಸಿ ಬೈಕ್ ಆಗಿದೆ. ಇದು ಪ್ಯಾರಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, 38.88 ಬಿಎಚ್‌ಪಿ ಮತ್ತು 26.1 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಇದನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸಹ ಹೊಂದಿದೆ. ಇದರ ಟ್ವಿನ್-ಸಿಲಿಂಡರ್ ಎಂಜಿನ್ ಅದರ ಪರಿಷ್ಕರಣೆ ಮತ್ತು ಬಹುಮುಖತೆಗೆ ಹೆಸರುವಾಸಿಯಾಗಿದೆ.
ಮಧ್ಯಮ ಶ್ರೇಣಿ ಹಾಗೂ ಉನ್ನತ ಮಟ್ಟದ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿರುವ ಈ ಬೈಕ್ ಸವಾರರ ಉತ್ಸಾಹವನ್ನು ಹೆಚ್ಚಿಸುತ್ತದೆ.
ಇನ್ನು ಈ ಬೈಕ್‌ನ ಹಾರ್ಡ್‌ವೇರ್ ವಿಷಯದಲ್ಲಿ ಹೇಳುವುದಾದರೆ ನಿಂಜಾ 300 ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಲಿಂಕ್ಡ್ ಮಾನೋಶಾಕ್ ಅನ್ನು ಹೊಂದಿದೆ.
ಈ ಬೈಕ್ ಹಿಂಭಾಗ ಹಾಗೂ ಮುಂಭಾಗ ಎರಡೂ ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಹೊಂದಿದೆ. ಡ್ಯುಯಲ್-ಚಾನೆಲ್ ABS ಅನ್ನು ಇದು ಬೆಂಬಲಿಸುತ್ತದೆ.
ಇದನ್ನೂ ಓದಿ: ಕೇವಲ ₹69,990 ಕ್ಕೆ ಎಲೆಕ್ನಿಕ್ ಡರ್ಟ್ ಬೈಕ್ ಬಿಡುಗಡೆ! ಮಧ್ಯಮ ವರ್ಗಕ್ಕೆ ಉತ್ತಮ ಆಯ್ಕೆ
ಯಾವ ಮಾಡೆಲ್‌ಗೆ ರಿಯಾಯಿತಿ ಇದೆ?
ಡಿಸೆಂಬರ್ 31, 2025 ರವರೆಗೆ ಮಾನ್ಯವಾಗಿರುವ ಈ ಭಾರಿ ರಿಯಾಯಿತಿಯು MY2024 ಮಾದರಿಯ ಬೈಕ್‌ಗೆ ಮಾತ್ರ ಸೀಮಿತವಾಗಿದೆ. ರಿಯಾಯಿತಿ ಕೂಪನ್ ಅನ್ನು ಬೈಕ್‌ನ ಎಕ್ಸ್ ಶೋ ರೂಂ ಬೆಲೆಗೆ ಹೋಲಿಸಿ ಪಡೆದುಕೊಳ್ಳಬಹುದು.
ಯಾವ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ?
ದಶಕಗಳಷ್ಟು ಹಳೆಯದಾದರೂ ಕವಾಸಕಿ ನಿಂಜಾ 300 ತನ್ನ ವಿಶಿಷ್ಟ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಭಾರತೀಯ ಮಾರುಕಟ್ಟೆಯಲ್ಲಿ KTM RC 390, ಯಮಹಾ R3 ಮತ್ತು ಎಪ್ರಿಲಿಯಾ RS 457 ನಂತಹ ಮೋಟಾರ್‌ಸೈಕಲ್‌ಗಳೊಂದಿಗೆ ಸ್ಪರ್ಧಿಸುವುದನ್ನು ಮುಂದುವರೆಸಿದೆ.



