Kawasaki W175 : ಭಾರತದಲ್ಲಿ ಬಿಡುಗಡೆಯಾದ ಕವಾಸಕಿ W175 ರೆಟ್ರೊ ಮೋಟಾರ್‌ಸೈಕಲ್‌

ಇತ್ತೀಚೆಗೆ ಭಾರತದ ಮಾರುಕಟ್ಟೆಗೆ ನಿಯೋ–ರೆಟ್ರೊ ಮೋಟಾರ್‌ಸೈಕಲ್‌ಗಳು ಲಗ್ಗೆಯಿಡುತ್ತಿವೆ. ಸದ್ಯ ಬಿಡುಗಡೆಯಾಗಿರುವ ಟಿವಿಎಸ್‌ ಮತ್ತು ರಾಯಲ್‌ ಎನ್‌ಫೀಲ್ಡ್‌ ಮೋಟಾರ್‌ಸೈಕಲ್‌ಗಳು ಒಂದಾಗಿವೆ. ಈಗ ಆ ಸಾಲಿಗೆ ಜಪಾನಿನ ಬ್ರಾಂಡ್‌ ಆದ ಕವಾಸಕಿ W175 (Kawasaki W175 ) ಮೋಟಾರ್‌ಸೈಕಲ್‌ ಅನ್ನು 1.47 (ಎಕ್ಸ್‌ ಶೋ ರೂಂ ಬೆಲೆ) ಲಕ್ಷ ರೂಪಾಯಿಗಳಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಆದರೆ ಇದು ಪರಿಚಯಾತ್ಮಕ ಬೆಲೆಯಾಗಿದ್ದು, ಮೊದಲ ಬ್ಯಾಚ್‌ನ ಖರೀದಿದಾರರಿಗೆ ಮಾತ್ರ ಅನ್ವಯಿಸುತ್ತದೆ. ಕವಾಸಕಿ W175 ಎರಡು ಟ್ರಿಮ್‌ಗಳಲ್ಲಿ ಮಾರಾಟವಾಗಲಿದೆ. ಸ್ಟ್ಯಾಂಡರ್ಡ್ ರೂಪಾಂತರ, 1,47 ಲಕ್ಷ (ಎಕ್ಸ್-ಶೋರೂಂ) ಬೆಲೆಯಾದರೆ, ವಿಶೇಷ ಆವೃತ್ತಿಯ ರೂಪಾಂತರವು ರೂ. 1,49 ಲಕ್ಷ ರೂ. ಆಗಿದೆ (ಎಕ್ಸ್ ಶೋ ರೂಂ). ಸದ್ಯ ಕಂಪನಿಯು ಆರ್ಡರ್‌ಗಳನ್ನು ಸ್ವೀಕರುತ್ತಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ವಿತರಣೆ ಪ್ರಾರಂಭವಾಗಲಿದೆ.

ಇದನ್ನೂ ಓದಿ : 5G service :ದೇಶದ ಏಳು ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿರುವ ಕವಾಸಕಿ W175 ನ ಸ್ಟಾಂಡರ್ಡ್‌ ರೂಪಾಂತರವು ಎಬೊನಿ ಬಣ್ಣದ್ದಾಗಿದ್ದು, ನೋಡಲು ಸ್ಟೈಲಿಶ್‌ ಆಗಿ ಕಪ್ಪು ಡೈನಾಮಿಕ್‌ ರೀತಿಯಲ್ಲಿ ಕಾಣಿಸುತ್ತದೆ. ಆದರೆ ಇದರ ವಿಶೇಷ ಆವೃತ್ತಿಯು, ಕ್ಯಾಂಡಿ ಪರ್ಸಿಮನ್ ರೆಡ್ ಬಣ್ಣವನ್ನು ಹೊಂದಿದೆ. W ಎಂಬ 3D ಚಿಹ್ನೆಯು ಇಂಧನ ಟ್ಯಾಂಕ್‌ನ ಮೇಲಿದೆ. ಕವಾಸಕಿ W175 ಅನ್ನು ಭಾರತೀಯ ಮಾರುಕಟ್ಟೆಗೆ ಅಧಿಕೃತ ರೆಟ್ರೊ ಮಾದರಿಯಾಗಿ ವಿನ್ಯಾಸಗೊಳಿಸಲಾಗಿದೆ. 7000 RPM ನಲ್ಲಿ 13 PS ಪವರ್ ಔಟ್‌ಪುಟ್ ಮತ್ತು 6000 RPM ನಲ್ಲಿ 13.3 Nm ನ ಟಾರ್ಕ್ ಔಟ್‌ಪುಟ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 177 CC ಎಂಜಿನ್‌ನಿಂದ ಚಾಲಿತವಾಗುತ್ತದೆ. 5-ಸ್ಪೀಡ್ ಟ್ರಾನ್ಸ್‌ಮಿಷನ್ ಗೇರ್‌ ಮತ್ತು ಎಂಜಿನ್ ಬ್ಯಾಲೆನ್ಸರ್ ಅನ್ನು ಹೊಂದಿದೆ. ರೆಟ್ರೊ ಮಾದರಿಗೆ ಅನುಗುಣವಾಗಿ ಹಿಂಭಾಗ ಮತ್ತು ಮುಂಭಾದಲ್ಲಿ 17-ಇಂಚಿನ ಸ್ಪೋಕ್ ಚಕ್ರಗಳನ್ನು ಹೊಂದಿದೆ.

ಇದು ಸೆಮಿ ಡಬಲ್‌–ಕ್ರೆಡಲ್‌ ಫ್ರೇಮ್‌ ಹೊಂದಿದ್ದು, ಸಿಂಗಲ್‌ ಚಾನಲ್‌ ಎಬಿಎಸ್‌ ಮತ್ತು ಮುಂಭಾಗದಲ್ಲಿ 270 MM ಡಿಸ್ಕ್‌ ಬ್ರೆಕಿಂಗ್‌ ಸೆಟಪ್‌ ಒಳಗೊಂಡಿದೆ. ಹಿಂಭಾಗದ ತುದಿಯಲ್ಲಿ ಡ್ರಮ್‌ ಬ್ರೆಕ್‌ ಸೆಟಪ್‌ ಅನ್ನು ಪಡೆದುಕೊಂಡಿದೆ. ಕವಾಸಕಿ ಮೋಟಾರ್‌ಸೈಕಲ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ಇಂಡಿಯಾ ಕವಾಸಕಿ ಮೋಟರ್‌ನ ಆರ್ & ಡಿ ತಾಂತ್ರಿಕ ಕೇಂದ್ರದಿಂದ ನಿರ್ವಹಿಸಲಾಗುತ್ತದೆ. ಇದು ಸಂಪೂರ್ಣವಾಗಿ ಮೇಕ್‌ ಇನ್‌ ಇಂಡಿಯಾ ಪ್ರಾಜೆಕ್ಟ್‌ ಆಗಿದೆ.

ಇದನ್ನೂ ಓದಿ : Hyundai Venue N-Line : ಹುಂಡೈ ವೆನ್ಯೂ Vs ಹುಂಡೈ ವೆನ್ಯೂ ಎನ್‌–ಲೈನ್‌ : ಏನಿದರ ವಿಶೇಷತೆ?

(Kawasaki W175 is launched in India. Is this to compete with Royal Enfield Hunter)

Comments are closed.