Arjun Tendulkar Yograj Singh : ಸಚಿನ್ ತೆಂಡೂಲ್ಕರ್ ಪುತ್ರನಿಗೆ ಯುವರಾಜ್ ಸಿಂಗ್ ತಂದೆಯೇ ಕೋಚ್

ಬೆಂಗಳೂರು: (Arjun Tendulkar Yograj Singh) ಅಪ್ಪ ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ಬ್ಯಾಟ್ಸ್’ಮನ್, ಕ್ರಿಕೆಟ್ ಜಗತ್ತು ಅವರನ್ನು “ಕ್ರಿಕೆಟ್ ದೇವರು” ಎಂದೇ ಕರೆಯುತ್ತದೆ. ಆದರೆ ಪುತ್ರನಿಗೆ ಮಾತ್ರ ಇನ್ನೂ ಕ್ರಿಕೆಟ್ ಕೈ ಹಿಡಿದಿಲ್ಲ. ಸಚಿನ್ ತೆಂಡೂಲ್ಕರ್ ತಮಮ್ಮ 16ನೇ ವಯಸ್ಸಿನಲ್ಲೇ ಭಾರತ ತಂಡದ ಪರ ಆಡಿದವರು. ಆದರೆ ಅವರ ಪುತ್ರ ಅರ್ಜುನ್ ತೆಂಡೂಲ್ಕರ್’ಗೆ ಈಗ 23 ವರ್ಷ ವಯಸ್ಸು. ಇನ್ನೂ ರಣಜಿ ಟ್ರೋಫಿಯಲ್ಲೂ ಆಡಿಲ್ಲ. ಕ್ರಿಕೆಟ್’ನಲ್ಲಿ ಸಾಧನೆ ಮಾಡಲೇಬೇಕೆಂಬ ಹಠಕ್ಕೆ ಬಿದ್ದಿರುವ ಸಚಿನ್ ಪುತ್ರ ಇದೀಗ ಟೀಮ್ ಇಂಡಿಯಾದ ವಿಶ್ವಕಪ್ ಹೀರೋ ಯುವಾರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಗರಡಿಯಲ್ಲಿ ಪಳಗುತ್ತಿದ್ದಾರೆ.

ಜೆ.ಪಿ ಅತ್ರೇಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಚಂಡೀಗಢದಲ್ಲಿರುವ ಸಚಿನ್ ಪುತ್ರನಿಗೆ ಯುವರಾಜ್ ಸಿಂಗ್ (Yuvraj Singh) ಅವರ ತಂದೆ ಯೋಗರಾಜ್ ಸಿಂಗ್ ಅವರಿಂದ ಬ್ಯಾಟಿಂಗ್ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಯುವರಾಜ್ ಸಿಂಗ್ ತಮ್ಮ ಬಾಲ್ಯದ ದಿನಗಳಲ್ಲಿ ಕ್ರಿಕೆಟ್ ಪಾಠಗಳನ್ನು ಕಲಿತದ್ದು ತಂದೆಯಿಂದಲೇ. ತಂದೆಯಿಂದ ಕಲಿತ ಪಾಠವೇ ಯುವರಾಜ್ ಸಿಂಗ್ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತ್ತು. ನಂತರ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರನಾಗಿ ಬೆಳೆದು ನಿಂತಿದ್ದ ಯುವಿ, ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿದ್ದರು.

ಅರ್ಜುನ್ ತೆಂಡೂಲ್ಕರ್’ಗೆ ಕ್ರಿಕೆಟ್ ಪಟ್ಟುಗಳನ್ನು ಹೇಳಿ ಕೊಡುತ್ತಿರುವ ಯೋಗರಾಜ್ ಸಿಂಗ್ ಸಚಿನ್ ಪುತ್ರನ ಜೊತೆ ಭಾಂಗ್ರಾ ನೃತ್ಯವನ್ನೂ ಮಾಡಿದ್ದು, ಆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈ ತಂಡದ ಪರ ಜ್ಯೂನಿಯರ್ ಕ್ರಿಕೆಟ್ ಆಡಿದ್ದ ಅರ್ಜುನ್ ತೆಂಡೂಲ್ಕರ್, ಕ್ರಿಕೆಟ್ ಬದುಕು ಕಟ್ಟಿಕೊಳ್ಳಲು ಗೋವಾ ತಂಡಕ್ಕೆ ವಲಸೆ ಬಂದಿದ್ದಾರೆ. ಮುಂಬೈ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕ್ಷೀಣಿಸಿರುವ ಕಾರಣ ಗೋವಾಗೆ ಬಂದಿರುವ ಸಚಿನ್ ಪುತ್ರ, ಮುಂದಿನ ದೇಶೀಯ ಕ್ರಿಕೆಟ್’ನಲ್ಲಿ ಗೋವಾ ಪರ ಆಡಲಿದ್ದಾರೆ. ಜೆ.ಪಿ ಅತ್ರೇಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಗೋವಾ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ : Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಮೈದಾನದಿಂದ ಹೊರಗಟ್ಟಿದ ಅಜಿಂಕ್ಯ ರಹಾನೆ

ಇದನ್ನೂ ಓದಿ : Kohli Breaks Dravid Record : ರಾಹುಲ್ ದ್ರಾವಿಡ್ ಎದುರಲ್ಲೇ ದಿ ವಾಲ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ

Arjun Tendulkar is training with Yuvraj Singh Father Yograj Singh

Comments are closed.