Kia Carens : ಕಿಯಾ ಕಾರೆನ್ಸ್‌ ಎಸ್‌ಯುವಿ ಅನಾವರಣ; ಇತರ ಕಾರುಗಳನ್ನು ಸೈಡ್ ಹೊಡಿಯೋದು ಪಕ್ಕಾ!

ಎಸ್‌ಯುವಿ ಕಾರ್ ಖರೀದಿಸುವ ಆಸೆಯಿಟ್ಟುಕೊಂಡಿರುವ ಮೇಲ್ಮಧ್ಯಮ ವರ್ಗದ  ಜನರು ಕುತೂಹಲದಿಂದ ಕಾಯುತ್ತಿರುವ ಕಾರೊಂದು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಅದೇ ಕಿಯಾ ಕಂಪನಿಯ ಕಾರೆನ್ಸ್ ಎಸ್‌ಯುವಿ. ದಕ್ಷಿಣ ಕೋರಿಯಾದ (South Koria) ಕಂಪನಿಯಾದ ಕಿಯಾ ಭಾರತದಲ್ಲಿ ಬಿಡುಗಡೆ ಮಾಡಲಿರುವ ನಾಲ್ಕನೇ ಕಾರ್ ಇದು. ಅಂದಹಾಗೆ ಇಂದಷ್ಟೇ ಕಿಯಾ ಕಾರೆನ್ಸ್ ( Kia Carens Unveiled ) ಕಾರು ಹೇಗಿರಲಿದೆ ಎಂಬುದು ಅನಾವಣರಗೊಂಡಿದ್ದು, ನ್ಯೂಸ್ ನೆಕ್ಟ್‌ ನಿಮಗಾಗಿ ಕಾರಿನ ವೈಶಿಷ್ಟ್ಯಗಳನ್ನು ತೆರೆದಿಡಲಿದೆ.

ಪೆಟ್ರೋಲ್ ಮತ್ತು ಡೀಸೆಲ್- ಎರಡೂ ಆವೃತ್ತಿಗಳಲ್ಲಿ ಕಿಯಾ ಕಾರೆನ್ಸ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. 2022ರ ಮೊದಲ ಮೂರು ತಿಂಗಳಲ್ಲಿ ಅಧಿಕೃತವಾಗಿ ಗ್ರಾಹಕರಿಗೆ ಲಭ್ಯವಾಗಲಿದ್ದು ಈಗಾಗಲೇ ಮುಂಚಿತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಾರುತಿ ಸುಜುಕಿಯ ಪ್ರಸಿದ್ಧ ಎರ್ಟಿಗಾ ಎಸ್‌ಯುವಿಗೆ ಮತ್ತು ಟೊಯೊಟಾದ ಇನೊವಾ ಕ್ರಿಸ್ಟಾ ಮಾಡೆಲ್‌ಗಳಿಗೆ ನೇರ ಸ್ಪರ್ಧೆ ಒಡ್ಡಿರುವ ಕಿಯಾ ಕಾರೆನ್ಸ್ ಎದುರಾಳಿ ಕಂಪನಿಗಳಿಗೆ ಈಗಲೆ ಕೊಂಚ ಭಯ ಹುಟ್ಟುಹಾಕಿದೆ. ಎಕ್ಸ್‌ ಶೋರೂಂ ಬೆಲೆ 12 ಲಕ್ಷದಿಂದ ಆರಂಭವಾಗಲಿದ್ದು ಟಾಪ್ ಎಂಡ್‌ಗೆ 18 ಲಕ್ಷದವರೆಗೆ ಕಿಯಾ ಕಾರೆನ್ಸ್‌ನ ಬೆಲೆಯಿದೆ.

ಟೈರ್ ಪ್ರೆಶರ್ ಮಾನಿಟರಿಂಗ್, 6 ಏರ್ ಬ್ಯಾಗ್, ಎಲೆಕ್ಟ್ರಿಕ್ ಫೋಲ್ಡಿಂಗ್ ಸೀಟುಗಳು, ಆ್ಯಂಬಿಯನ್ಸ್ ಮೂಡ್ ಲೈಟಿಂಗ್, ಎಂಟು ಸ್ಪೀಕರ್‌ಗಳ ಬೋಸ್ ಮ್ಯೂಸಿಕ್ ಸಿಸ್ಟಮ್ ಮುಂತಾದ ಸಖತ್ ಆಪ್ಶನ್‌ಗಳನ್ನು ಈ ಕಾರು ಹೊಂದಿರಲಿದೆ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ. ಜೊತೆಗೆ ಸದ್ಯ, ಇಂಪೀರಿಯಲ್ ಬ್ಲ್ಯೂ, ಮಾಸ್ ಬ್ರೌನ್ ಮತ್ತು ಸಿಲ್ವರ್ ಸೇರಿ ಮೂರು ಬಣ್ಣಗಳಲ್ಲಿ ಮಾತ್ರ ಕಾರು ಮಾರುಕಟ್ಟೆಗೆ ಬರಲಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಣ್ಣಗಳಲ್ಲಿ ಬಿಡುಗಡೆಗೊಳ್ಳಲಿದೆ.

ಕಾರೆನ್ಸ್ ಕಾರನ್ನು ಕಿಯಾ ಇತರ ಕಂಪನಿಗಳ ತಲೆಮೇಲೆ ಹೊಡೆಯುವ ಉದ್ದೇಶದಿಂದಲೇ ಬಿಡುಗಡೆ ಮಾಡಿರುವ ಸಾಧ್ಯತೆಯಿದೆ. ಎಕೆಂದರೆ,ಇದರ ವೈಶಿಷ್ಟ್ಯ ಗಮನಿಸಿ: ಇದೇ ರೇಂಜ್‌ನ ಇತರ ಕಂಪನಿಗಳಿಗಿಂತ ಹೆಚ್ಚು ಫೀಚರ್ಸ್‌, ವಿಶಾಲ ಒಳಾಂಗಣ ಕಿಯಾ ಕೆರಾನ್ಸ್‌ನಲ್ಲಿದೆ.  4540 ಎಂಎಂ ಉದ್ದ, 1800 ಎಂಎಂ ಅಗಲ, 1700 ಎಂಎಂ ಎತ್ತರ, 2780 ಎಂಎಂ ವ್ಹೀಲ್ ಬೆಸ್ ಮತ್ತು 195 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಭಾರತದ ರೋಡಿಗಿಳಿಯಲಿರುವ ಕಿಯಾ ಕಾರೆನ್ಸ್ ಸಖತ್ ಧೂಳೆಬ್ಬಿಸುವುದಂತೂ ಖಚಿತವಾಗಿದೆ.

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

( Kia Carens Unveiled in India read specifications Variants Design Features)

Comments are closed.