Is Sheena Bora alive : ಶೀನಾ ಬೋರಾ ಕೊಲೆ ಕೇಸ್​ಗೆ ಟ್ವಿಸ್ಟ್​​ ನೀಡಿದ ಇಂದ್ರಾಣಿ ಮುಖರ್ಜಿ ಪತ್ರ..!ವಿಧಿವಿಜ್ಞಾನ ಪ್ರಯೋಗಾಲಯ ಹೇಳೋದೇನು..?

ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಇದೀಗ ರೋಚಕ ತಿರುವು ದೊರಕಿದೆ. 2012ರಲ್ಲಿ ಮಗಳು ಶೀನಾ ಬೋರಾಳನ್ನು(Is Sheena Bora alive) ಕೊಲೆ ಮಾಡಿದ್ದ ಆರೋಪ ಹೊತ್ತಿರುವ ಇಂದ್ರಾಣಿ ಮುಖರ್ಜಿ ತನ್ನ ಮಗಳು ಸತ್ತಿಲ್ಲ ಬದುಕಿದ್ದಾಳೆ ಎಂದು ಹೇಳಿದ್ದಾರೆ.ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ ಈ ಸಂಬಂಧ ಸಿಬಿಐ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.


ಶೀನಾ ಬೋರಾ ಕೊಲೆ ಪ್ರಕರಣ ಸಂಬಂಧ ಈ ರೋಚಕ ಬೆಳವಣಿಗೆಯ ಬಗ್ಗೆ ಸಿಬಿಐ ಅಧಿಕಾರಿಗಳು ಇದೀಗ ಬಾಯ್ಬಿಟ್ಟಿದ್ದಾರೆ. ಆದರೆ ಸಿಕ್ಕ ಶವವು ಶೀನಾ ಬೋರಾದ್ದು ಎಂದು ವಿಧಿವಿಜ್ಞಾನ ಪ್ರಯೋಗಾಲಯವು ಸಾಬೀತು ಪಡಿಸಿರೋದ್ರಿಂದ ಇಂದ್ರಾಣಿ ಮುಖರ್ಜಿಯ ಈ ಪತ್ರಕ್ಕೆ ಯಾವುದೇ ಮೌಲ್ಯವಿಲ್ಲ ಎನ್ನಬಹುದಾಗಿದೆ.


ಇಂದ್ರಾಣಿಯು ಸಿಬಿಐಗೆ ನೀಡಿದ ಪತ್ರದಲ್ಲಿ ಜೈಲಿನಲ್ಲಿ ಭೇಟಿಯಾದ ಮಹಿಳೆಯೊಬ್ಬರು ತಾನು ಶೀನಾ ಬೋರಾಳನ್ನು ಜೀವಂತವಾಗಿ ಕಾಶ್ಮೀರದಲ್ಲಿ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಈ ಸಂಬಂಧ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.


ಏಮ್ಸ್​ನ ಫಾರೆನ್ಸಿಕ್​ ವಿಭಾಗವು ವಶಪಡಿಸಿಕೊಳ್ಳಲಾದ ಅಸ್ಥಿಪಂಜರವು ಶೀನಾ ಬೋರಾರದ್ದು ಎಂದು ಹೇಳಿದೆ. ಹೊರತೆಗೆಯಲಾದ ಶವದ ಎತ್ತರ, ಆಯಸ್ಸು ಹಾಗೂ ಲಿಂಗ ಸೇರಿದಂತೆ ಅನೇಕ ಅಂಶಗಳು ಅದು ಶೀನಾ ಬೋರಾರದ್ದೇ ಶವ ಎಂಬುದನ್ನು ಪುಷ್ಠೀಕರಿಸಿವೆ.


ಶೀನಾ ಇಂದ್ರಾಣಿಯ ಮೊದಲ ಪತಿಯ ಪುತ್ರಿಯಾಗಿದ್ದಳು. ಈಕೆ ಮುಂಬೈನಲ್ಲಿರುವ ಮನೆಯನ್ನು ಪಡೆಯಲು ತನ್ನ ತಾಯಿ ಇಂದ್ರಾಣಿಗೆ ಬ್ಲಾಕ್​ಮೇಲ್​ ಮಾಡಿದ್ರಿಂದ ಇಂದ್ರಾಣಿ ಮುಖರ್ಜಿ 2012ರಲ್ಲಿ ಶೀನಾರನ್ನು ಕತ್ತು ಹಿಸುಕಿ ಕೊಂದಿದ್ದರು. ಇದಾದ ಬಳಿಕ 2015ರಲ್ಲಿ ಮುಂಬೈ ಪೊಲೀಸರು ಇಂದ್ರಾಣಿಯನ್ನು ಬಂಧಿಸಿ ಇತ್ತೀಚಿಗೆ ಬೈಕುಲ್ಲಾ ಜೈಲಿನಲ್ಲಿ ಇರಿಸದ್ದರು. ಕಳೆದ ತಿಂಗಳಷ್ಟೇ ಬಾಂಬೆ ಹೈಕೋರ್ಟ್ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

Is Sheena Bora alive as claimed by Indrani Mukerjea? Forensic reports reveal the truth

ಇದನ್ನು ಓದಿ : Kerala High Court :‘ಮಗಳ ಮದುವೆಗೆ ಪೋಷಕರು ನೀಡುವ ಉಡುಗೊರೆ ವರದಕ್ಷಿಣೆಯಲ್ಲ’ : ಕೇರಳ ಹೈಕೋರ್ಟ್​ ಮಹತ್ವದ ಆದೇಶ

ಇದನ್ನೂ ಓದಿ :MM Naravane :ಸೇನಾ ಸಿಬ್ಬಂದಿ ಮುಖ್ಯಸ್ಥರ ಅಧ್ಯಕ್ಷರಾಗಿ ಜನರಲ್​ ಎಂ.ಎಂ ನರವಾಣೆ ನೇಮಕ

Comments are closed.