ವಿಶೇಷ ವಿನ್ಯಾಸದಿಂದ ಗ್ರಾಹಕರನ್ನು ಸೆಳೆಯುತ್ತಿದೆ ಕಿಯಾ ಸೊನೆಟ್

0

ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಯ ಕಾರು ಅನಾವರಣಗೊಂಡಿದೆ. ವಿಶೇಷ ವಿನ್ಯಾಸ ಹಾಗೂ ಇಂಜಿನ್ ಆಯ್ಕೆಯನ್ನು ಹೊಂದಿರುವ ಸೊನೆಟ್ ಕಾರು ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಸೊನೆಟ್ ಕಾರು 17 ವೆರಿಯಂಟ್ ಗಳಲ್ಲಿ ಲಭ್ಯವಾಗಲಿದ್ದು, 8 ಬಣ್ಣಗಳ ಕಾರು ಗ್ರಾಹಕರನ್ನು ಸೆಳೆಯುತ್ತಿದೆ. ಅಲ್ಲದೇ ಗ್ರಾಹಕರ ಅನುಕೂಲತೆ ತಕ್ಕಂತೆ ಮೂರು ಎಂಜಿನ್ ಆಯ್ಕೆಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಡ್ಯುಯಲ್ ಮಫ್ಲರ್ ಕೂಡಾ ಆಕರ್ಷಕವಾಗಿದ್ದು, ಮುಂಭಾಗದಲ್ಲಿ ಸ್ಕೀಡ್ ಪ್ಲೇಟ್, ಫ್ರಂಟ್ ಮತ್ತು ರಿಯರ್ ಬಂಪರ್, 16-ಇಂಚಿನ ಡ್ಯುಯಲ್ ಟೋನ್ ಅಯಾಲ್ ವೀಲ್ಹ್ ಮತ್ತು ಸ್ಕ್ವಾರಿಷ್ ಆರ್ಚ್ ನೀಡಲಾಗಿದೆ.

ಡ್ಯುಯಲ್ ಟೋನ್ ಬ್ಲ್ಯಾಕ್ ಔಟ್ ರೂಫ್, ಸಿಲ್ವರ್ ರೈಲ್ಸ್, ಟರ್ಬೋ ಶೇಫ್ ಸ್ಕೀಡ್ ಪ್ಲೇಟ್, ಟೈಗರ್ ನೋಸ್ ಫ್ರಂಟ್ ಗ್ರಿಲ್, ತ್ರಿ ಡಿ ಡೈಮೆಷನ್ ಮೆಷ್ ಕೂಡಾ ಈ ಕಾರಿನಲ್ಲಿದ್ದು, ಇವು ಕಾರಿನ ಹೊರ ಭಾಗದ ನೋಟಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ , ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 300, , ಹ್ಯುಂಡೈ ವೆನ್ಯೂ ಕಾರುಗಳಿಗೆ ಭರ್ಜರಿ ಪೈಪೋಟಿಯನ್ನು ನೀಡಲಿದೆ.

ಕಾರನ್ನು ವಿಶೇಷವಾಗಿ ನಿರ್ಮಿಸಲಾಗಿದ್ದು, ಹೊರ ಭಾಗದ ವಿನ್ಯಾಸ ಮಾತ್ರವಲ್ಲದೇ ಕಾರಿನ ಒಳಾಂಗಣದಲ್ಲಿಯೂ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಲಾಗಿದೆ.

3,995-ಎಂಎಂ ಉದ್ದ, 1,790-ಎಂಎಂ ಅಗಲ, 1,647-ಎಂಎಂ ಎತ್ತರ, 2,500-ಎಂಎಂ ವೀಲ್ಹ್ ಬೆಸ್, 211-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 392-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಒಳಗೊಂಡಿದೆ.

ಕಿಯಾ ಸೊನೆಟ್ ಕಾರಿನನಲ್ಲಿ ಆರಾಮದಾಯ ಲೆದರ್ ವ್ಯಾಪ್ ಸೀಟ್ ಖದರ್ ಹೆಚ್ಚಿಸುತ್ತಿದ್ದು, ಜೊತೆಗೆ ರಿಯರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಏರ್ ಪ್ಲೂರಿಫ್ಲೈರ್, ವೆಂಟಿಲೆಟೆಡ್ ಫ್ರಂಟ್, ವಯರ್ ಲೆಸ್ ಚಾರ್ಜರ್, ಸೇರಿದಂತೆ ಹಲವು ಅನುಕೂಲತೆಗಳನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ.

ಹೊಸ ಸೊನೆಟ್ ಕಾರು ಸೆಲ್ಟೊಸ್ ಮಾದರಿಯಲ್ಲಿ ಟೆಕ್ ಲೈನ್ ಮತ್ತು ಜಿಟಿ ಲೈನ್ ವೆರಿಯೆಂಟ್ ಹೊಂದಿದ್ದು, ಹೊಸ ಕಾರು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಟರ್ಬೋ ಪೆಟ್ರೋಲ್ ಮಾದರಿಯನ್ನು ಹೊಂದಿದೆ.

ಇನ್ನು ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ ಆಯ್ಕೆ ನೀಡಲಾಗಿದೆ.


ಕಿಯಾ ಸೊನೆಟ್ 1.2 ಲೀಟರ್ ಪೆಟ್ರೋಲ್ ಮಾದರಿಯ ಕಾರು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯ ಜೊತೆಗೆ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದ್ದರೆ, 1.5 ಲೀಟರ್ ಡೀಸೆಲ್ ಮಾದರಿಯು 6 ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒಳಗೊಂಡಿದೆ.

ಇಷ್ಟೇ ಅಲ್ಲದೇ ಟರ್ಬೋ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಜಿಟಿ ಲೈನ್ ಮಾದರಿಯಾಗಿರುವ ಟರ್ಬೋ ಮಾದರಿಯೇ ಸೊನೆಟ್ ಕಾರಿನ ಹೈಎಂಡ್ ಮಾದರಿಯನ್ನು ಒಳಗೊಂಡಿದೆ.

ಮುಂದಿನ ತಿಂಗಳು ಕಿಯಾ ಸೊನೆಟ್ ಮಾರುಕಟ್ಟೆಗೆ ಬರಲಿದ್ದು, ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಕಾರಿನ ಬೆಲೆ ಎಕ್ಸ್‌ಶೋರೂಂ ರೂ.7 ಲಕ್ಷ ಬೆಲೆ ಆಗಿದ್ರೆ, ಟಾಪ್ ಎಂಡ್ ಕಾರು ರೂ.11.50 ಲಕ್ಷ ರೂಪಾಯಾಗಿದೆ.

Leave A Reply

Your email address will not be published.