ಹವಾ ಸೃಷ್ಟಿಸಿದೆ ಕ್ರೇಜಿಸ್ಟಾರ್ ಪುತ್ರನ ತ್ರಿವಿಕ್ರಮ ಟೀಸರ್

0

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ ಚಿತ್ರದ ಟೀಸರ್ ರಿಲೀಸ್ ಆಗಿದೆ.

ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಸಖತ್ ಸೌಂಡ್ ಮಾಡ್ತಾ ಇರುವ ತ್ರಿವಿಕ್ರಮ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಪುತ್ರ ವಿಕ್ರಮ್ ಅಭಿನಯದ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದರು. ಚಿತ್ರದ ಪೋಸ್ಟರ್ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಇದೀಗ ಟೀಸರ್ ಬೊಂಬಾಟಾಗಿ ಮೂಡಿಬಂದಿದೆ.

ನಾನು ಅವಳು ಸಿನಿಮಾದ ಮೂಲಕ ವಿಕ್ರಂ ರವಿಚಂದ್ರನ್ ಚಿತ್ರರಂಗಕ್ಕೆ ಎಂಟ್ರಿಕೊಡಬೇಕಿತ್ತು. ಆದ್ರೆ ಆ ಸಿನಿಮಾ ನಿಂತ ಕಾರಣಕ್ಕೆ ಇದೀಗ ತ್ರಿವಿಕ್ರಮ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿಯೇ ಎಂಟ್ರಿಕೊಡ್ತಿದ್ದಾರೆ.

ಹೈವೋಲ್ಟೆಜ್ ಲವ್ ಸ್ಟೋರಿಯನ್ನೊಳಗೊಂಡಿರುವ ಸಿನಿಮಾಕ್ಕೆ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಈಗಾಗಲೇ ‘ರೋಜ್’ ಹಾಗೂ ‘ಮಾಸ್ ಲೀಡರ್’ ಸಿನಿಮಾ ಮಾಡಿದ್ದ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಂತೋಷ್ ರೈ ಪತಾಜೆ ಕ್ಯಾಮರಾ ವರ್ಕ್ ನಲ್ಲಿ ಚಿತ್ರ ‘ಪಂಚತಂತ್ರ’ ಸಿನಿಮಾದ ಬೋಲ್ಡ್ ನಟಿ ಅಕ್ಷರಾ ಗೌಡ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Leave A Reply

Your email address will not be published.