Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡ ಸ್ಟಾರ್ ಆಲ್ರೌಂಡರ್, ಅನುಭವೀ ಆಟಗಾರ ಕೃಷ್ಣಪ್ಪ ಗೌತಮ್ (Krishnappa Gowtham May leave Karnataka) ಕರ್ನಾಟಕ ತಂಡವನ್ನು ತೊರೆದು ಬೇರೆ ರಾಜ್ಯಕ್ಕೆ ವಲಸೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಆಯ್ಕೆ ಸಮಿತಿಯ ಮುಖ್ಯಸ್ಥ ಫಝಲ್ ಖಲೀಲ್ ಜೊತೆಗಿನ ಮನಸ್ತಾಪದ ಕಾರಣ ಗೌತಮ್ ರಾಜ್ಯ ತೊರೆಯಲು ನಿರ್ಧರಿಸಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ (Karnataka State Cricket Association) ನಂಬಲರ್ಹ ಮೂಲಗಳು ತಿಳಿಸಿವೆ.

ಈಗಾಗಲೇ ಕರ್ನಾಟಕ ತಂಡದ ಮಾಜಿ ನಾಯಕರಾದ ಆರ್.ವಿನಯ್ ಕುಮಾರ್ ಮತ್ತು ರಾಬಿನ್ ಉತ್ತಪ್ಪ ರಾಜ್ಯ ತಂಡವನ್ನು ತೊರೆದು ಬೇರೆ ರಾಜ್ಯಗಳ ಪರ ಆಡಿದ್ದರು. ಈ ಸಾಲಿಗೆ ಕೆ.ಗೌತಮ್ ಹೊಸ ಸೇರ್ಪಡೆ ಎನ್ನಲಾಗ್ತಿದೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿ ಆರಂಭಕ್ಕೂ ಮುನ್ನ ಆಯ್ಕೆ ಸಮಿತಿ ಮುಖ್ಯಸ್ಥ ಫಝಲ್ ಖಲೀಲ್ ಮತ್ತು ಕೆ.ಗೌತಮ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎಂದು KSCA ಮೂಲಗಳು ಹೇಳುತ್ತಿವೆ.

ಕರ್ನಾಟಕ ತಂಡವನ್ನು ತೊರೆಯುವ ನಿರ್ಧಾರಕ್ಕೆ ಬಂದಿರುವ ಗೌತಮ್, ಬರೋಡ ತಂಡದ ಪರ ಆಡುವ ಸಾಧ್ಯತೆಗಳಿವೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. ಬರೋಡ ತಂಡದ ನಾಯಕ ಕೃಣಾಲ್ ಪಾಂಡ್ಯ ಕೂಡ ಲಕ್ನೋ ತಂಡದಲ್ಲಿದ್ದಾರೆ. ಬರೋಡ ತಂಡ ಅನುಭವಿ ಆಲ್ರೌಂಡರ್ ದೀಪಕ್ ಹೂಡ ರಾಜಸ್ಥಾನ ತಂಡ ಸೇರಿಕೊಂಡಿರುವ ಕಾರಣ, ಬರೋಡ ತಂಡದಲ್ಲಿ ಹೂಡ ಸ್ಥಾನವನ್ನು ಕೃಷ್ಣಪ್ಪ ಗೌತಮ್ ತುಂಬುವ ಸಾಧ್ಯತೆಯಿದೆ.

33 ವರ್ಷದ ಕೆ.ಗೌತಮ್ ಭಾರತ ಪರ ಒಂದು ಏಕದಿನ ಪಂದ್ಯವಾಡಿದ್ದಾರೆ. 48 ಪ್ರಥಮ ದರ್ಜೆ ಪಂದ್ಯಗಳಿಂದ 185 ವಿಕೆಟ್ ಮತ್ತು 1125 ರನ್, 49 ಲಿಸ್ಟ್ ‘ಎ’ ಪಂದ್ಯಗಳಿಂದ 73 ವಿಕೆಟ್ ಮತ್ತು 560 ರನ್, 71 ಟಿ20 ಪಂದ್ಯಗಳಿಂದ 53 ವಿಕೆಟ್ ಹಾಗೂ 610 ರನ್ ಗಳಿಸಿದ್ದಾರೆ.

ಇದನ್ನೂ ಓದಿ : ICC T20 World Cup 2022 : ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆ, ಆಶಿಶ್‌ ನೆಹ್ರಾ ಮಹತ್ವದ ಘೋಷಣೆ

ಇದನ್ನೂ ಓದಿ : ICC T20 World Cup : ಇದೇ ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯಿಂಗ್ XI ; ಇದು News Next ಚಾಯ್ಸ್

ಇದನ್ನೂ ಓದಿ : Big Day in World Cricket : ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟು ಇಂದಿಗೆ 11 ವರ್ಷ

Exclusive KSCA Selection Committee Clash Krishnappa Gowtham May leave Karnataka

Comments are closed.