Maruti Suzuki : ಆಲ್‌–ನ್ಯೂ XL6 2022 ಬಿಡುಗಡೆ ಮಾಡಿದ ಮಾರುತಿ ಸುಜುಕಿ: ಅದರ ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿದೆ

ಭಾರತದ ಅತಿ ದೊಡ್ಡ ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ (Maruti Suzuki ) ಗುರುವಾರ XL6 2022 ಅನ್ನು ಬಿಡುಗಡೆ ಮಾಡಿದೆ. ಇದರ ಪ್ರಾರಂಭಿಕ ದರವು 11.29 ಲಕ್ಷ ಆಗಿದೆ.(ಎಕ್ಸ್‌–ಶೋರೂಂ ). ಮತ್ತೂ ಮುಂದುವರಿದು ಅತಿ ಹೆಚ್ಚಿನ ವಿಶೇಷತೆ ಇರುವ ಆಲ್ಪಾ+ ಎಟಿ ಯ ದರವು 14.55 ಲಕ್ಷವಾಗಿದೆ.

ಕಾರಿನ ಒಳಗೆ ಕೆಲವು ಐಚ್ಛಿಕ ಬದಲಾವಣೆಗಳು ಇವೆ. ನ್ಯೂ XL6 ಜೀಟಾ, ಆಲ್ಫಾ ಮತ್ತು ಆಲ್ಫಾ+ ಎಂದು ಮೂರು ವಿಧಗಳಲ್ಲಿ ಲಭ್ಯವಿದೆ. XL6 ಗ್ರಿಲ್‌ ಮತ್ತು ಅಲಾಯ್‌ಗಳಿಂದ ಸುಧಾರಿತವಾಗಿದೆ. ಒಳಗಡೆ 360 ಡಿಗ್ರೀ ಕ್ಯಾಮರಾ, ಸಂಪರ್ಕಿತ ಕಾರ್‌ನ ವೈಶಿಷ್ಟಗಳು ಮತ್ತು 4 ಏರ್‌ ಬ್ಯಾಗ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ XL6 ಹೊಸ ಕಾರು 1.5 ಲೀಟರ್‌ K15C ಡ್ಯುಯಲ್‌ಜೆಟ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಈ ಎಂಜಿನ್‌ 115 hp ಹೆಚ್ಚಿಗೆ ಸಾಮರ್ಥ್ಯ ಹೊಂದಿದೆ. ಅದು ಈಗಿನ ಸದ್ಯದ ಮಾಡಲ್‌ ಕಾರಿನ ಸಾಮರ್ಥ್ಯದ 10 hp ಅಧಿಕವಾಗಿದೆ. ಸದ್ಯ ಇರುವ ಮಾರುತಿ ಸುಜುಕಿ XL6 105hp ಸಾಮರ್ಥ್ಯ ಹೊಂದಿದೆ.

ಹೊಸ XL6 ನ ಗೇರ್‌ಬಾಕ್ಸ್‌ ಪ್ಯಾಡಲ್‌ ಶಿಫ್ಟರ್‌ಗಳ ಜೊತೆಗೆ 6 ಸ್ಪೀಡ್‌ ಟಾರ್ಕ್‌ ಪರಿವರ್ತಕ ಸ್ವಯಂಚಾಲಿತ ಪ್ರಸರಣ ನೀಡುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಬಲೆನೊ ಹ್ಯಾಚ್‌ಬ್ಯಾಕ್‌ನಲ್ಲಿರುವಂತೆ ಡ್ಯುಯಲ್‌ಜೆಟ್‌ ತಂತ್ರಜ್ಞಾನವನ್ನು ನೀಡಲಾಗಿದೆ. ಹೊಸ KL6 ನ ಇಂಧನ ದಕ್ಷತೆಯ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.

ಕ್ಯಾಬಿನ್‌ ಒಳಗೆ, ಮಾರುತಿ XL6 ಇದು ಮಾರುತಿ ಬುಲೆನೊದಂತೆಯೇ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಕಾರಿನಲ್ಲಿ ದೊಡ್ಡ ಪರದೆಯ ಗಾತ್ರದ ಜೊತೆಗೆ ಹೊಸ ಇನ್ಫೋಟೈನ್ಮೆಂಟ್‌ ಸಿಸ್ಟಮ್‌ ಅನ್ನು ನಾವು ನಿರೀಕ್ಷಿಸಬಹುದಾಗಿದೆ.

ಮಾರುತಿ ಸುಜುಕಿ XL6 2022 ದ ಸಂಪೂರ್ಣ ದರ ಪಟ್ಟಿ ಹೀಗಿದೆ.

  • ಝಿಟಾ ಮ್ಯಾನುವಲ್‌– 11.29 ಲಕ್ಷ ಮತ್ತು ಆಟೋಮೆಟಿಕ್‌– 12.79 ಲಕ್ಷ
  • ಆಲ್ಫಾ ಮ್ಯಾನುವಲ್‌– 12.29 ಲಕ್ಷ ಮತ್ತು ಆಟೋಮೆಟಿಕ್‌– 13.79 ಲಕ್ಷ
  • ಆಲ್ಫಾ+ ಮ್ಯಾನುವಲ್‌– 12.99ಲಕ್ಷ ಮತ್ತು ಆಟೋಮೆಟಿಕ್‌– 14.39 ಲಕ್ಷ
  • ಆಲ್ಫಾ+ಡ್ಯುಯಲ್‌ ಟೋನ್‌ ಮ್ಯಾನುವಲ್‌– 13.05 ಲಕ್ಷ ಮತ್ತು ಆಟೋಮೆಟಿಕ್‌– 14.55 ಲಕ್ಷ

ಸ್ಪರ್ಧೆಯ ವಿಷಯದಲ್ಲಿ, ಮಾರುತಿ XL6 ಕಿಯಾ ಕ್ಯಾರೆನ್ಸ್‌ ಮತ್ತು ಮಹೀಂದ್ರಾ ಮರಾಝೋದಿಂದ ಸ್ಫರ್ಧೆ ಎದುರಿಸಲಿದೆ. ಏಕೆಂದರೆ ಎರಡೂ ವಾಹನಗಳು ಒಂದೇ ವರ್ಗಕ್ಕೆ ಬರುತ್ತವೆ.

ಇದನ್ನೂ ಓದಿ : Kia carens : ಬಿಡುಗಡೆಯಾದ ಒಂದೇ ತಿಂಗಳಲ್ಲಿ ಬೆಲೆ ಹೆಚ್ಚಿಸಿದ ಕಿಯಾ ಕ್ಯಾರೆನ್ಸ್ : ಕಡಿಮೆ ಬೆಲೆಯಲ್ಲಿ ಸಿಗುತ್ತೆ ಎಕ್ಸುರಿ ಕಾರು

ಇದನ್ನೂ ಓದಿ :Diesel Car to Electric Car: ನಿಮ್ಮ ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಕಾರನ್ನಾಗಿ ಪರಿವರ್ತಿಸುವುದು ಹೇಗೆ?

(Maruti Suzuki XL6 2022 launched check the price and specification here)

Comments are closed.