Matter Aera : 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾದ ಮ್ಯಾಟರ್‌ ಐರಾ ಎಲೆಕ್ಟ್ರಿಕ್‌ ಬೈಕ್‌ನ ಫಸ್ಟ್‌ ಲುಕ್‌ ಹೇಗಿದೆ ಗೊತ್ತಾ…

ಅಹಮದಾಬಾದ್‌ ಮೂಲದ ಸ್ಟಾರ್ಟ್‌ಅಪ್‌ ಕಂಪನಿ ಮ್ಯಾಟರ್‌ ಎನರ್ಜಿ (Matter Energy), ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ಗಳನ್ನು ತಯಾರಿಸುವಲ್ಲಿ ಕೆಲಸ ಮಾಡುತ್ತಿದೆ. ಅದು 100 ರಿಂದ 125 cc ವರೆಗಿನ ಗೇರ್‌ ಬೈಕ್‌ಗಳ ಬಗ್ಗೆಯೂ ಗಮನಹರಿಸಿದೆ. ಈಗ ಮ್ಯಾಟರ್‌ ಎನರ್ಜಿ ತನ್ನ ಎಲೆಕ್ಟ್ರಿಕ್‌ ಬೈಕ್‌ ಐರಾ (Matter Aera) ವನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದರ ಬೆಲೆಯನ್ನು 1.4 ರಿಂದ 1.5 ಲಕ್ಷ ರೂ. ಗಳವರೆಗೆ ನಿಗದಿ ಪಡಿಸಿದೆ. ಆದರೆ ಇದು 4 ರೂಪಾಂತರಗಳಲ್ಲಿ ಬರುತ್ತದೆ. ಐರಾ 4000, ಐರಾ 5000, ಐರಾ 5000+, ಐರಾ 6000+ಗಳಾಗಿವೆ. ಮ್ಯಾಟರ್‌ ಐರಾ 5000 ಗಾಗಿ ಪ್ರೀ–ಬುಕಿಂಗ್‌ ಬೆಲೆ 1,43,999 ರೂಗಳಾದರೆ, ಐರಾ 5000+ ಬೆಲೆ 1,53,999 ರೂ. ನಿಗದಿಪಡಿಸಲಾಗಿದೆ. ಈ ಗನೀಡಿರುವ ಬೆಲೆಗಳು ಪರಿಚಯಾತ್ಮಕ ಬೆಲೆಯಾಗಿದ್ದು, ಅವುಗಳನ್ನು ಶೀಘ್ರದಲ್ಲೇ ಪರಿಷ್ಕರಿಸಬಹುದು.

ಹೇಗಿದೆ ಬ್ಯಾಟರಿ?
ಮ್ಯಾಟರ್ ಐರಾ, 5kWh ಮತ್ತು 6kWh ಅನ್ನು ಒಳಗೊಂಡಿರುವ ಎರಡು ರೀತಿಯ ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯ ಪ್ರಕಾರ, ಲಿಕ್ವಿಡ್-ಕೂಲ್ಡ್ ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ಅದರ ವ್ಯಾಪ್ತಿಯು 5kWh ಬ್ಯಾಟರಿ ಪ್ಯಾಕ್‌ನಲ್ಲಿ 125 ಕಿಮೀ, ಅಂದರೆ ಇದು ಒಂದೇ ಚಾರ್ಜ್‌ನಲ್ಲಿ 125 ಕಿಮೀ ಓಡಬಹುದು. ಈ ಬೈಕ್ 10kW ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕು ಕೇವಲ 6 ಸೆಕೆಂಡುಗಳಲ್ಲಿ 0 ರಿಂದ 60 ಕಿಮೀ ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಚಾರ್ಜ್‌ ಮಾಡಲು ಬೇಕಾಗುವ ಸಮಯ ಎಷ್ಟು?
ಮ್ಯಾಟರ್ ಐರಾವನ್ನು ವೇಗದ ಚಾರ್ಜರ್‌ನೊಂದಿಗೆ 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಆದರೆ, ಸಾಮಾನ್ಯ ಚಾರ್ಜರ್‌ನಲ್ಲಿ ಸಂಪೂರ್ಣವಾಗಿ ಚಾರ್ಜ್‌ ಆಗಲು ಇದು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ನೀವು 3 ರೈಡಿಂಗ್ ಮೋಡ್‌ಗಳನ್ನು ನೋಡಬಹುದಾಗಿದೆ. ಜೊತೆಗೆ 4-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಲಿಂಕ್ ಮಾಡಲಾದ ಹೈಪರ್‌ಶಿಫ್ಟ್ ಅನ್ನು ಅಳವಡಿಸಲಾಗಿದೆ. ಈ ಬೈಕ್‌ಗೆ ಡಿಸ್ಕ್ ಬ್ರೇಕ್ ನೀಡಲಾಗಿದೆ ಮತ್ತು ಡ್ಯುಯಲ್ ಸೆನ್ಸಾರ್ ಸಿಂಗಲ್ ಚಾನೆಲ್ ಎಬಿಎಸ್ ಸಿಸ್ಟಂ ಅಳವಡಿಸಲಾಗಿದೆ.

ವೈಶಿಷ್ಟ್ಯಗಳು:
ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ, ಇದು 4G ಕನೆಕ್ಟಿವಿಟಿಯನ್ನು ಬೆಂಬಲಿಸುವ 7-ಇಂಚಿನ LCD ಕೆಪಾಸಿಟಿವ್ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದಲ್ಲದೇ, ವೈ-ಫೈ ಮತ್ತು ಬ್ಲೂಟೂತ್ 5.0, ಆಫ್‌ಲೈನ್ ನ್ಯಾವಿಗೇಷನ್, ಪಾರ್ಕ್ ಅಸಿಸ್ಟ್, ಗೇರ್ ಸೂಚಕ ಸೇರಿದಂತೆ ಇತರ ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ. ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಡೀಲರ್‌ಶಿಪ್‌ಗಳನ್ನು ತೆರೆಯಲಿದ್ದು ಮತ್ತು ವಿತರಣೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ವಿನ್ಯಾಸದ ಬಗ್ಗೆ ಹೇಳುವುದಾದರೆ, ಅದರ ನೋಟವು ಸಾಕಷ್ಟು ಆಕರ್ಷಕವಾಗಿದೆ. ಎಲ್ಇಡಿ ಹೆಡ್ಲ್ಯಾಂಪ್, ಅಲಾಯ್ ವೀಲ್ ವಿನ್ಯಾಸದೊಂದಿಗೆ ಲಭ್ಯವಿದೆ. ಮೇಟರ್ ಐರಾ 4-ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬಂದ ದೇಶದ ಮೊದಲ ಬೈಕ್ ಆಗಿದೆ. ಈ ಬೈಕ್ ಟಾರ್ಕ್‌ ಕ್ರೆಟೊಸ್‌ ಮತ್ತು ರೆವೊಲ್ಟ್‌ RV400 ನಂತಹ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

ಇದನ್ನೂ ಓದಿ : Suzuki: 20% ಎಥೆನಾಲ್‌ ಮಿಶ್ರಣದಿಂದಲೂ ಚಲಿಸುವ ಸಾಮರ್ಥ್ಯವಿರುವ ಹೊಸ 2023 ಎಕ್ಸಿಸ್‌ 125, ಎವ್‌ನಿಸ್‌ ಮತ್ತು ಬರ್ಗ್‌ಮನ್‌ ಸ್ಟ್ರೀಟ್‌ ಶ್ರೇಣಿಯ ಸ್ಕೂಟರ್‌ಗಳ ಬಿಡುಗಡೆ ಮಾಡಿದ ಸುಜುಕಿ

ಇದನ್ನೂ ಓದಿ : Best Sports Bikes in India: ನೀವು ಬೈಕ್‌ ಪ್ರೇಮಿಗಳಾಗಿದ್ದರೆ ಇದನ್ನು ಖಂಡಿತ ಓದಿ. ಇಲ್ಲಿದೆ ನಿಮ್ಮ ಹೃದಯದ ಬಡಿತ ಹೆಚ್ಚಿಸುವ ಸ್ಪೋರ್ಟ್ಸ್‌ ಬೈಕ್‌ಗಳು

(Matter Aera, Matter launches India’s first gearbox motorcycle with 150km range)

Comments are closed.