Holi 2023 Recipes: ಪಾರ್ಟಿ ಪ್ರಿಯರಿಗೆ ಇಲ್ಲಿವೆ ಡಿಟಾಕ್ಸ್ ಪಾನೀಯಗಳು

(Holi 2023 Recipes) ಹೋಳಿಯು ಭಾರತದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುವ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಬಣ್ಣಗಳ ಹಬ್ಬವು ಕೇವಲ ಬಣ್ಣಗಳಿಗೆ ಮಾತ್ರವಲ್ಲದೆ ಖಾದ್ಯಗಳಿಗೂ ಸಂಬಂಧಿಸಿದೆ. ಕರಿಕಡುಬುಗಳು, ದಹಿ ಭಲ್ಲೆ, ಕಂಜಿ ಮತ್ತು ಇತರ ಸಾಂಪ್ರದಾಯಿಕ ಮನೆಯ ಭಕ್ಷ್ಯಗಳವರೆಗಿನ ರುಚಿಕರವಾದ ಪಾಕಪದ್ಧತಿಯನ್ನು ನಾವು ಮರೆಯುವಂತಿಲ್ಲ. ಹಬ್ಬದ ದಿನದಂದು ಆಯಾಸ ಮತ್ತು ಆಲಸ್ಯವನ್ನು ಉಂಟಾಗುತ್ತದೆ. ಹೀಗಾಗಿ ಪಾರ್ಟಿ ಪ್ರೀಯರು ಈ ಡಿಟಾಕ್ಸ್‌ ಪಾನೀಯಗಳನ್ನು ಕುಡಿಯಬಹುದು. ಇವು ರಕ್ತ ನಿಯಂತ್ರಣಕ್ಕೆ, ಹೀಗೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಎ ಬೆರ್ರಿ ಬ್ಲಾಸ್ಟ್
ನಿಮ್ಮ ನೆಚ್ಚಿನ ಹಣ್ಣುಗಳಾದ ಸ್ಟ್ರಾಬೆರಿ, ಬ್ಲೂಬೆರ್ರಿ ಇತ್ಯಾದಿಗಳನ್ನು ಆರಿಸಿ ಮತ್ತು ಕತ್ತರಿಸಿ, ಒಂದು ಚಿಟಿಕೆ ಉಪ್ಪು, ನಿಂಬೆ ರಸವನ್ನು ಸೇರಿಸಿ ಮತ್ತು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಬೆರ್ರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

ಸತ್ತು ಶರಬತ್ತು
ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸತ್ತು ಸೇರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ಇದಕ್ಕೆ ಕಪ್ಪು ಉಪ್ಪು ಮತ್ತು ಬೇಕಾದಲ್ಲಿ ನಿಂಬೆ ರಸವನ್ನು ಕೂಡ ಸೇರಿಸಬಹುದು. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಇದು ನಿಮ್ಮ ದೇಹಲ್ಲೆ ತಂಪಾದ ಅನುಭವವನ್ನು ನೀಡಿತ್ತದೆ.

ಕಿತ್ತಳೆ ಮತ್ತು ಶುಂಠಿ
ಈ ಡಿಟಾಕ್ಸ್ ಪಾನೀಯಗಳನ್ನು ತಯಾರಿಸಲು ಶುಂಠಿಯ ಪ್ಯೂರೀಯನ್ನು ಮಾಡಿಕೊಳ್ಳಿ. ಮತ್ತು ಇದಕ್ಕೆ ನೀರು ಹಾಗೂ ಕಿತ್ತಳೆ ರಸವನ್ನು ಮಿಶ್ರಣ ಮಾಡಿ. ಔಷಧೀಯ ಉದ್ದೇಶಗಳಿಗಾಗಿ ಸ್ವಲ್ಪ ಅರಿಶಿನವನ್ನು ಸೇರಿಸಿ ಮತ್ತು ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.

ಸೌತೆಕಾಯಿ ಮತ್ತು ಕಿವಿ ಜ್ಯೂಸ್
ಸೌತೆಕಾಯಿಯು ರಿಫ್ರೆಶ್ ಮತ್ತು ತಂಪಾದ ಹಣ್ಣಾಗಿದ್ದು ಅದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಪಾನೀಯಗಳನ್ನು ತಯಾರಿಸಲು ಇದು ಉತ್ತಮ ಪದಾರ್ಥವಾಗಿದೆ. ಕಿವಿ ಹಣ್ಣು ಆರೋಗ್ಯ ಮತ್ತು ರಕ್ತ ನಿಯಂತ್ರಣಕ್ಕೆ ಉತ್ತಮವಾದ ಮತ್ತೊಂದು ಹಣ್ಣು ಕೂಡ. ಚೆನ್ನಾಗಿ ಕತ್ತರಿಸಿದ ಕಿವಿ ಹಣ್ಣು, ಸೌತೆಕಾಯಿಯನ್ನು ಮೆಣಸು ಉಪ್ಪಿನೊಂದಿಗೆ ನೀರಿನಲ್ಲಿ ಮಿಶ್ರಣ ಮಾಡಿ. ಇದಕ್ಕೆ ಐಸ್ ಕ್ಯೂಬ್‌ಗಳನ್ನು ಸೇರಿಸಿ. ಇದು ದೇಹ ರಕ್ಷಣೆಗೆ ಮತ್ತೊಂದು ಉತ್ತಮ ಡಿಟಾಕ್ಸ್ ಪಾನೀಯವಾಗಿದೆ.

ಶುಂಠಿ ಮತ್ತು ಪುದೀನಾ
ಮತ್ತೊಂದು ಅದ್ಭುತ ಡಿಟಾಕ್ಸ್ ಪಾನೀಯವೆಂದರೆ ಶುಂಠಿ ಮತ್ತು ಪುದೀನಾ. ಪುಡಿಮಾಡಿದ ಶುಂಠಿ ತುಂಡುಗಳು, ಪುದೀನ ಎಲೆಗಳು, ನಿಂಬೆ ರಸ ಮತ್ತು ಚಿಟಿಕೆ ಉಪ್ಪನ್ನು ನೀರಿನೊಂದಿಗೆ ಮಿಶ್ರಣ ಮಾಡಿ.

ಇದನ್ನೂ ಓದಿ : Holi health tips: ಹೋಳಿ ಬಣ್ಣಗಳಿಂದ ಕಣ್ಣಿಗೆ ಹಾನಿಯಾಗದಂತೆ ತಡೆಯಲು ಇಲ್ಲಿದೆ ಬೆಸ್ಟ್‌ ಟಿಫ್ಸ್‌

ಪುದೀನಾ ಜೊತೆ ತೆಂಗಿನ ನೀರು
ಗಾಡಿಯಲ್ಲಿ ತೆಂಗಿನಕಾಯಿ ಕಂಡರೆ ಬೇಸಿಗೆ ಬಂದಿದೆ ಎಂದರ್ಥ. ತೆಂಗಿನಕಾಯಿಯು ಅತ್ಯಂತ ರಿಫ್ರೆಶ್ ಮತ್ತು ರುಚಿಕರವಾದ ಪಾನೀಯವಾಗಿದೆ. ತೆಂಗಿನ ನೀರಿಗೆ ಚಿಟಿಕೆ ಉಪ್ಪು ಅಥವಾ ಕಾಳುಮೆಣಸಿನ ಪುಡಿ ಜೊತೆಗೆ ಪುದೀನಾ ಸೇರಿಸಿ.

Holi 2023 Recipes: Here are detox drinks for party lovers

Comments are closed.