ಮೇಡ್ ಇನ್ ಇಂಡಿಯಾ ಓಲಾ S1 X+ 5.2 kWh ಬಿಡುಗಡೆ: ಒಂದೇ ಚಾರ್ಜ್‌ನಲ್ಲಿ 320 ಕಿ.ಮೀ. ಓಡುವ ಸಾಮರ್ಥ್ಯ
Ola S1 X+ 5.2 kWh: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳುವ ಸಲುವಾಗಿ ಓಲಾ ಎಲೆಕ್ಟ್ರಿಕ್ ತನ್ನ ಹೊಸ S1 X+ 5.2 kWh ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.
Ola S1 X+ 5.2 kWh : ಎಲೆಕ್ಟ್ರಿಕ್ ಸ್ಕೂಟರ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಓಲಾ ತನ್ನ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಇದು ಈಗಾಗಲೇ ಇರುವ ಓಲಾ S1 X ನ ಮುಂದುವರಿದ ಆವೃತ್ತಿಯಾಗಿದೆ. ಓಲಾ ಇದನ್ನು S1 X + 5.2 kWh (ಎಸ್1 ಎಕ್ಸ್ ಪ್ಲಸ್ 5.1 kWh) ಎಂದು ಪರಿಚಯಿಸಿದೆ. ಓಲಾದ ಈ ಹೊಸ ಸ್ಕೂಟರ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸುತ್ತಿರುವ ಈ ಸಂದರ್ಭದಲ್ಲಿ ಬಿಡುಗಡೆಯಾಗಿದ್ದು, ಕಂಪನಿಯಲ್ಲಿ ಇದರ ಮಾರಾಟದ ಹೊಸ ಭರವಸೆ ಮೂಡಿಸಿದೆ.
ಬೆಲೆ ಎಷ್ಟು?
ಕಂಪನಿಯು ಈ ಸ್ಕೂಟರ್‌ನ ಆರಂಭಿಕ ಬೆಲೆಯನ್ನು 1,29,999 ರೂ. ನಿಗದಿಪಡಿಸಿದೆ. ಈ ಬೆಲೆ ಏಪ್ರಿಲ್ 15 ರವರೆಗೆ ಖರೀದಿಸುವವರಿಗೆ ಮಾನ್ಯವಾಗಿರುತ್ತದೆ.
ಮೈಲೇಜ್ ಎಷ್ಟು?
ಓಲಾದ S1 X + 5.2 kWh ಸ್ಕೂಟರ್ ಅತಿ ದೊಡ್ಡ ವೈಶಿಷ್ಟ್ಯವೆಂದರೆ ಅದರ 320 ಕಿಲೋಮಿಟರ್ ವರೆಗಿನ ರೇಂಜ್. ಇದು ದೂರದ ಪ್ರಯಾಣಕ್ಕೆ ಸೂಕ್ತವಾದ ಎಲೆಕ್ಟ್ರಿಕ್ ಸ್ಕೂಟರ್ ಎಂಬುದನ್ನು ಸಾಬೀತುಪಡಿಸುತ್ತದೆ. ಇದು ಪ್ರತಿ ಗಂಟೆಗೆ 125 ಕಿಮೀ ವೇಗವನ್ನು ನೀಡುತ್ತದೆ. ಹಾಗಾಗಿ ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಭಾಗದಲ್ಲಿ ಬರುವ ಇತರೆ ಸ್ಕೂಟರ್‌ಗಳಿಗೆ ಹೆಚ್ಚಿನ ಪೈಪೋಟಿ ನೀಡಲಿದೆ.
ಇದನ್ನೂ ಓದಿ: ಕೇವಲ 2 ಲಕ್ಷಕ್ಕೆ ಸಿಗಲಿದೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ : ‘ಫ್ಲೈಯಿಂಗ್ ಫ್ಲೀ C6’ ಪೀಚರ್ಸ್ ಏನು ಗೊತ್ತಾ ?
ಶಕ್ತಿಶಾಲಿ ಮೋಟಾರ್ ಮತ್ತು ಅಡ್ವಾನ್ಸ್ ಟೆಕ್ನಾಲಾಜಿ
ಈ ಸ್ಕೂಟರ್‌ನಲ್ಲಿ ಕಂಪನಿಯು 11 kW ನ ಮಿಡ್ ಡ್ರೈವ್ ಮೋಟಾರ್ ನೀಡಿದೆ. ಇದರಲ್ಲಿ ಇಂಟಿಗ್ರೇಟೆಡ್ ಎಮ್‌ಸಿಯು ಅಳವಡಿಸಲಾಗಿದೆ. ಇದು ಒಳ್ಳೆಯ ಪರ್ಫಾಮೆನ್ಸ್ ನೀಡುವುದರ ಜೊತೆಗೆ ಸ್ಮೂತ್ ರೈಡ್ ನ ಅನುಭವ ನೀಡುತ್ತದೆ. ಜೊತೆಗೆ ಇದರಲ್ಲಿ ಬ್ರೆಕ್ ಬೈ ವೈರ್ ಸಿಸ್ಟಮ್ ಮತ್ತು ಫ್ರಂಟ್ ಡಿಸ್ಕ್ ಬ್ರೆಕ್ ನೀಡಲಾಗಿದೆ. ಇದರಿಂದ ಗಾಡಿಯ ಮೇಲೆ ಉತ್ತಮ ಕಂಟ್ರೋಲ್ ಹೊಂದಬಹುದಾಗಿದೆ. ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.
ಕಂಪನಿ ಹೇಳಿಕೊಂಡಿರುವಂತೆ ಓಲಾ S1 X+ 5.2 kWh ಸ್ಕೂಟರ್ ಹೆಚ್ಚಿನ ಜನರನ್ನು ಎಲೆಕ್ಟ್ರಿಕ್ ವಾಹನಗಳತ್ತ ಆಕರ್ಷಿಸುವ ಗುರಿಯನ್ನು ಹೊಂದಿದೆ. ಇದರ ಸುಧಾರಿತ ಶ್ರೇಣಿ, ಸ್ಕೂಟರ್‌ನ ಕಾರ್ಯಕ್ಷಮತೆ ಮತ್ತು ಕೈಗೆಟಕುವ ದರ ಇವೆಲ್ಲ ಭಾರತೀಯರಿಗೆ ಇ–ವಾಹನಗಳ ಮೇಲೆ ಹೆಚ್ಚ ಒಲವು ಮೂಡುವಂತೆ ಮಾಡಲಿದೆ.



