PMV EaS-E : ಜಸ್ಟ್‌ 4.79 ಲಕ್ಷಕ್ಕೆ ಕಾರು! ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದ ಪಿಎಮ್‌ವಿಯ ಕ್ಯಾಂಪ್ಯಾಕ್ಟ್‌ ಇಲೆಕ್ಟ್ರಿಕ್‌ ಕಾರ್‌ EaS-E

ಮುಂಬೈ ಮೂಲದ ಪಿಎಂವಿ (PMV) ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ವಾಹನ(PMV EaS-E)ವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಇಲೆಕ್ಟ್ರಿಕ್ ಕಾರಾಗಿದೆ. ದೈನಂದಿನ ಪ್ರಯಾಣಕ್ಕೆ ಹೆಚ್ಚು ಸೂಕ್ತ ಎಂದು ಹೇಳಲಾಗುತ್ತಿದೆ. ಈ ವಾಹನವು ಪರ್ಸನಲ್ ಮೊಬಿಲಿಟಿ ವೆಹಿಕಲ್ (PMV) ನ ಹೊಸ ಬ್ರ್ಯಾಂಡ್ ಆಗಿದೆ. ಹೊಸ ಎಲೆಕ್ಟ್ರಿಕ್ ವಾಹನವನ್ನು EaS-E ಎಂದು ಹೆಸರಿಸಲಾಗಿದೆ. ಜನರು ಪ್ರತಿದಿನ ಬಳಸುವ ದೈನಂದಿನ ಕಾರ್ ಆಗಬೇಕೆಂದು ಬ್ರ್ಯಾಂಡ್‌ನ ಆಶಯವಾಗಿದೆ.

ವಾಹನವು 2,915 ಎಂಎಂ ಉದ್ದ, 1,157 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವಿರುವುದರಿಂದ ನಗರ ಬಳಕೆಗಾಗಿಯೇ ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಟಾಟಾದವರ ನ್ಯಾನೊ ಕಾರಿಗಿಂತ ಚಿಕ್ಕದಾಗಿದೆ. ಇದು 2,087 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಆಗಿರುತ್ತದೆ. ಅಲ್ಲದೆ, EV ಯ ಕರ್ಬ್ ತೂಕವು ಸುಮಾರು 550 ಕೆಜಿ ಇರುತ್ತದೆ.

ಇದನ್ನೂ ಓದಿ : Honda : ಗುಡ್‌ ನ್ಯೂಸ್‌; ಈ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಿದ ಹೊಂಡಾ

PMVಯ ಹೊಸ EaS-E ವಾಹನವನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಇದು ಒಂದೇ ಚಾರ್ಜ್‌ನಲ್ಲಿ120 ಕಿ.ಮೀ ನಿಂದ 200 ಕಿ.ಮೀ ವರೆಗಿನ ವ್ಯಾಪ್ತಿಯನ್ನು ಕ್ರಮಿಸಬಲ್ಲದು.ಇದರ ಬ್ಯಾಟರಿಯನ್ನು ಕೇವಲ 4 ಗಂಟೆ ಚಾರ್ಜ್ ಮಾಡಿದರೆ ಸಾಕು ಎಂದು PMV ಹೇಳುತ್ತದೆ. ತಯಾರಕರು 3 KW AC ಚಾರ್ಜರ್ ಅನ್ನು ಇದರ ಜೊತೆಗೆ ನೀಡುತ್ತಿದ್ದಾರೆ.

PMV EaS-E ನ ವೈಶಿಷ್ಟ್ಯಗಳು :
ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಹವಾನಿಯಂತ್ರಣ, ರಿಮೋಟ್ ಕೀಲೆಸ್ ಎಂಟ್ರಿ ಮತ್ತು ರಿಮೋಟ್ ಪಾರ್ಕ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಸೀಟ್ ಬೆಲ್ಟ್‌ಗಳು ಇತ್ಯಾದಿಗಳನ್ನು ಒಳಗೊಂಡಿದ್ದು ಆಧುನಿಕವಾಗಿ ತಯಾರಿಸಲ್ಪಟ್ಟಿದೆ. ಇನ್ನು ಇದರ ಹೊರಮೈ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ವಾಹನದ ಅಗಲದ ಉದ್ದಕ್ಕೂ ವ್ಯಾಪಿಸಿರುವ LED ಲೈಟ್ ಬಾರ್ ಮತ್ತು ಸ್ಲಿಮ್ LED ದೀಪಗಳು ಮತ್ತು ಟೈಲ್‌ಗೇಟ್‌ನಲ್ಲಿ ಅಡ್ಡಲಾಗಿ ಇರಿಸಲಾಗಿರುವ ಲೈಟ್ ಬಾರ್‌ನಿಂದಾಗಿ EaS-E ಕಾರು ಆಕರ್ಷಕವಾಗಿ ಕಾಣಿಸುತ್ತದೆ. ಇದನ್ನು ನಾಲ್ಕು-ಬಾಗಿಲಿನ ಕಾನ್ಫಿಗರೇಶನ್‌ನಲ್ಲಿ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ :
ಮುಂಬೈ ಮೂಲದ ಸ್ಟಾರ್ಟ್‌ಅಪ್ ಕಂಪನಿ ಪರ್ಸನಲ್ ಮೊಬಿಲಿಟಿ ವೆಹಿಕಲ್ಸ್ (PMV), ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ EaS-E ಅನ್ನು ರೂ 4.79 ಲಕ್ಷದ ಆರಂಭಿಕ ಬೆಲೆಗೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಮಾರಾಟವಾಗುವ ಅತ್ಯಮತ ಕಡಿಮೆ ಬೆಲೆಯ ಇಲೆಕ್ಟ್ರಿಕ್‌ ಕಾರ್‌ ಆಗಿದೆ. ಇದರ ಬುಕಿಂಗ್‌ ಈಗಾಗಲೇ ನಡೆಯುತ್ತಿದೆ. ಆದರೆ ಪರಿಚಯಾತ್ಮಕ ಬೆಲೆಗಳು ಮೊದಲ 10,000 ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ಹೇಳಿದೆ. ಭಾರತವನ್ನು ಒಳಗೊಂಡಂತೆ ಜಾಗತಿಕವಾಗಿ EaS-E ಇಲೆಕ್ಟ್ರಿಕ್‌ ಕಾರು ಈಗಾಗಲೇ ಸುಮಾರು 6,000 ಮುಂಗಡ-ಆರ್ಡರ್‌ಗಳನ್ನು ಪಡೆದುಕೊಂಡಿದೆ ಎಂದು PMV ಹೇಳುತ್ತಿದೆ.

ಇದನ್ನೂ ಓದಿ : Mastodon App : ಓಪನ್‌ ಸೋರ್ಸ್‌ ಮೈಕ್ರೋಬ್ಲಾಗಿಂಗ್‌ ಸೈಟ್‌ ಮಾಸ್ಟೋಡಾನ್‌ ಬಗ್ಗೆ ನಿಮಗೆ ಗೊತ್ತಾ; ಇದರಲ್ಲಿ ಖಾತೆ ರಚಿಸುವುದಾದರೂ ಹೇಗೆ…

(PMV EaS-E electric car just at Rs 4.79 lakh, most affordable electric car in India)

Comments are closed.