River Indie E-Scooter : ಬಿಡುಗಡೆಯಾದ ತಕ್ಷಣ ಸಂಚಲನ ಮೂಡಿಸಿದ ರಿವರ್‌ ಇಂಡೀ ಎಲೆಕ್ಟ್ರಿಕ್‌ ಸ್ಕೂಟರ್‌; ವೈಶಿಷ್ಟ್ಯಗಳೇನು ಗೊತ್ತಾ…

ಬೆಂಗಳೂರು (Bengaluru) ಮೂಲದ EV ಸ್ಟಾರ್ಟ್‌ಅಪ್‌ ಕಂಪನಿ ರಿವರ್‌ ತನ್ನ ಮೊದಲ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಭಾರತದ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿದೆ. ಕಂಪನಿಯ ಪ್ರಕಾರ ಇದು ದೇಶದ ಮೊದಲ SUV ಸ್ಕೂಟರ್‌ ಆಗಿದೆ. ರಿವರ್‌ ಬಿಡುಗಡೆ ಮಾಡಿರುವ ಇಂಡೀ ಇ–ಸ್ಕೂಟರ್‌ (River Indie E-Scooter ) ನ ಬೆಲೆ 1.25 ಲಕ್ಷ ರೂ. (ಎಕ್ಸ್‌ಶೋ ರೂಂ, ಬೆಂಗಳೂರು) ಆಗಿದೆ. ಈ ಸ್ಕೂಟರ್‌ ನ ವಿತರಣೆ ಆಗಸ್ಟ್‌ 2023 ಯಿಂದ ಪ್ರಾರಂಭವಾಗಬಹುದು. ಈ ಸ್ಕೂಟರ್‌ನ ವೈಶಿಷ್ಟ್ಯ, ವಿನ್ಯಾಸದ ಬಗ್ಗೆ ಇಲ್ಲಿದೆ ಓದಿ.

ವಿನ್ಯಾಸ:
ರಿವರ್‌ ಬಿಡಗಡೆ ಮಾಡಿರುವ ಇಂಡೀ ಇ–ಸ್ಕೂಟರ್‌ನಲ್ಲಿ ಸಿಗ್ನೇಚರ್ ಟ್ವಿನ್ ಬೀಮ್ ಹೆಡ್‌ಲ್ಯಾಂಪ್ ಮತ್ತು ವಿಶಿಷ್ಟವಾದ ಟೈಲ್ ಲ್ಯಾಂಪ್ ಅನ್ನು ನೀಡಲಾಗಿದೆ. ಇದು ಉಳಿದ ಸ್ಕೂಟರ್‌ಗಳಿಂತ ಎದ್ದು ಕಾಣುವಂತೆ ಮಾಡುತ್ತದೆ. ಇದರಲ್ಲಿರುವ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಉತ್ತಮ ನಿರ್ವಹಣೆಯ ಜೊತೆಗೆ ಸ್ಥಿರತೆಯನ್ನು ಒದಗಿಸಲಿದೆ. ಇದರಿಂದಾಗಿ ಬೀಳುವ ಸಂದರ್ಭದಲ್ಲಿ ಇ-ಸ್ಕೂಟರ್ ಪ್ಯಾನೆಲ್ ಅನ್ನು ರಕ್ಷಿಸಲು ಸಹ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಈ ಸ್ಕೂಟರ್ ಅನ್ನು ಸವಾರರಿಗೆ ಬೆಂಬಲವನ್ನು ಒದಗಿಸಲು ಮತ್ತು ರೈಡಿಂಗ್ ಸ್ಥಾನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಇದು ವಾಹನ ಸವಾರರಿಗೆ ಹೆಚ್ಚಿನ ಸೌಕರ್ಯವನ್ನು ನೀಡಲಿದೆ. ಇದರಲ್ಲಿ ನೀಡಲಾದ ಫ್ರಂಟ್ ಫುಡ್ ಪೆಗ್ ಅನ್ನು ಸ್ಕೂಟರ್ ವಿಭಾಗದಲ್ಲಿ ಮೊದಲ ಬಾರಿಗೆ ನೋಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಸಸ್ಪೆನ್ಶನ್ ಅನ್ನು ಇನ್ನಷ್ಟು ಸುಧಾರಿಸಲು, ಅವಳಿ ಹಿಂಭಾಗದ ಹೈಡ್ರಾಲಿಕ್ ಸಸ್ಪೆನ್ಷನ್ ಮತ್ತು ಟೆಲಿಸ್ಕೋಪಿಕ್ ಫ್ರಂಟ್ ಅನ್ನು ಬಳಸಲಾಗಿದೆ.

ಸ್ಪೇಸ್‌ :
ಕಂಪನಿ ಹೇಳುವ ಪ್ರಕಾರ ಇಂಡಿ ಇ-ಸ್ಕೂಟರ್ ಒಟ್ಟು 55-ಲೀಟರ್ ಜಾಗವನ್ನು ನೀಡುತ್ತದೆ, 43-ಲೀಟರ್ ಬೂಟ್ ಸ್ಪೇಸ್ ಮತ್ತು 12-ಲೀಟರ್ ಗ್ಲೋವ್ ಬಾಕ್ಸ್ ಜಾಗವನ್ನು ನೀಡುತ್ತದೆ.

ಇದನ್ನೂ ಓದಿ : Infinix Smart 7 : ಜಬರ್ದಸ್ತ್‌ ಬ್ಯಾಟರಿ ಇರುವ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ; ಈ ದಿನದಿಂದ ಪ್ರಾರಂಭವಾಗಲಿದೆ ಸೇಲ್‌…

ಪವರ್‌ ಪ್ಯಾಕ್‌ :
ರಿವರ್ ಈ ಇಂಡೀ ಇ-ಸ್ಕೂಟರ್‌ನಲ್ಲಿ 4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನೊಂದಿಗೆ 6.7 kW ಪವರ್ ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಲಾಗಿದೆ. ಇದನ್ನು 5 ಗಂಟೆಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಹೇಳಲಾಗುತ್ತಿದೆ.

ಪವರ್‌ ರೇಂಜ್‌ :
ಈ ಎಲೆಕ್ಟ್ರಿಕ್‌ ಸ್ಕೂಟರ್‌ ಪೂರ್ಣ ಚಾರ್ಜಿಂಗ್‌ ನಲ್ಲಿ 120 ಕಿಮೀ (ಇಕೋ ಮೋಡ್‌ನಲ್ಲಿ) ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿದೆ. ಇಂಡಿ ಇ-ಸ್ಕೂಟರ್ ಮೂರು ರೈಡಿಂಗ್ ಮೋಡ್‌ಗಳಲ್ಲಿ – ಇಕೋ, ರೈಡ್ ಮತ್ತು ರಶ್ ಮೋಡ್‌ಗಳಲ್ಲಿ ಲಭ್ಯವಿದೆ.

ಬೆಲೆ ಮತ್ತು ಲಭ್ಯತೆ :
ಈ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ತಯಾರಿಸಿದ ರಿವರ್ ಸ್ಟಾರ್ಟ್ಅಪ್ ಕಂಪನಿ ಇಂಡಿ ಇ-ಸ್ಕೂಟರ್ ಅನ್ನು 1,25,000 ರೂ. (ಎಕ್ಸ್‌ಶೋ ರೂಂ, ಬೆಂಗಳೂರು) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಕಂಪನಿಯು ಈ ವರ್ಷದ ಆಗಸ್ಟ್ 2023 ರಲ್ಲಿ ಈ ಸ್ಕೂಟರ್‌ನ ವಿತರಣೆಯನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ : Tata Dark Red Edition Cars: ಟಾಟಾದ ಮೂರು ಡಾರ್ಕ್‌–ರೆಡ್‌ ಎಡಿಷನ್‌ ಎಸ್‌ಯುವಿ ಕಾರುಗಳು

(River Indie E-Scooter launched in the Indian EV market. know the features and specifications)

Comments are closed.