India New Covid cases: ಭಾರತದಲ್ಲಿ ಮತ್ತೆ 193 ಹೊಸ ಕೋವಿಡ್ ಕೇಸ್ ಗಳು ಪತ್ತೆ: ದೆಹಲಿಯಲ್ಲಿ ಒಂದು ಸಾವು

ನವದೆಹಲಿ: (India New Covid cases) ದೇಶ, ವಿದೇಶದಲ್ಲಿ ಕೊರೊನಾ ಮಾಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇತ್ತೀಚೆಗೆ ಕೊರೊನಾ ಸೋಂಕು ಕಡಿಮೆಯಾಗಿದ್ದು, ಕೊರೊನಾ ಭೀತಿ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಭಾರತದಲ್ಲಿ ಹೊಸ ಕೋವಿಡ್‌ ಕೇಸ್‌ ಗಳು ಪತ್ತೆಯಾಗುತ್ತಿದ್ದು, ಆತಂಕ ಹೆಚ್ಚುವಂತೆ ಮಾಡಿದೆ. ಇದೀಗ ಭಾರತದಲ್ಲಿ ಮತ್ತೆ 193 ಹೊಸ ಕೋವಿಡ್ ಕೇಸ್ ಗಳು ಪತ್ತೆಯಾಗಿವೆ.

ದೇಶದಲ್ಲಿ ಆದರೆ ಸಕ್ರಿಯ ಪ್ರಕರಣಗಳು 2,000 ಕ್ಕೆ ಏರಿದ್ದು, 193 ಹೊಸ ಕರೋನವೈರಸ್ ಸೋಂಕುಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಇದಲ್ಲದೇ ಕೊರೊನಾದಿಂದಾಗಿ ದೆಹಲಿಯಲ್ಲಿ ಒಂದು ಸಾವು ಕೂಡ ವರದಿಯಾಗಿದೆ ಎಂದು ನವೀಕರಿಸಲಾದ ಡೇಟಾ ತಿಳಿಸಿದೆ. ಇದೀಗ ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 5,30,763 ರಷ್ಟಿದ್ದು, ವೈರಸ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,85,450) ಮತ್ತು ರಾಷ್ಟ್ರೀಯ COVID-19 ಚೇತರಿಕೆ ದರವು 98.81 ರಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನೂ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,41,52,687 ಕ್ಕೆ ಏರಿದ್ದು, ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.63 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

ಇದನ್ನೂ ಓದಿ : Mandatory covid test cancelled: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್‌ ಪರೀಕ್ಷೆ ರದ್ದು

ಇದನ್ನೂ ಓದಿ : Intranasal covid vaccine: ಗಣರಾಜ್ಯೋತ್ಸವದಂದು ವಿಶ್ವದ ಮೊದಲ ಕೋವಿಡ್‌ ಮೂಗಿನ ಲಸಿಕೆ ಪ್ರಾರಂಭ

ಕಳೆದ ಎರಡು ಮೂರು ತಿಂಗಳ ಹಿಂದೆ ಚೀನಾ ಸೇರಿದಂತೆ ಕೆಲವು ನೆರೆ ದೇಶದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡು ಸಾವಿನ ಸಂಖ್ಯೆ ಅತಿರೇಕಕ್ಕೇರಿತ್ತು. ಇದಾದ ಬಳಿಕ ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಮುಂಜಾಗೃತಾ ಕ್ರಮವಾಗಿ ಕೆಲವು ಮಾರ್ಗಸೂಚಿಗಳನ್ನು ಪಡೆದುಕೊಂಡಿದ್ದರು ಕೂಡ ವಿದೇಶದಿಂದ ಭಾರತಕ್ಕೆ ಬಂದಿದ್ದ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ದೇಶದಲ್ಲಿ ಆತಂಕ ಮೂಡಿಸಿತ್ತು. ಕೆಲ ಸಮಯಗಳ ನಂತರ ಕೊರೊನಾ ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದಿದ್ದು, ಜನರಲ್ಲಿ ಆತಂಕ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಹೊಸ ಕೊರೊನಾ ಸೋಂಕುಗಳು ಪತ್ತೆಯಾದ ಹಿನ್ನಲೆಯಲ್ಲಿ ಮತ್ತೆ ಆತಂಕ ಮನೆಮಾಡುವಂತಾಗಿದೆ.

ಇದನ್ನೂ ಓದಿ : India Covid cases: ಭಾರತದಲ್ಲೂ ಹೆಚ್ಚುತ್ತಿದೆ ಕೋವಿಡ್ ಸೋಂಕು: 24 ಗಂಟೆಗಳಲ್ಲಿ 140 ಹೊಸ ಕೋವಿಡ್ ಪ್ರಕರಣ ದಾಖಲು

India New Covid cases: 193 new Covid cases detected in India again: one death in Delhi

Comments are closed.