Girl Dies Video Call :ಯಮಪಾಶವಾಗಿ ಬದಲಾಯಿತು ಜೋಕಾಲಿ: ವಿಡಿಯೋ ಕಾಲ್​ ಮಾಡುತ್ತಲೇ ಉಸಿರುಗಟ್ಟಿ ಮೃತಪಟ್ಟ ಪುಟ್ಟ ಬಾಲಕಿ

ಸ್ನೇಹಿತರೊಂದಿಗೆ ವಿಡಿಯೋ ಕಾಲ್​​ನಲ್ಲಿ (Girl Dies Video Call) ಬ್ಯುಸಿಯಾಗಿದ್ದ ವೇಳೆ ಅಕಸ್ಮಾತ್​ ಆಗಿ 11 ವರ್ಷದ ಬಾಲಕಿಯ ಕುತ್ತಿಗೆ ಉಯ್ಯಾಲೆಯ ಹಗ್ಗಕ್ಕೆ ಸಿಲುಕಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಇಂಗ್ಲೆಂಡ್​​ನ(England) ಗ್ರೇಸ್​ ಪೆಟ್ರಿಷಿಯಾ ಹ್ಯಾಮ್ನೆಟ್​ ಎಂಬಾಕೆ ತನ್ನ ಶಾಲಾ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಮೆಕ್​ಡೊನಾಲ್ಡ್​ ಡೆಲಿವರಿ ಬಂದಿದೆಯೇ ಎಂದು ಪರಿಶೀಲನೆ ಮಾಡಲು ಗ್ರೇಸ್​ ತಾಯಿ ಮನೆಯಿಂದ ಹೊರ ಬಂದ ವೇಳೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಕಿರುಚಿಕೊಂಡ ಗ್ರೇಸ್​ ತಾಯಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆ್ಯಂಬುಲೆನ್ಸ್​ನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಬಾಲಕಿಗೆ ಹೃದಯಾಘಾತವಾಗಿದೆ. ಹತ್ತಿರದಲ್ಲೇ ಇರುವ ಮಕ್ಕಳ ಆಸ್ಪತ್ರೆಗೆ ಗ್ರೇಸ್​ನ್ನು ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಇದನ್ನು ಓದಿ : ಬಸ್​ ಏರಿ ಡೆಡ್ಲಿ ಸಾಹಸ ಮಾಡಿದ ವಿದ್ಯಾರ್ಥಿ..! ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಹುಡುಕಾಟ

ಸಿಟಿ ಸ್ಕ್ಯಾನ್​​ನಲ್ಲಿ ಈ ಘಟನೆಯಿಂದಾಗಿ ಗ್ರೇಸ್​​ನ ಮೆದುಳಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಗ್ರೇಸ್ ದೇಹಕ್ಕೆ ರಕ್ತ ಹಾಗೂ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಎಂಆರ್​ಐ ಸ್ಕ್ಯಾನಿಂಗ್​​ನಲ್ಲಿ ಗ್ರೇಸ್​​ಗೆ ಗಂಭೀರವಾಗಿ ಮೆದುಳಿಗೆ ಹಾನಿಯಾಗಿರುವುದು ಧೃಡಪಟ್ಟಿದೆ.

ತನಿಖೆ ವೇಳೆ ಗ್ರೇಸ್​ ತಾಯಿ ಗ್ರೇಸ್​ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣಗಳು ಇರಲಿಲ್ಲ. ಆಕೆಯ ಅತ್ಯಂತ ಖುಷಿಯಾಗಿದ್ದಳು ಎಂದು ಹೇಳಿದ್ದಾರೆ. ತನಿಖೆಯಲ್ಲಿ ಗ್ರೇಸ್​​ ಪೆಟ್ರಿಷಿಯಾ ಹ್ಯಾಮ್ನೆಟ್​ ಸಾವಿನಲ್ಲಿ ಮೂರನೇ ವ್ಯಕ್ತಿಯ ಪಾತ್ರವಿರಲಿಲ್ಲ ಎಂಬುದೂ ಧೃಡಪಟ್ಟಿದೆ. ಹೀಗಾಗಿ ಇದೊಂದು ಆಕಸ್ಮಿಕ ಸಾವು ಎಂದು ವರದಿ ಮಾಡಲಾಗಿದೆ.

ಇದನ್ನೂ ಓದಿ : ಹೆಲ್ಮೆಟ್​ ಧರಿಸದ ವ್ಯಕ್ತಿಗೆ ನಡುರಸ್ತೆಯಲ್ಲಿ ಥಳಿಸಿದ ಪೊಲೀಸ್​; ಪೊಲೀಸ್​ ವರ್ತನೆ ಕಂಡು ಬೆಚ್ಚಿಬಿದ್ದ ಪುಟ್ಟ ಬಾಲಕಿ

ಇದನ್ನು ಓದಿ : Farmer Complaint Against Cow : ಹಾಲು ಕೊಡದೇ ಸತಾಯಿಸುವ ಹಸುವನ್ನು ಠಾಣೆಗೆ ಕರೆಸಿ: ಪೊಲೀಸರ ಮೊರೆ ಹೋದ ಶಿವಮೊಗ್ಗದ ರೈತ

England: Girl dies video call after accidentally entangling herself in rope swing while on video call with friends

Comments are closed.