ಬೈಕ್ ಪ್ರಿಯರು ರಾಯಲ್ ಎನ್‌ಫೀಲ್ಡ್ ಬೈಕ್ಗಳ ಬಗ್ಗೆ ಬರೋ ಯಾವುದೇ ಅಪ್ಡೇಟ್ಗಳನ್ನು ಬಿಡೋದಿಲ್ಲ. ನೀವು ಕೂಡ ರಾಯಲ್ ಎನ್‌ಫೀಲ್ಡ್ ಪ್ರಿಯರಾಗಿದ್ದರೆ ಈ ಸುದ್ದಿ ನಿಮಗಾಗಿ ಎಂದೇ ಹೇಳಬಹುದು. ಹೌದು..! ರಾಯಲ್ ಎನ್‌ಫೀಲ್ಡ್ ಇಂದು ಇಟಲಿಯ ಮಿಲನ್ನಲ್ಲಿ ನಡೆದ EICMA ಮೋಟಾರ್ ಶೋನಲ್ಲಿ ತನ್ನ ಹೊಸ ಹಿಮಾಲಯನ್ (Himalayan) ಬೈಕ್ನ್ನು ಅನಾವರಣಗೊಳಿಸಿದೆ.

ಹಳೆಯ ಹಿಮಾಲಯನ್ ಬೈಕ್ಗೆ ಹೋಲಿಕೆ ಮಾಡಿದರೆ ಹಗುರವಾದ ಹಾಗೂ ತಾಂತ್ರಿಕವಾಗಿ ಹೆಚ್ಚು ಸುಧಾರಣೆಗೊಂಡ ಈ ಬೈಕ್ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಲೇ ಇದೆ. 2023ರ ಹಿಮಾಲಯನ್ ಹೊಸ ಶೆರ್ಪಾ 450 ಲಿಕ್ವಿಡ್ ಕೂಲ್ಡ್ ಎಂಜಿನ್ ಚಾಲಿತವಾಗಿದೆ. ಈ ಬೈಕ್ನ್ನು ಈ ವರ್ಷಾಂತ್ಯದ ಮುನ್ನವೇ ಭಾರತದಲ್ಲಿ ಲಾಂಚ್ ಮಾಡುತ್ತೇವೆ ಎಂದು ಕಂಪನಿ ತಿಳಿಸಿದೆ.
ಇದಾದ ಬಳಿಕ ಯುರೋಪ್, ಏಷ್ಯಾ- ಪೆಸಿಫಿಕ್ ಪ್ರದೇಶ ಹಾಗೂ ಅಮೆರಿಕದಲ್ಲಿ ಹಿಮಾಲಯನ್ ಲಾಂಚ್ ಆಗಲಿದೆ ಎಂದು ಕಂಪನಿ ತಿಳಿಸಿದೆ. ರಾಯಲ್ ಎನ್‌ಫೀಲ್ಡ್ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಬ್ರಿಟನ್, ಸ್ಪೇನ್ ಹಾಗೂ ಭಾರತದಲ್ಲಿರುವ ಪರೀಕ್ಷಾ ಕೇಂದ್ರಗಳು ಹೊಸ ಹಿಮಾಲಯನ್ ಅಭಿವೃದ್ಧಿಪಡಿಸುವ ಕಾರ್ಯ ಮಾಡಿವೆ ಎನ್ನಲಾಗಿದೆ.

ಇದನ್ನೂ ಓದಿ : ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕಾರು ಲೋನ್ ಆಫರ್ ನೀಡುತ್ತಿವೆ ಈ ಬ್ಯಾಂಕ್‌ಗಳು
ಈ ಬೈಕ್ನ್ನು ಚೆನ್ನೈನ 22 ಅಡಿಯಿಂದ 19.024 ಅಡಿಯವರೆಗೆ ಉಮ್ಲಿಂಗ್ ಲಾನಲ್ಲಿ 5500 ಕಿ.ಮೀಗಿಂತ ಹೆಚ್ಚು ಕಾಲ ಪರೀಕ್ಷೆ ಮಾಡಲಾಗಿದೆ. 2023ನೇ ಆವೃತ್ತಿಯ ಹಿಮಾಲಯನ್ ಬೈಕ್ಗಳು ಹೊಸ ಹಾಗೂ ಶಕ್ತಿಶಾಲಿ ಶೆರ್ಪಾ 450 ಎಂಜಿನ್ ಹೊಂದಿವೆ. ಇದು ರಾಯಲ್ ಎನ್ಫೀಲ್ಡ್ನ ಮೊದಲ ಲಿಕ್ವಿಡ್ ಕೂಲ್ಡ್ ಇಂಜಿನ್ ಆಗಿದೆ.
ಈ 452cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್, DOHC, EFI ಎಂಜಿನ್, 40.02PS ಗರಿಷ್ಠ ಶಕ್ತಿ ಮತ್ತು 40Nm ಪೀಕ್ ಟಾರ್ಕ್ ಅನ್ನು ಅಭಿವೃದ್ಧಿ ಪಡಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.ಅತ್ಯುತ್ತಮ ಕೂಲಿಂಗ್‌ಗಾಗಿ ಸಮಗ್ರ ನೀರಿನ ಪಂಪ್ ಮತ್ತು ಟ್ವಿನ್-ಪಾಸ್ ರೇಡಿಯೇಟರ್ ಸೆಟಪ್ ಅನ್ನು ಅಳವಡಿಸಲಾಗಿದೆ. ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಕೂಡ ಇದೆ.
ಇದನ್ನೂ ಓದಿ : ಕೇವಲ 8.69 ಲಕ್ಷ ರೂ.ಬೆಲೆಗೆ ಟಾಟಾ ಟಿಯಾಗೊ ಇವಿ : ಎಲೆಕ್ಟ್ರಿಕ್ ಕಾರಿನ ಮಾರಾಟದ ಮೇಲೆ ಭರ್ಜರಿ ಆಫರ್
2023ನೇ ಆವೃತ್ತಿಯ ಹಿಮಾಲಯನ್ ಮೋಟರ್ ಸೈಕಲ್ಗಳು ಹೊಸ ಸ್ಟೀಲ್ ಸ್ಟಾರ್ ಫ್ರೇಂ ಹೊಂದಿವೆ. ಇದು ಗಟ್ಟಿಯಾಗಿದೆ. ಅಲ್ಲದೇ ಈ ಬೈಕುಗಳಲ್ಲಿ 200mm ಚಕ್ರ ಇರಿಸಲಾಗಿದ್ದು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತವೆ. ಹೊಸದಾಗಿ ಅಭಿವೃದ್ಧಿಪಡಿಸಿದ ಅಲ್ಯೂಮಿನಿಯಂ ಮಿಶ್ರಲೋಹದ ರಿಮ್‌ಗಳು ಮತ್ತು ಬೆಸ್ಪೋಕ್ ಟೈರ್‌ಗಳೊಂದಿಗೆ ಮುಂಭಾಗದಲ್ಲಿ 21-ಇಂಚಿನ ಚಕ್ರ ಮತ್ತು ಹಿಂಭಾಗದಲ್ಲಿ 17-ಇಂಚಿನ ಚಕ್ರವಿದೆ.

ಮುಂಭಾಗದಲ್ಲಿ (320 ಮಿಮೀ) ಮತ್ತು ಹಿಂಭಾಗದಲ್ಲಿ (270 ಮಿಮೀ) ಪ್ರತಿ ಡಿಸ್ಕ್ ಇದೆ. ಸ್ವಿಚ್ ಮಾಡಬಹುದಾದ ಡ್ಯುಯಲ್-ಚಾನೆಲ್ ABS ಸಹ ಲಭ್ಯವಿದೆ, 2023 ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆಲೆ ಸುಮಾರು 2.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ದೀಪಾವಳಿ ಹಬ್ಬಕ್ಕೆ ಇಲ್ಲಿದೆ ಬಂಪರ್ : ಒಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಇನ್ನೊಂದು ಇ ಸ್ಕೂಟರ್ ಉಚಿತ
ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಹಿಮಾಲಯನ್ ಮೋಟಾರ್ ಸೈಕಲ್ ಮಾದರಿಯ ಬೆಲೆ 2.16 ಲಕ್ಷ ಮತ್ತು 2.28 ಲಕ್ಷ (ಎಕ್ಸ್ ಶೋ ರೂಂ) ಇದೆ ಎಂದು ಕಂಪನಿ ತಿಳಿಸಿದೆ.
royal enfield New himalayan makes global debut at eicma motor show 2023