Tata Motors : ಟಾಟಾ ಕಾರುಗಳ ಮೇಲೆ ಭಾರಿ ಡಿಸ್ಕಾಂಟ್‌ ! ಯಾವ ಕಾರುಗಳಿಗೆ ಎಷ್ಟು ಡಿಸ್ಕೌಂಟ್‌ ಸಿಗುತ್ತಿವೆ ಗೊತ್ತಾ?

ಟಾಟಾ ಮೋಟಾರ್ಸ್‌(Tata Motors) ಜುಲೈ ತಿಂಗಳಲ್ಲಿ ವಿವಿಧ ಮಾದರಿಯ ಕಾರುಗಳ ಮೇಲೆ ಭಾರಿ ರಿಯಾಯಿತಿ (ಡಿಸ್ಕೌಂಟ್‌)ಯನ್ನು ಘೋಷಿಸಿದೆ. ಈ ರಿಯಾಯಿತಿಯನ್ನು 70,000 ರೂಪಾಯಿಗಳ ವರೆಗೆ ಪಡೆಯಬಹುದಾಗಿದೆ. ಈ ರಿಯಾಯಿತಿ ಜುಲೈ ತಿಂಗಳ ಕೊನೆಯವೆರೆಗಿದೆ. ಹೆರಿಯರ್‌, ಸಫಾರಿ, ನೆಕ್ಸಾನ್‌, ಟಿಯಾಗೊ ಹ್ಯಾಚ್‌ಬಾಕ್ಸ್‌ ಮುಂತಾದ ಮಾದರಿಯ ಕಾರುಗಳ ಮೇಲೆ ರಿಯಾಯಿತಿ ನೀಡಿದೆ. ಈ ರಿಯಾಯಿತಿಯು ಪಂಚ್‌ SUV ಅಥವಾ ಎಲೆಕ್ಟ್ರಿಕಲ್‌ ಕಾರುಗಳು ಮತ್ತು CNG ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂದು ಟಾಟಾ ಮೋಟಾರ್ಸ್‌ ಹೇಳಿದೆ.

ಜುಲೈ ತಿಂಗಳನಲ್ಲಿ ರಿಯಾಯಿತಿ ಪಡೆದುಕೊಂಡ ಟಾಟಾ ಮೋಟಾರ್ಸ್‌ನ ಕಾರುಗಳು:

  • ಟಾಟಾ ಹೆರಿಯರ್‌ :
    ಈ ತಿಂಗಳು ಅತಿ ಹೆಚ್ಚು ರಿಯಾಯಿತಿ ಪಡೆಯುತ್ತಿರುವ ಟಾಟಾ ಮೋಟಾರ್ಸ್‌ ಕಾರು ಎಂದರೆ SUV ಫ್ಲಾಗ್‌ಶಿಪ್‌ ಹೊಂದಿರುವ ಟಾಟಾ ಹೆರಿಯರ್‌ ಆಗಿದೆ. 70,000 ರೂಪಾಯಿಗಳ ವರೆಗೆನ ಭಾರಿ ರಿಯಾಯಿತಿಯನ್ನು ಕಾರು ತಯಾರಕರು ನೀಡಿದ್ದಾರೆ. ಇದಕ್ಕೆ 40,000 ರೂಪಾಯಿಗಳ ವರೆಗಿನ ಎಕ್ಸಚೇಂಜ್‌ ಆಫರ್‌ ಸಹ ನೀಡಿದೆ.
  • ಟಾಟಾ ಸಫಾರಿ :
    ಜುಲೈ ತಿಂಗಳಿನಲ್ಲಿ ಟಾಟಾ ಮೋಟಾರ್ಸ್‌ಗಳಲ್ಲಿ ಎರಡನೇ ಅತಿ ಹೆಚ್ಚು ರಿಯಾಯಿತಿ ಪಡೆಯುತ್ತಿರುವ ಕಾರ್‌ ಎಂದರೆ 3 ರೋ ಹೊಂದಿರುವ SUV ಟಾಟಾ ಸಫಾರಿ ಆಗಿದೆ. 40,000 ರೂಪಾಯಿಗಳ ಎಕ್ಸಚೇಂಜ್‌ ಬೋನಸ್‌ ಸಹ ಹೊಂದಿದೆ.
  • ಟಾಟಾ ಟೈಗೋರ್‌:
    ಟಾಟಾ ಮೋಟಾರ್ಸ್‌ ಮಿಡ್‌ ರೇಂಜ್‌ನ ಟೈಗೋರ್‌ ಮಾದರಿ ಕಾರುಗಳಿಗೆ 33,000 ರೂಪಾಯಿಗಳ ವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿಯು XZ ನಮೂನೆಗಳಿಗೆ ಮತ್ತು ಮೇಲಿನ ಶ್ರೇಣಿಗಳಿಗೂ ಅನ್ವಯಿಸುತ್ತದೆ. ಮತ್ತು ಕೆಳಗಿನ ಶ್ರೇಣಿಗಳಿಗೆ 23,000 ರೂಪಾಯಿಗಳ ವರೆಗೆ ನೀಡಿದೆ.
  • ಟಾಟಾ ಟಿಯಾಗೋ:
    ಟಿಯಾಗೋ ಹ್ಯಾಚ್‌ಬ್ಯಾಕ್‌ ಮಾದರಿಯ ಕಾರುಗಳಿಗೆ ಆಕರ್ಷಕ 28,000 ರೂಪಾಯಿಗಳ ವರೆಗೆ ರಿಯಾಯಿತಿ ನೀಡಿದೆ. ಈ ರಿಯಾಯಿತಿಯು ವಿವಿಧ ನಮೂನೆಗಳಿಗೆ ಬೇರೆ ಬೇರೆ ಯಾಗಿದೆ.
  • ಟಾಟಾ ನೆಕ್ಸಾನ್‌:
    ನೆಕ್ಸಾನ್‌ SUV ಭಾರತದಲ್ಲಿ ಸದ್ಯ ಹೆಚ್ಚು ಮಾರಾಟವಾಗುತ್ತಿರುವ ಮಿಡ್ ರೇಂಜ್‌ನ ಕಾರ್‌ ಆಗಿದೆ. ಇದಕ್ಕೆ 15,000 ರೂಪಾಯಿಗಳ ವರೆಗೆ ರಿಯಾಯಿತಿಯಿದೆ. ಇದು ಪೆಟ್ರೋಲ್‌ ಮತ್ತು ಡೀಸಲ್‌ ಎರಡೂ ಮಾದರಿಯ ಕಾರುಗಳಿಗೆ ನೀಡಿದೆ. ಆದರೆ ಪೆಟ್ರೋಲ್‌ ಕಾರುಗಳಿಗೆ 8000 ರೂಪಾಯಿಗಳವರೆಗಿನ ರಿಯಾಯಿತಿ ನೀಡಿದೆ.
  • ಟಾಟಾ ಅಲ್ಟ್ರೋಝ್‌:
    ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾದರಿಯ ಕಾರಿಗೆ 10,000 ರೂಪಾಯಿಗಳ ವಿನಾಯಿತಿ ನೀಡಿದೆ. ಅಲ್ಟ್ರೋಝ್‌ ನ ಪೆಟ್ರೋಲ್‌ ಮತ್ತು ಡೀಸಲ್‌ ಎರಡೂ ನಮೂನೆಗಳಿಗೆ ರಿಯಾಯಿತಿಗಳನ್ನು ನೀಡಿಲಾಗುತ್ತಿದೆ. ಆದರೆ ಪೆಟ್ರೋಲ್‌ ನಮೂನೆಗಳಿಗೆ ಕಡಿಮೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ : Post Office Schemes : ಪೋಸ್ಟ್‌ ಆಫೀಸ್‌ ನಲ್ಲಿ ಸಣ್ಣ ಉಳಿತಾಯ ಮಾಡಿ, ಹೆಚ್ಚಿನ ಲಾಭ ಪಡೆಯಿರಿ!!

ಇದನ್ನೂ ಓದಿ : Protect PDF : ನಿಮ್ಮ ಮೊಬೈಲ್‌ ನಲ್ಲಿ PDF ಡಾಕ್ಯುಮೆಂಟ್‌ ಗಳನ್ನು ಪ್ರೊಟೆಕ್ಟ್‌ ಮಾಡುವುದು ಹೇಗೆ ಗೊತ್ತಾ?

(Tata Motors Offers discounts for these cars in July)

Comments are closed.