Tata Punch Big Offer : ಭಾರತೀಯ ಗ್ರಾಹಕರ ಮನಗೆದ್ದಿರುವ ಟಾಟಾ ಪಂಚ್ (Tata Punch) ಭರ್ಜರಿ ಆಫರ್ ಘೋಷಿಸಿದೆ. ಟಾಟಾ ಪಂಚ್ ಪೆಟ್ರೋಲ್ ಮಾಡೆಲ್ ಬುಕ್ಕಿಂಗ್ ಆರಂಭಿಸಲಾಗಿದೆ. ಈ ಕಾರು ಬುಕ್ಕಿಂಗ್ ಆರಂಭ ಗೊಂಡಿದ್ದು, ಕೇವಲ 4 ವಾರಗಳಲ್ಲಿ ಡೆಲಿವರಿ ಸಿಗಲಿದೆ. ಮೈಕ್ರೋ ಎಸ್ ಯುವಿ ಪ್ಯೂರ್, ಅಡ್ವೆಂಚರ್ ಸೇರಿದಂತೆ 4 ವೆರಿಯಂಟ್ ಗಳಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ ರೂ.6 ಲಕ್ಷ (ಎಕ್ಸ್ ಶೋ ರೂಂ)ಕ್ಕೆ ದೊರೆಯಲಿದೆ.
ಟಾಟಾ ಪಂಚ್ ಗರಿಷ್ಠ ಮೈಲೆಜ್ ನೀಡುವ ಸಿಎನ್‌ಜಿ ಮಾಡೆಲ್ ಕೇವಲ 3 ರಿಂದ 12 ವಾರಗಳಲ್ಲೇ ಗ್ರಾಹಕರಿಗೆ ಕಾರು ಲಭ್ಯವಾಗಲಿದೆ. ಆದರೆ ಕಾರುಗಳನ್ನು ಡೆಲಿವರಿ ನೀಡುವ ಅವಧಿಯು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಸಮೀಪದ ಟಾಟಾ ಕಾರು ಶೋರೂಂಗಳಿಗೆ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದಾಗಿದೆ.

ಟಾಟಾ ಪಂಚ್ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಕಾರು. ಪ್ರತೀ ತಿಂಗಳು ಕಾರುಗಳ ಮಾರಾಟದಲ್ಲಿ ಏರಿಕೆಯನ್ನು ಕಾಣುತ್ತಿದೆ. ಮೈಕ್ರೋ ಎಸ್ ಯುವಿ ಪ್ಯೂರ್, ಅಡ್ವೆಂಚರ್ ಸೇರಿದಂತೆ 4 ವೆರಿಯಂಟ್ ಗಳಲ್ಲಿ ಟಾಟಾ ಪಂಚ್ ಕಾರು ಲಭ್ಯವಿದೆ. ಈ ಕಾರುಗಳ ಆರಂಭಿಕ ಬೆಲೆ ರೂ.6 ಲಕ್ಷ (ಎಕ್ಸ್ ಶೋ ರೂಂ).
ಇದನ್ನೂ ಓದಿ : ಕೇವಲ 8.69 ಲಕ್ಷ ರೂ.ಬೆಲೆಗೆ ಟಾಟಾ ಟಿಯಾಗೊ ಇವಿ : ಎಲೆಕ್ಟ್ರಿಕ್ ಕಾರಿನ ಮಾರಾಟದ ಮೇಲೆ ಭರ್ಜರಿ ಆಫರ್
ಟಾಟಾ ಪಂಚ್ ಎರಡು ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 88 PS ಗರಿಷ್ಠ ಶಕ್ತಿಯನ್ನು ಮತ್ತು 115 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಟಾಟಾ ಪಂಚ್ CNG ರೂಪಾಂತರವು 1.2-ಲೀಟರ್ ಎಂಜಿನ್ ಅನ್ನು ಕೂಡ ಹೊಂದಿದೆ. 73.5 ಪಿಎಸ್ ಗರಿಷ್ಠ ಶಕ್ತಿ ಮತ್ತು 103 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಟಾಟಾ ಪಂಚ್ ಐದು ಜನರ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗಿದೆ. ಕ್ಯಾಲಿಪ್ಸೊ ರೆಡ್, ಅಟಾಮಿಕ್ ಆರೆಂಜ್, ಡಾಟಾನಾ ಗ್ರೇ ಸೇರಿದಂತೆ 8 ಆಕರ್ಷಕ ಬಣ್ಣಗಳಲ್ಲಿ ಕಾರು ಲಭ್ಯವಿದೆ.
ಇದನ್ನೂ ಓದಿ : ವ್ಹಾವ್.. ವ್ಹಾವ್.. ವ್ಹಾವ್ : ಕೇವಲ 999 ರೂ. ನೀಡಿ ಬುಕ್ ಮಾಡಿದ್ರೆ ಸಾಕು, ನಿಮಗೆ ಸಿಗುತ್ತೆ ಎಲೆಕ್ಟ್ರಿಕ್ ಬೈಕ್
ಇನ್ನು ಟಾಟಾ ಪಂಚ್ ಪೆಟ್ರೋಲ್ ಮಾಡೆಲ್ ಪ್ರತೀ ಲೀಟರ್ ಪೆಟ್ರೋಲ್ ಗೆ 18.8 kmpl ನಿಂದ 20.09 kmpl ಮೈಲೇಜ್ ನೀಡುತ್ತಿದೆ. ಆದರೆ ಸಿಎನ್‌ಜಿ ಮಾಡೆಲ್‌ನಲ್ಲಿ ಭರ್ಜರಿ 26.99 km/kg ಮೈಲೆಜ್ ಪಡೆಯಬಹುದಾಗಿದೆ. ಮೈಲೇಜ್ ಮಾತ್ರವಲ್ಲ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಕೂಡ ಒಳಗೊಂಡಿದೆ.

ಟಾಟಾ ಪಂಚ್ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಸವಾರಿಯನ್ನು ನೀಡುತ್ತದೆ. 366 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ. ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಈ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರಿಯರ್ ಡಿಫಾಗರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಆಂಕರ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ : ಹುಂಡೈ ಎಕ್ಸ್‌ಟರ್ 1 ಲಕ್ಷ ಕಾರು ಬುಕ್ಕಿಂಗ್ : ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ದಾಖಲೆ
ಟಾಟಾ ಪಂಚ್ ಕಾರು ಹುಂಡೈ ಎಕ್ಸ್‌ಟರ್ ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ. ಟಾಟಾ ಕಂಪನಿಯು ಪಂಚ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. 12 ಲಕ್ಷದ ಆರಂಭಿಕ ಬೆಲೆಗೆ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಅದ್ರಲ್ಲೂ ಒಮ್ಮೆ ಕಾರನ್ನು ಚಾರ್ಜ್ ಮಾಡಿದ್ರೆ 500 ಕಿ.ಮೀ ಪ್ರಯಾಣಿಸಬಹುದಾಗಿದೆ.
Tata Punch Big Offer 26 km mileage car Tata Punch is available for just 6 lakhs