KMF recruitment 2023: ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(KMF recruitment 2023) ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್‌ ಸಹಾಯಕ ವ್ಯವಸ್ಥಾಪಕರು, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ ಮತ್ತು ಇತರ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಕೆಳಕಂಡ 194 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ ಲೈನ್‌ ಮುಖಾಂತರ ಆಹ್ವಾನಿಸಲಾಗಿದ್ದು, ನೇಮಕಾತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಈ ಕೆಳಗೆ ತಿಳಸಲಾಗಿದೆ.

ಸಂಸ್ಥೆಯ ಹೆಸರು: ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್‌

ಹುದ್ದೆಯ ವಿವರಗಳು: ಒಟ್ಟು ಹುದ್ದೆ – 194 ಹುದ್ದೆಗಳು

  1. ಸಹಾಯಕ ವ್ಯವಸ್ಥಾಪಕ: 21 ಹುದ್ದೆಗಳು
  2. MIS : 01 ಹುದ್ದೆಗಳು
  3. ಮಾರ್ಕೆಟಿಂಗ್ ಅಧಿಕಾರಿ : 02 ಹುದ್ದೆಗಳು
  4. ತಾಂತ್ರಿಕ ಅಧಿಕಾರಿ: 18 ಹುದ್ದೆಗಳು
  5. ಕಮಿಷನ್ ಗ್ರೇಡ್ : I 04 ಹುದ್ದೆಗಳು
  6. ವಿಸ್ತರಣಾ ಅಧಿಕಾರಿ ಗ್ರೇಡ್: I 17 ಹುದ್ದೆಗಳು
  7. ಆಡಳಿತ ಸಹಾಯಕ ಗ್ರೇಡ್- II‌ : 17 ಹುದ್ದೆಗಳು
  8. ಅಕೌಂಟೆಂಟ್ ಸಹಾಯಕ ಗ್ರೇಡ್‌ – II : 12 ಹುದ್ದೆಗಳು
  9. ಮಾರ್ಕೆಟಿಂಗ್ ಸಹಾಯಕ ಗ್ರೇಡ್‌ -II : 10 ಹುದ್ದೆಗಳು
  10. ಜೂನಿಯರ್ ಸಿಸ್ಟಮ್ ಆಪರೇಟರ್ : 13 ಹುದ್ದೆಗಳು

ಅರ್ಜಿ ಶುಲ್ಕ
SC/ST/Cat-I/PWD ಅಭ್ಯರ್ಥಿಗಳಿಗೆ: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.1000/-
ಪಾವತಿ ಮೋಡ್: ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕು

ಆಸಕ್ತ ಅಭ್ಯರ್ಥಿಗಳಿಗೆ ಫೆ. 01, 2023 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಪ್ರಾರಂಭವಾಗಿದ್ದು, ಮಾರ್ಚ್ 03 , 2023 ರಂದು ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿ ಕೊನೆಗೊಳ್ಳಲಿದೆ.

ವಯಸ್ಸಿನ ಮಿತಿ ಹಾಗೂ ಅರ್ಹತೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ವೇತನ ಶ್ರೇಣಿ :
ಸಹಾಯಕ ವ್ಯವಸ್ಥಾಪಕರು: 52,650 – 97,100 ರೂ
ಸಹಾಯಕ ವ್ಯವಸ್ಥಾಪಕರು : 52,650- 7,100 ರೂ.
ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧಿಕಾರಿ: 43,100- 83,900 ರೂ.
ವಿಸ್ತರಣಾಧಿಕಾರಿ ದರ್ಜೆ- 3 , ಕೆಮಿಸ್ಟ್‌ ದರ್ಜೆ-1 : 33, 450- 62,600 ರೂ.
ಆಡಳಿತ ಸಹಾಯಕ ದರ್ಜೆ – 2 : 27,650- 52,650 ರೂ.
ಲೆಕ್ಕ ಸಹಾಯಕ ದರ್ಜೆ-2 ಹಾಗೂ ಮಾರುಕಟ್ಟೆ ಸಹಾಯಕ ದರ್ಜೆ-2, ಕೆಮಿಸ್ಟ್‌ ದರ್ಜೆ-2, : 27 ,650- 52,650 ರೂ.
ಜೂನಿಯರ್ ಸಿಸ್ಟಮ್ ಆಪರೇಟರ್ : 21,400- 42,000

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್‌ ನ ಅಧಿಕೃತ ವೆಬ್‌ ಸೈಟ್ www.shimul.coop‌ ಅನ್ನು ಪರಿಶೀಲಿಸಬಹುದು.

ಇದನ್ನೂ ಓದಿ : DC Office Bengaluru recruitment 2023: ಪುರಸಭೆ, ನಗರಸಭೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : IAF Recruitment 2023 : ಭಾರತೀಯ ವಾಯುಪಡೆ ನೇಮಕಾತಿ : ವಿವಿಧ ಅಗ್ನಿವೀರರ ಹುದ್ದೆಗಳಿಗೆ ಅರ್ಜಿ ಆಹ್ವಾನ

KMF recruitment 2023: Application invitation for various posts of Federation of Cooperative Milk Producers Unions

Comments are closed.