ಭಾರತದಲ್ಲಿ ಲಭ್ಯವಿರುವ 5 ವಿಶ್ವಾಸರ್ಹ ಎಲೆಕ್ಟ್ರಿಕ್ ಸ್ಕೂಟರ್‌ಗಳು: ಟಿವಿಎಸ್ ಐಕ್ಯೂಬ್ ನಿಂದ ಸುಜುಕಿ ಇ–ಆಕ್ಸೆಸ್ ವರೆಗೆ
Best Electric Scooters: ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅನೇಕ ಜನಪ್ರಿಯ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ವಾಹನಗಳನ್ನು ಪರಿಚಯಿಸಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಿವೆ. ಈ ಸಮಯದಲ್ಲಿ ಗ್ರಾಹಕರು ಯಾವ ಸ್ಕೂಟರ್ ಖರೀದಿಸಬೇಕು ಎಂಬ ಗೊಂದಲಕ್ಕೆ ಬೀಳುವುದು ಸಹಜ. ಅವರ ಈ ಗೊಂದಲಕ್ಕೆ ಇಲ್ಲಿದೆ ಪರಿಹಾರ. ಸದ್ಯದ ಮಾರುಕಟ್ಟೆಯಲ್ಲಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಿಂದ ನಂಬಿಕೆ ಗಳಿಸುವ 5 ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಿರು ಪರಿಚಯ ಇಲ್ಲಿದೆ.
ಟಿವಿಎಸ್ ಐಕ್ಯೂಬ್
TVS ಐಕ್ಯೂಬ್, TVS ಮೋಟಾರ್ ಕಂಪನಿಯ ಹೆಸರಿನಿಂದಾಗಿ ವಿಶ್ವಾಸಾರ್ಹತೆ ಗಳಿಸಿದೆ. ಇದು ಐಕ್ಯೂಬ್, ಐಕ್ಯೂಬ್ S, ಮತ್ತು ಐಕ್ಯೂಬ್ ST ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವ ಸಲವಾಗಿ ಕೈಗೆಟಕುವ ಬೆಲೆ ನಿರ್ಧರಿಸಿದೆ. ಇದರ ಮೂಲ ಮಾದರಿಯು ₹94,999 (ಎಕ್ಸ್-ಶೋರೂಂ) ರಿಂದ ಪ್ರಾರಂಭವಾಗುತ್ತದೆ, ಆದರೆ ಇದರ ಟಾಪ್–ಎಂಡ್ ST ರೂಪಾಂತರದ ಬೆಲೆ ₹1.61 ಲಕ್ಷ (ಎಕ್ಸ್-ಶೋರೂಂ).
ಅಥೆರ್ ರಿಜ್ಟಾ
ಆಧುನಿಕ ತಂತ್ರಜ್ಞಾನದ ಜೊತೆಗೆ ಉತ್ತಮ ಸೌಕರ್ಯ ಮತ್ತು ಸುಲಭವಾಗಿ ಬಳಸಬಹುದಾದ ಅಥೆರ್ ರಿಜ್ಟಾ ಕ್ರಿಯಾತ್ಮಕ ವಿನ್ಯಾಸ ಮತ್ತು ಹಲವಾರು ವೈಶಿಷ್ಟ್ಯಗಳಿಂದಾಗಿ ಭಾರತದ ಅನೇಕ ಕುಟುಂಬಗಳ ನೆಚ್ಚಿನ ಸ್ಕೂಟರ್ ಆಗಿದೆ. ಇದು ಗರಿಷ್ಠ 123 ಕಿ.ಮೀ ನಿಂದ 159 ಕಿ.ಮೀ ಮೈಲೇಜ್ ನೀಡುತ್ತದೆ. ಇದನ್ನು 1.04 ಲಕ್ಷ ರೂ. ದಿಂದ ಪ್ರಾರಂಭವಾಗಿ 1.30 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಬಜಾಜ್ ಚೇತಕ್
ಅತ್ತುತ್ತಮ ಗುಣಮಟ್ಟದ ಆಲ್–ಮೆಟಲ್ ಬಾಡಿಯ ಬಜಾಜ್ ಚೇತಕ್ ಇವಿ ಪ್ರತಿಸ್ಪರ್ಧಿಗಳ ಎದುರಿಗೆ ದೃಢವಾಗಿ ನಿಂತಿದೆ. ಇದನ್ನು ಮಾರುಕಟ್ಟೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಇದು 2501, C3001, ಮತ್ತು C35 ಸರಣಿಯಂತಹ ಹಲವಾರು ಮಾದರಿಗಳನ್ನು ಒಳಗೊಂಡಿದೆ. 113 ರಿಂದ 151 ಕಿ.ಮೀ ವ್ಯಾಪ್ತಿ ಕ್ರಮಿಸಬಲ್ಲದು. ಇದರ ಮೂಲ ಮಾದರಿಯ ಬೆಲೆ 89,500 ರೂ (ಎಕ್ಸ್ ಶೋ ರೂಂ) ದಿಂದ ಪ್ರಾರಂಭವಾಗಿ ಪ್ರೀಮಿಯಂ ರೂಪಾಂತರದ ಬೆಲೆ 1.22 ಲಕ್ಷದವರೆಗೆ (ಎಕ್ಸ್ ಶೋ ರೂಂ ಬೆಲೆ) ಇರಲಿದೆ.
ಇದನ್ನೂ ಓದಿ: Car Sales 2027: 2027ರ ಟಾಪ್ ಕಾರುಗಳು: ಭಾರತದ ರಸ್ತೆ ಆಳಲಿವೆ ಈ 5 ಕಾರುಗಳು ! ನಿಮ್ಮ ಆಯ್ಕೆ ಯಾವುದು?
ಸುಜುಕಿ ಇ–ಆಕ್ಸೆಸ್
ಭಾರತದ ಇಲೆಕ್ಟ್ರಿಕ್ ಮಾರುಕಟ್ಟೆಗೆ ಹೊಸದಾಗಿ ಸೇರ್ಪಡೆಯಾದ ಸುಜುಕಿ ಇ ಆಕ್ಸೆಸ್ ಕಡಿಮೆ ಸಮಯದಲ್ಲೇ ಹೆಚ್ಚು ವಿಶ್ವಾಸ ಗಳಿಸಿದೆ. 1.88 ಲಕ್ಷ ರೂ. (ಎಕ್ಸ್-ಶೋರೂಂ) ಬೆಲೆಯ ಇದು, 3.072 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ 95 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಓಲಾ S1 X
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಲೈನ್‌ಅಪ್‌ಗಳಲ್ಲಿ ಹೆಚ್ಚು ಕೈಗಟಕುವ ಸ್ಕೂಟರ್ ಇದಾಗಿದೆ. 94,999 ರೂ. (ಎಕ್ಸ್ ಶೋ ರೂಂ) ಬೆಲೆಯ ಈ ಸ್ಕೂಟರ್ 2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 108 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಇದರಲ್ಲಿ 4.3 ಇಂಚಿನ ಎಲ್‌ಸಿಡಿ ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್–ಬೈ–ಟರ್ನ್ ನ್ಯಾವಿಗೇಷನ್ ವೈಶಿಷ್ಟ್ಯ ಹೊಂದಿದೆ.



