ಟ್ರಾಫಿಕ್‌ ಸಮಸ್ಯೆಯಲ್ಲಿ ಬೆಂಗಳೂರೇ ಫಸ್ಟ್‌: ಟ್ರಾಫಿಕ್‌ ಜಾಮ್‌ನಿಂದ ಇಲ್ಲಿ ವೇಸ್ಟ್‌ ಆಗುವ ಸಮಯ ಎಷ್ಟು ಗೊತ್ತಾ?

ಇಂದಿನ ದಿನಗಳಲ್ಲಿ ಭಾರತದ ದೊಡ್ಡ ನಗರಗಳಲ್ಲಿ ಟ್ರಾಫಿಕ್‌ ಒಂದು ಗಂಭೀರ ಸಮಸ್ಯೆಯಾಗಿದೆ. ಇದರಿಂದ ಸಾಮಾನ್ಯ ಜನರ ಸಮಯ ಹಾಳಾಗುತ್ತಿದೆ. ಜೊತಗೆ ಇಂಧನವೂ ನಷ್ಟವಾಗುತ್ತಿದೆ.

ಇದು ಭಾರತದ ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಸವಾಲುಗಳನ್ನು ಎತ್ತಿ ತೋರಿಸುತ್ತಿದೆ.

ಇದು ಇಷ್ಟಕ್ಕೇ ಸೀಮಿತವಾಗಿರದೇ ಜನಸಾಮಾನ್ಯರ ಮಾನಸಿಕ ಒತ್ತಡದ ಮೇಲೂ ಪ್ರಮುಖ ಪರಿಣಾಮ ಬೀರುತ್ತಿದೆ.

ಟಾಮ್‌ ಟಾಮ್‌ ಟ್ರಾಫಿಕ್ಸ್‌ ಇಂಡೆಕ್ಸ್‌ 2025 ಇದೊಂದು ಭಾರತದ ಅತಿ ಗಂಭೀರ ಸಮಸ್ಯೆಯಾಗಿದೆ ಎಂದು ಹೇಳಿದೆ.

ಇದರ ಪ್ರಕಾರ ಭಾರತದ ದೊಡ್ಡ ನಗರಗಳಲ್ಲಿ ವಾಸಿಸುವ ಜನರು ವರ್ಷವೊಂದಕ್ಕೆ 100 ಗಂಟೆಗಿಂತಲೂ ಅಧಿಕ ಕಾಲ ಟ್ರಾಫಿಕ್‌ನಲ್ಲಿಯೇ ಸಿಲುಕಿಕೊಳ್ಳತ್ತಾರೆ ಎಂದು ವರದಿಯಲ್ಲಿ ಹೇಳಿದೆ.

ಕೆಲವು ನಗರಗಳಲ್ಲಂತೂ ಜನರು ವರ್ಷಕ್ಕೆ 168 ಗಂಟೆ ಟ್ರಾಫಿಕ್‌ ಜಾಮ್‌ನಲ್ಲಿಯೇ ಕಳೆಯುತ್ತಾರೆ ಎಂದಿದೆ.

ಅದು ಬಿಡುಗಡೆ ಮಾಡಿರುವ ಟಾಪ್‌ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

ಇಲ್ಲಿ ಜನರು ಪ್ರತಿದಿನ ಭಾರಿ ಟ್ರಾಫಿಕ್‌ ಜಾಮ್‌ನಿಂದ ಬಳಲುತ್ತಿದ್ದಾರೆ.

ಟಾಮ್‌ ಟಾಮ್‌ ಟ್ರಾಫಿಕ್ ಇಂಡೆಕ್ಸ್‌ ಬಿಡುಗಡೆ ಮಾಡಿರುವ ಸೂಚ್ಯಂಕದ ಆಧಾರ ಮೇಲೆ ಭಾರತದ ಟಾಪ್‌ 10 ನಗರಗಳು ಯಾವುವು ಇಲ್ಲಿದೆ ಓದಿ.

  1. ಬೆಂಗಳೂರು
    ಟಾಮ್‌ಟಾಮ್ ಸೂಚ್ಯಂಕದ ಪ್ರಕಾರ, ಬೆಂಗಳೂರು ನಂ. 1 ಸ್ಥಾನದಲ್ಲಿದೆ. ಇಲ್ಲಿ ಸರಾಸರಿ ವಾಹನ ವೇಗ ಗಂಟೆಗೆ ಕೇವಲ 16.6 ಕಿ.ಮೀ. ದಾಖಲಾಗಿದೆ.
    ಇಲ್ಲಿನ ನಿವಾಸಿಗಳು 15 ನಿಮಿಷಗಳಲ್ಲಿ ಸರಾಸರಿ 4.2 ಕಿ.ಮೀ. ಪ್ರಯಾಣಿಸುತ್ತಾರೆ. ಇದಲ್ಲದೆ, ಜನರು ವರ್ಷಕ್ಕೆ 168 ಗಂಟೆಗಳ ಕಾಲ ಸಂಚಾರದಲ್ಲಿ ವ್ಯರ್ಥ ಮಾಡುತ್ತಾರೆ.
  2. ಪುಣೆ
    ಪುಣೆ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಸರಾಸರಿ 18 ಕಿ.ಮೀ/ಗಂಟೆ ವೇಗ ಮತ್ತು ಸರಾಸರಿ 4.5 ಕಿ.ಮೀ ದೂರವನ್ನು 15 ನಿಮಿಷಗಳಲ್ಲಿ ಕ್ರಮಿಸುತ್ತದೆ. ಇಲ್ಲಿನ ಜನರು ಸಂಚಾರದಿಂದಾಗಿ ವರ್ಷಕ್ಕೆ 152 ಗಂಟೆಗಳನ್ನು ಕಳೆದುಕೊಳ್ಳುತ್ತಿದ್ದಾರೆ.
  3. ಮುಂಬೈ
    ಮುಂಬೈನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 20.8 ಕಿ.ಮೀ., ಮತ್ತು 15 ನಿಮಿಷಗಳಲ್ಲಿ ಪ್ರಯಾಣಿಸುವ ಸರಾಸರಿ ದೂರ 5.2 ಕಿ.ಮೀ. ಮುಂಬೈ ನಿವಾಸಿಗಳು ವರ್ಷಕ್ಕೆ 126 ಗಂಟೆಗಳ ಕಾಲ ಸಂಚಾರದಲ್ಲಿ ವ್ಯರ್ಥ ಮಾಡುತ್ತಾರೆ.
  4. ನವದೆಹಲಿ
    ನವದೆಹಲಿಯಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 25 ಕಿ.ಮೀ. ಆಗಿದ್ದು, ಈ ಪಟ್ಟಿಯಲ್ಲಿ ಅತಿ ಹೆಚ್ಚು. ಇಲ್ಲಿ ಕ್ರಮಿಸುವ ಸರಾಸರಿ ದೂರ 15 ನಿಮಿಷಗಳಲ್ಲಿ 6.3 ಕಿ.ಮೀ. ಆಗಿದೆ. ಇಲ್ಲಿ ಸಂಚಾರಕ್ಕೆಂದು ವ್ಯರ್ಥವಾಗುವ ಸಮಯ 104 ಗಂಟೆಗಳಾಗಿದೆ.
  5. ಕೋಲ್ಕತ್ತಾ
    ಕೋಲ್ಕತ್ತಾದಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 17 ಕಿ.ಮೀ. ಇಲ್ಲಿನ ಜನರು 15 ನಿಮಿಷಗಳಲ್ಲಿ ಸರಾಸರಿ 4.3 ಕಿ.ಮೀ. ಪ್ರಯಾಣಿಸಬಹುದು. ಸಂಚಾರದಿಂದಾಗಿ ವಾರ್ಷಿಕ 150 ಗಂಟೆಗಳ ಸಮಯ ನಷ್ಟವಾಗುತ್ತದೆ ಎಂಬುದನ್ನು ಇದು ತೋರಿಸುತ್ತಿದೆ.
  6. ಜೈಪುರ
    ಜೈಪುರದಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 20.5 ಕಿ.ಮೀ., ಮತ್ತು 15 ನಿಮಿಷಗಳಲ್ಲಿ ಕ್ರಮಿಸುವ ಸರಾಸರಿ ದೂರ 5.1 ಕಿ.ಮೀ.. ಇಲ್ಲಿನ ನಿವಾಸಿಗಳು ಸಂಚಾರದಿಂದಾಗಿ ವಾರ್ಷಿಕವಾಗಿ 121 ಗಂಟೆಗಳನ್ನು ಕಳೆದುಕೊಳ್ಳುತ್ತಾರೆ.
  7. ಚೆನ್ನೈ
    ಚೆನ್ನೈನಲ್ಲಿ ಸರಾಸರಿ ವಾಹನ ವೇಗ ಗಂಟೆಗೆ 19.2 ಕಿ.ಮೀ. ದಾಖಲಾಗಿದೆ. ಸರಾಸರಿಯಾಗಿ, ಇಲ್ಲಿನ ಜನರು 15 ನಿಮಿಷಗಳಲ್ಲಿ 4.8 ಕಿ.ಮೀ. ಪ್ರಯಾಣಿಸುತ್ತಾರೆ. ಇಲ್ಲಿ ವಾರ್ಷಿಕವಾಗಿ 132 ಗಂಟೆ ವ್ಯರ್ಥವಾಗುತ್ತದೆ.
  8. ಹೈದರಾಬಾದ್
    ಹೈದರಾಬಾದ್‌ನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 18.4 ಕಿ.ಮೀ. ಇಲ್ಲಿನ ಜನರು 15 ನಿಮಿಷಗಳಲ್ಲಿ ಸರಾಸರಿ 4.6 ಕಿ.ಮೀ. ಪ್ರಯಾಣಿಸುತ್ತಾರೆ. ಇದಲ್ಲದೆ, ಸಂಚಾರದಲ್ಲಿಏ ವಾರ್ಷಿಕವಾಗಿ 123 ಗಂಟೆಗಳನ್ನು ವ್ಯರ್ಥ ಮಾಡಲಾಗುತ್ತದೆ.
  9. ಎರ್ನಾಕುಲಂ
    ಈ ಪಟ್ಟಿಯಲ್ಲಿ ಎರ್ನಾಕುಲಂ 9ನೇ ಸ್ಥಾನದಲ್ಲಿದ್ದು, ಸರಾಸರಿ ವಾಹನ ವೇಗ ಗಂಟೆಗೆ 20.1 ಕಿ.ಮೀ. ಇಲ್ಲಿನ ಜನರು 15 ನಿಮಿಷಗಳಲ್ಲಿ ಸರಾಸರಿ 5.0 ಕಿ.ಮೀ. ಪ್ರಯಾಣಿಸುತ್ತಾರೆ. ಸಂಚಾರ ವ್ಯರ್ಥವು ಅವರ ಸಮಯದ 118 ಗಂಟೆಗಳಾಗಿರುತ್ತದೆ.
  10. ಅಹಮದಾಬಾದ್
    ಅಹಮದಾಬಾದ್‌ನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 20.7 ಕಿ.ಮೀ. 15 ನಿಮಿಷಗಳಲ್ಲಿ ಪ್ರಯಾಣಿಸುವ ಸರಾಸರಿ ದೂರ 5.2 ಕಿ.ಮೀ. ಇಲ್ಲಿನ ಜನರು ವಾರ್ಷಿಕವಾಗಿ 106 ಗಂಟೆಗಳನ್ನು ವ್ಯರ್ಥ ಮಾಡುತ್ತಾರೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories