ಡ್ಯುಯಲ್ ಸಿಎನ್ಜಿ ಸಿಲಿಂಡರ್, 28 ಕಿ.ಮೀ.ವರೆಗೆ ಮೈಲೇಜ್ ನೀಡುವ ಟಾಪ್ 6 ಸಿಎನ್ಜಿ ಕಾರುಗಳು
Dual Cylinder CNG Cars: ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನೇ ಖರೀದಿಸಲು ಇಷ್ಟಪಡುತ್ತಾರೆ.
ಈ ಕಾರಣದಿಂದಲೇ ಪೆಟ್ರೋಲ್, ಡೀಸಲ್ ಕಾರುಗಳಿಗಿಂತ ಸಿಎನ್ಜಿ ಕಾರುಗಳನ್ನು ಖರೀದಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ.
ಸಾಮಾನ್ಯವಾಗಿ ಈ ಕಾರುಗಳು ಕಿಲೋ ಸಿಎನ್ಜಿ ಯಲ್ಲಿ ಸರಿಸುಮಾರು 25 ಕಿಮೀ. ಗಿಂತಲೂ ಹೆಚ್ಚಿನ ಮೈಲೇಜ್ ನೀಡುತ್ತದೆ.
ಇದರಿಂದ ಇಂಧನಕ್ಕಾಗಿ ವ್ಯಯಿಸುವ ಹಣವೂ ಕಡಿಮೆಯಾಗುತ್ತದೆ. ಹಾಗಾಗಿ ಬಹಳಷ್ಟು ಜನರು ಕಾರು ಖರೀದಿಸುವುದಿದ್ದರೆ ಸಿಎನ್ಜಿಗೆ ಮೊದಲ ಆದ್ಯತೆ ನೀಡುತ್ತಾರೆ.
ಭಾರತದಲ್ಲಿ ಉತ್ತಮ ಸಿಎನ್ಜಿ ಕಾರುಗಳು ಬೇಕಾದಷ್ಟಿವೆ. ಆದರೆ ಡ್ಯುಯಲ್ ಸಿಎನ್ಜಿ ಸಿಲಿಂಡರ್ ಹಾಗೂ ಬೂಟ್ ಸ್ಪೇಸ್ ಇರುವ ಕಾರುಗಳು ಈಗೀಗ ಜನಪ್ರಿಯವಾಗುತ್ತಿವೆ.
ಅಂತಹ ಟಾಪ್ 6 ಡ್ಯುಯಲ್ ಸಿಎನ್ಜಿ ಸಿಲೆಂಡರ್ ಕಾರುಗಳು ಯಾವುವು? ಸಿಎನ್ಜಿ ಕಾರು ಖರೀದಿಸುವ ಯೋಚನೆಯಿದ್ದರೆ ಯಾವುದು ಹೆಚ್ಚು ಮೈಲೇಜ್ ನೀಡುತ್ತದೆ? ಇಲ್ಲಿದೆ ಓದಿ.
1. ಟಾಟಾ ಟಿಯಾಗೊ ಸಿಎನ್ಜಿ
ಟಾಟಾ ಮೋಟಾರ್ಸ್ ಟಿಯಾಗೊ ಸಿಎನ್ಜಿಯನ್ನು 2 ಸಿಎನ್ಜಿ ಸಿಲಿಂಡರ್ನೊಂದಿಗೆ ನೀಡುತ್ತದೆ. ಈ ಕಾರು ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 26.49 ಕಿಮೀ ಮೈಲೇಜ್ ನೀಡುತ್ತದೆ.
ಈ ಕಾರಿನ ಎಕ್ಸ್ ಶೋ ರೂಂ ಬೆಲೆ 5.99 ಲಕ್ಷ ರೂ. ಆಗಿದೆ.
2. ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಸಿಎನ್ಜಿ
ಹುಂಡೈ ಇಂಡಿಯಾ ಹೊರತಂದಿರುವ ಗ್ರ್ಯಾಂಡ್ ಐ10 ನಿಯೋಸ್ ಸಿಎನ್ಜಿ ಕಾರು ಡ್ಯುಯಲ್ ಸಿಲಿಂಡರ್ ಅನ್ನು ಹೊಂದಿದೆ. ಇದು ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 27 ಕಿಲೋಮೀಟರ್ಗಳವರೆಗೆ ಮೈಲೇಜ್ ನೀಡುತ್ತದೆ.
ಇದನ್ನು ಭಾರತದಲ್ಲಿ 8.38 ಲಕ್ಷ ರೂ. ಎಕ್ಸ್ಶೋರೂಂ ಬೆಲೆಯಲ್ಲಿ ಖರೀದಿಸಬಹುದು.
3. ಹುಂಡೈ ಔರಾ ಸಿಎನ್ಜಿ
ಹುಂಡೈ ಕಂಪನಿಯ ಮತ್ತೊಂದು ಸಿಎನ್ಜಿ ಕಾರು ಹುಂಡೈ ಔರಾ ಸಿಎನ್ಜಿ. ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 28 ಕಿಲೋಮೀಟರ್ಗಳವರೆಗೆ ಮೈಲೇಜ್ ನೀಡುವ ಈ ಕಾರು 2 ಸಿಲಿಂಡರ್ ಹಾಗೂ ದೊಡ್ಡದಾದ ಬೂಟ್ ಸ್ಪೇಸ್ ಹೊಂದಿದೆ. ಇದನ್ನು ಭಾರತದ ಮಾರುಕಟ್ಟೆಯಲ್ಲಿ 9.11 ಲಕ್ಷ ರೂ. ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಸಬಹುದಾಗಿದೆ.
4. ಟಾಟಾ ಟಿಗೋರ್ ಸಿಎನ್ಜಿ
ಡ್ಯುಯಲ್ ಸಿಎನ್ಜಿ ಸಿಲಿಂಡರ್ ಹೊಂದಿರುವ ಟಾಟಾದ ಮತ್ತೊಂದು ಕಾರು ಟಾಟಾ ಟಿಗೋರ್ ಸಿಎನ್ಜಿ. ಈ ಕಾರು ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 26.49 ಕಿಲೋಮೀಟರ್ಗಳವರೆಗೆ ಮೈಲೇಜ್ ನೀಡುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಇದರ ಎಕ್ಸ್-ಶೋರೂಂ ಬೆಲೆ 9.44 ಲಕ್ಷ ರೂ. ಆಗಿದೆ.
5. ಟಾಟಾ ಆಲ್ಟ್ರೋಜ್ ಸಿಎನ್ಜಿ
ಟಾಟಾ ಮೋಟಾರ್ಸ್ ಇನ್ನೊಂದು ಡ್ಯುಯುಲ್ ಸಿಎನ್ಜಿ ಸಿಲಿಂಡರ್ ಕಾರು ಎಂದರೆ ಅಲ್ಟ್ರೋಜ್ ಸಿಎನ್ಜಿ. ಇದು ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 26.2 ಕಿಮೀ ಮೈಲೇಜ್ ನೀಡುತ್ತದೆ. ಟಾಟಾ ಆಲ್ಟ್ರೋಜ್ ಸಿಎನ್ಜಿ ಕಾರನ್ನು7.59 ಲಕ್ಷ ರೂ. ಎಕ್ಸ್-ಶೋ ರೂಂ ಬೆಲೆಯಲ್ಲಿ ಭಾರತದಲ್ಲಿ ಖರೀದಿಸಬಹುದಾಗಿದೆ.
6. ಹುಂಡೈ ಎಕ್ಸ್ಟರ್ ಸಿಎನ್ಜಿ
ಹುಂಡೈ ಎಕ್ಸ್ಟರ್ ಸಿಎನ್ಜಿ ಕಾರು ಡ್ಯುಯಲ್-ಸಿಲಿಂಡರ್ ನೊಂದಿಗೆ ಬರುವ ಮತ್ತೊಂದು ಉತ್ತಮ ಕಾರಾಗಿದೆ. ಈ ಸಿಎನ್ಜಿ ಕಾರು ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 27.1 ಕಿಲೋಮೀಟರ್ಗಳವರೆಗೆ ಮೈಲೇಜ್ ನೀಡುತ್ತದೆ. ಭಾರತದಲ್ಲಿ ಇದರ ಬೆಲೆ 8.64 ಲಕ್ಷ ರೂ. (ಎಕ್ಸ್ ಶೋ ರೂಂ.) ಆಗಿದೆ.



