Kohli with KL Rahul : ಫಾರ್ಮ್ ಕಳೆದುಕೊಂಡ ಕೆ.ಎಲ್ ರಾಹುಲ್ ನೆರವಿಗೆ ಧಾವಿಸಿದ ವಿರಾಟ್ ಕೊಹ್ಲಿ

ಅಡಿಲೇಡ್ : (Kohli with KL Rahul )ಒಬ್ಬ ಕ್ರಿಕೆಟಿಗನ ವೃತ್ತಿಬದುಕಲ್ಲಿ ಒಮ್ಮೆ ಕಳಪೆ ಫಾರ್ಮ್ ಎದುರಾದರೆ ಮತ್ತೆ ಅದರಿಂದ ಹೊರ ಬರುವುದು ತುಂಬಾ ಸವಾಲಿನ ಕೆಲಸ. ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಫಾರ್ಮ್ ಕಳೆದುಕೊಂಡು ಹೇಗೆಲ್ಲಾ ಒದ್ದಾಡಿದ್ದರು ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ಕ್ರಿಕೆಟ್ ಜಗತ್ತು ನೋಡಿದೆ. ನಂತರ ಏಷ್ಯಾ ಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ವಿರಾಟ್ ಕೊಹ್ಲಿ(Kohli with KL Rahul) ಮತ್ತೆ ಫಾರ್ಮ್ ಕಂಡುಕೊಂಡಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅಮೋಘ ಫಾರ್ಮನ್ನು ಮುಂದುವರಿಸಿದ್ದಾರೆ.

ಕಿಂಗ್ ಕೊಹ್ಲಿ(Kohli with KL Rahul) ಫಾರ್ಮ್’ಗೆ ಮರಳುತ್ತಿದ್ದಂತೆ ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ (KL Rahul) ಫಾರ್ಮ್ ಕಳೆದುಕೊಂಡಿದ್ದಾರೆ. ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ರಾಹುಲ್ ಕೇವಲ 22 ರನ್ (ಪಾಕಿಸ್ತಾನ ವಿರುದ್ಧ 4, ನೆದರ್ಲೆಂಡ್ಸ್ ವಿರುದ್ಧ 9, ದಕ್ಷಿಣ ಆಫ್ರಿಕಾ ವಿರುದ್ಧ 9 ರನ್) ಮಾತ್ರ ಗಳಿಸಿದ್ದಾರೆ.

ಇದನ್ನೂ ಓದಿ : Pro kabaddi League: ಬುಲ್ಸ್ ಗೆಲುವಿಗೆ ಓಟಕ್ಕೆ ಸ್ಟೀಲರ್ಸ್ ಬ್ರೇಕ್, 5 ಪಂದ್ಯಗಳ ಬಳಿಕ ಗೂಳಿಗಳಿಗೆ ಮೊದಲ ಸೋಲು

ವೃತ್ತಿಜೀವನದ ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿರುವ ಕೆ.ಎಲ್ ರಾಹುಲ್ ಅವರ ನೆರವಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಧಾವಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ 4ನೇ ಲೀಗ್ ಪಂದ್ಯಕ್ಕೂ ಮುನ್ನ ಅಡಿಲೇಡ್ ಮೈದಾನದಲ್ಲಿ ನಡೆದ ನೆಟ್ ಪ್ರಾಕ್ಟೀಸ್ ವೇಳೆ ರಾಹುಲ್ ಅವರಿಗೆ ಕೊಹ್ಲಿ ಅತ್ಯಮೂಲ್ಯ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ಆಟಗಾರನೊಬ್ಬ ಕಳಪೆ ಫಾರ್ಮ್’ನಲ್ಲಿದ್ದಾಗ ಆ ಒತ್ತಡ ನೋವು ಹೇಗಿರುತ್ತದೆ ಎಂಬುದನ್ನು ವಿರಾಟ್ ಕೊಹ್ಲಿ ಕಳೆದ 2 ವರ್ಷಗಳಲ್ಲಿ ಅನುಭವಿಸಿದ್ದಾರೆ. ಅದರ ಅರಿವು ಇರುವುದರಿಂದಲೇ ಕೆ.ಎಲ್ ರಾಹುಲ್ ಅವರ ನೆರವಿಗೆ ನಿಂತಿರುವ ಕಿಂಗ್ ಕೊಹ್ಲಿ, ತಮ್ಮ ಸಹ ಆಟಗಾರನಿಗೆ ಒಂದದಷ್ಟು ಬ್ಯಾಟಿಂಗ್ ಟಿಪ್ಸ್ ಹೇಳಿಕೊಟ್ಟಿದ್ದಾರೆ.

ಇದನ್ನೂ ಓದಿ : Dewald Brevis : 57 ಎಸೆತಗಳಲ್ಲಿ 162 ರನ್ ಚಚ್ಚಿದ ಮರಿ ಎಬಿಡಿ, ಡಿವಿಲಿಯರ್ಸ್ ಫುಲ್ ಖುಷ್

ಇದನ್ನೂ ಓದಿ : Syed Mushtaq Ali T20 : ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ವೀರೋಚಿತ ಸೋಲು

ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಆತ್ಮೀಯ ಬಾಂಧವ್ಯವಿದೆ. ರಾಹುಲ್ ಪಾಲಿಗೆ ಕೊಹ್ಲಿ ಹಿರಿಯ ಸಹೋದರನಿದ್ದಂತೆ. ರಾಹುಲ್ 2014ರಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದಾಗ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಯುವ ಆಟಗಾರನಿಗೆ ಆತ್ಮವಿಶ್ವಾಸ ತುಂಬಿದ್ದರು. ಅಂದಿನಿಂದ ಇಂದಿನವರೆಗೂ ರಾಹುಲ್ ಅವರಿಗೆ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಬೆಂಬಲ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ.

(Kohli with KL Rahul) Once a poor form is encountered in a cricketer’s career, it is very challenging to recover from it. In the last two years, the cricket world has seen how Virat Kohli, who is known as the run machine, lost his form and struggled.

Comments are closed.