Changes in RTO rules : ವಾಹನ ಮಾಲೀಕರಿಗೆ ಇಲ್ಲಿದೆ ಗುಡ್‌ನ್ಯೂಸ್‌ : RTO ನಿಯಮದಲ್ಲಿ ಹಲವು ಬದಲಾವಣೆ

ಮುಂಬೈ : ವಾಹನ ಮಾಲೀಕರು, ಸವಾರರು ಇನ್ಮುಂದೆ ಎಲ್ಲಾ ಅಗತ್ಯತೆಗೆ ಆರ್‌ಟಿಓ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಯಾಕೆಂದ್ರೆ ಆರ್‌ಟಿಓ ವಾಹನ ಮಾಲೀಕರಿಗೆ ಗುಡ್‌ ನ್ಯೂಸ್‌ (Vehicle owners good news ) ಕೊಟ್ಟಿದ್ದು, ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು (Changes in RTO rules) ತರಲು ಮುಂದಾಗಿದೆ. ಇದರಿಂದಾಗಿ ನಕಲಿ ಚಾಲನಾ ಪರವಾನಗಿ, ಪರವಾನಗಿ ಮೇಲಿನ ವಿಳಾಸ ಬದಲಾವಣೆ, ನಕಲಿ ಆರ್‌ಸಿ ಪುಸ್ತಕ ಮತ್ತು ಆರ್‌ಸಿ ಪುಸ್ತಕದಲ್ಲಿನ ವಿಳಾಸ ಬದಲಾವಣೆ ಮತ್ತು ಇನ್ನೊಂದು ರಾಜ್ಯಕ್ಕೆ ಪರವಾನಗಿಯ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದಾಗಿದೆ.

ಜನರು ಇನ್ನು ಮುಂದೆ RTO ಗೆ ಹೋಗುವ ಅಗತ್ಯವಿಲ್ಲ. ಪರ್ಮನೆಂಟ್ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿರುವವರು ಅಥವಾ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ಗಾಗಿ ಪರಿಶೀಲನೆಗೆ ಬಂದವರು ಮಾತ್ರ ಆರ್ಟಿಒಗೆ ಭೇಟಿ ನೀಡಬೇಕಾಗುತ್ತದೆ. ಈ ಸೇವೆಗಳಿಗಾಗಿ ಸುಮಾರು 20 ಲಕ್ಷ ಜನರು ಸಾರಿಗೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡುತ್ತಿದ್ದರು. ಆಧಾರ್‌ ಕಾರ್ಡ್‌ ಆಧಾರಿತವಾಗಿ ಎಲ್ಲಾ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಆರ್‌ಟಿಓ ಮುಂದಾಗಿದೆ. ನಕಲು ಹಾಗೂ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಆನ್‌ಲೈನ್‌ ಮೂಲಕ ಯಾವುದೇ ಸೇವೆಯನ್ನು ಪಡೆಯಲು ಕಡ್ಡಾಯವಾಗಿ ಆಧಾರ್‌ ಹೊಂದಿರಲೇ ಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಅನಿಲ್ ಪ್ರಣಬ್ ಹೇಳಿದ್ದಾರೆ.

ಮಹಾರಾಷ್ಟ್ರದ ಸಾರಿಗೆ ಇಲಾಖೆಯು ನಾಗರಿಕರಿಗೆ 118 ವಿವಿಧ ಸೇವೆಗಳನ್ನು ಒದಗಿಸುತ್ತಿದ್ದು, ಈ ಪೈಕಿ 80 ಆನ್‌ಲೈನ್‌ನಲ್ಲಿದ್ದು ಈಗ ಇನ್ನೂ ಆರು ಸೇವೆಗಳನ್ನು ಸೇರಿಸಲಾಗಿದೆ. ಆನ್‌ಲೈನ್ ಕಲಿಕಾ ಪರವಾನಗಿಗೆ ಸಂಬಂಧಿಸಿದಂತೆ ತಮ್ಮ ಇಲಾಖೆಗೆ ಕೆಲವು ದೂರುಗಳು ಬಂದಿವೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಎನ್‌ಐಸಿಯೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದರು. ಅಲ್ಲದೆ, ಅಲ್ಟ್ರಾ ಡೈಮೆನ್ಷನಲ್ ರವಾನೆಗಳನ್ನು ಅನುಮತಿಸಲು ಆನ್‌ಲೈನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತ್ಯೇಕವಾಗಿ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) 2,000 ಎಲೆಕ್ಟ್ರಿಕ್ ಮತ್ತು 1,000 ಸಿಎನ್‌ಜಿ ಚಾಲಿತ ಬಸ್‌ಗಳನ್ನು ಒಳಗೊಂಡಂತೆ 3,000 ಹೊಸ ಬಸ್‌ಗಳನ್ನು ಸೇರಿಸಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಆಟೋ ರಿಕ್ಷಾಗಳ ದರ ಹೆಚ್ಚಳದ ಬೇಡಿಕೆಯ ಕುರಿತು ಸಚಿವರು, ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳ ದರವನ್ನು ಹೆಚ್ಚಿಸುವ ವಿಷಯವು ಸಕ್ರಿಯ ಪರಿಗಣನೆಯಲ್ಲಿದೆ ಮತ್ತು ಒಕ್ಕೂಟಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Top Upcoming Electric Cars in India : ಭಾರತದಲ್ಲಿ 2022ರಲ್ಲಿ ರಸ್ತೆಗೆ ಇಳಿಯಲಿರುವ ಟಾಪ್ ಎಲೆಕ್ಟ್ರಿಕಲ್‌ ಕಾರ್‌ಗಳು!!

ಇದನ್ನೂ ಓದಿ : ಭವಿಷ್ಯದಲ್ಲಿಯೂ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಬೀಳಬಹುದು : ಓಲಾ ಎಲೆಕ್ಟ್ರಿಕ್ ಮುಖ್ಯಸ್ಥರು ಹೀಗೆ ಹೇಳಿದ್ಯಾಕೆ ?

Vehicle owners good news here, Government made changes in RTO rules

Comments are closed.