dharmavathi passes away : ಹಿರಿಯ ಹಾಸ್ಯ ಕಲಾವಿದ ದಿ.ನರಸಿಂಹರಾಜು ಪುತ್ರಿ ಧರ್ಮವತಿ ನಿಧನ

dharmavathi passes away : ಕನ್ನಡ ಚಿತ್ರರಂಗ ಕಂಡ ಪ್ರಖ್ಯಾತ ಹಿರಿಯ ಹಾಸ್ಯ ನಟ ದಿವಂಗತ ನರಸಿಂಹ ರಾಜು ಪುತ್ರಿ ಧರ್ಮವತಿ ಇಂದು ನಿಧನರಾಗಿದ್ದಾರೆ .ಇಂದು ಮುಂಜಾನೆ 5:30ರ ಸುಮಾರಿಗೆ ಧರ್ಮವತಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. 71 ವರ್ಷ ಪ್ರಾಯದ ಧರ್ಮವತಿ ಮೂವರು ಮಕ್ಕಳನ್ನು ಅಗಲಿದ್ದಾರೆ. ಹೆಬ್ಬಾಳದಲ್ಲಿ ಧರ್ಮವತಿ ಅಂತ್ಯಕ್ರಿಯೆ ನೆರವೇರಲಿದೆ.

ಧರ್ಮವತಿ ತಂದೆ ನರಸಿಂಹರಾಜು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದಂತವರು. 1926ರ ಜುಲೈ 24ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದ ಬಿ. ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿನಿಂದಲೇ ಬಣ್ಣ ಹಚ್ಚಲು ಆರಂಭಿಸಿದರು. ಬಾಲ ಕಲಾವಿದನಾಗಿ ನಟಿಸುತ್ತಿದ್ದ ಬಿ.ನರಸಿಂಹರಾಜುರಿಗೆ ಕ್ರಮೇಣವಾಗಿ ಸಿನಿಮಾಗಳಲ್ಲಿ ಅವಕಾಶ ಸಿಗಲು ಆರಂಭಿಸಿತು. ಹಾಸ್ಯ ನಟನೆಯನ್ನು ಮೈಗೂಡಿಸಿಕೊಂಡಿದ್ದ ನರಸಿಂಹರಾಜು ವಿದೂಷಕನಾಗಿ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದರು.

ನರಸಿಂಹರಾಜು ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು ವರನಟ ಡಾ.ರಾಜ್​ಕುಮಾರ್​ ಜೊತೆ. ಹಾಸ್ಯನಟನೆಯನ್ನು ಲೀಲಾಜಾಲವಾಗಿ ಮಾಡುತ್ತಿದ್ದ ನರಸಿಂಹರಾಜು ಡಾ.ರಾಜ್​ಕುಮಾರ್ ಮುಖ್ಯಭೂಮಿಕೆಯ ಬೇಡ ಕಣ್ಣಪ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟಿಸಲು ಆರಂಭಿಸಿದರು. ಇದಾದ ಬಳಿಕ ಚಿತ್ರರಂಗದಲ್ಲಿ ನರಸಿಂಹ ರಾಜು ಎಷ್ಟರ ಮಟ್ಟಿಗೆ ಬೇಡಿಕೆಯ ನಟರಾಗಿದ್ದರು ಅಂದರೆ ಇವರ್​ ಕಾಲ್​ಶೀಟ್​ ಪಡೆಯಲು ಚಿತ್ರತಂಡದವರು ಅವರ ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದರಂತೆ. ಬೇಡರ ಕಣ್ಣಪ್ಪ, ಸಾಕ್ಷಾತ್ಕರ, ಸತ್ಯ ಹರಿಶ್ಚಂದ್ರ, ವೀರ ಕೇಸರಿ, ಸ್ಕೂಲ್​ ಮಾಸ್ಟರ್​, ನಕ್ಕರೆ ಅದೇ ಸ್ವರ್ಗ ಹಾಗೂ ಸಂಧ್ಯಾರಾಗ ಸೇರಿದಂತೆ ಸಾಕಷ್ಟು ಸಿನಿಮಾಗಳು ನರಸಿಂಹರಾಜುರಿಗೆ ಹೆಸರು ತಂದುಕೊಟ್ಟಿವೆ.

ನರಸಿಂಹರಾಜು ಪುತ್ರಿ ಸುಧಾ ನರಸಿಂಹರಾಜು ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಿರುತೆರೆ ಹಾಗೂ ಸಿನಿಮಾ ಎರಡೂ ಕಡೆಗಳಲ್ಲಿ ನಟಿಸುವ ಸುಧಾ ನರಸಿಂಹರಾಜು ಪ್ರಸ್ತುತ ಗಟ್ಟಿ ಮೇಳ ಧಾರವಾಹಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ನರಸಿಂಹ ರಾಜು ಮತ್ತೊಬ್ಬ ಪುತ್ರಿ ಧರ್ಮವತಿ ಮಕ್ಕಳಾದ ಅವಿನಾಶ್​ ಹಾಗೂ ಅರವಿಂದ್​ ಚಂದನವನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವಿನಾಶ್​ ನಟರಾಗಿದ್ದರೆ ಅರವಿಂದ್​ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದಾರೆ.

ಇದನ್ನು ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

ಇದನ್ನೂ ಓದಿ :  ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ

late kannada comedy actor narasimha raju daughter dharmavathi passes away

Comments are closed.