Goddess Parvati : ಶಿವ ದೇವರನ್ನು ಮದುವೆಯಾಗುತ್ತೇನೆ ಇಲ್ಲವೇ ಸೂಸೈಡ್​ ಮಾಡಿಕೊಳ್ತೇನೆಂದ ಮಹಿಳೆ

Goddess Parvati : ಕೈಲಾಸದಲ್ಲಿ ಶಿವ – ಪಾರ್ವತಿ ನೆಲೆಸಿದ್ದರು ಎಂಬ ವಿಚಾರ ಹಿಂದೂ ಧರ್ಮದ ನಂಬಿಕೆಯಾಗಿದೆ. ಹೀಗಾಗಿ ಕೈಲಾಸ ಪರ್ವತ ಎಂದಾಕ್ಷಣ ಎಲ್ಲರೂ ಶಿವ – ಪಾರ್ವತಿಯ ಹೆಸರನ್ನೇ ಹೇಳುತ್ತಾರೆ. ಆದರೆ ಭಾರತ – ಚೀನಾ ಗಡಿಯ ವ್ಯಾಪ್ತಿಯಲ್ಲಿ ಬರುವ ನಾಭಿಧಾಂಗ್​​ನ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಮಹಿಳೆಯೊಬ್ಬಾಕೆ ನಾನೇ ಪಾರ್ವತಿ ದೇವಿಯ ಅವಾತರವೆಂದು ಹೇಳಿಕೊಳ್ಳುವ ಮೂಲಕ ಪೊಲೀಸರಿಗೆ ಹೊಸದೊಂದು ತಲೆನೋವು ನೀಡಿದ್ದಾರೆ. ನಾನೇ ಕಲಿಯುಗದ ಪಾರ್ವತಿಯಾಗಿರೋದ್ರಿಂದ ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುತ್ತೇನೆಂದು ಹೇಳುತ್ತಿದ್ದಾಳೆ.


ನಾಭಿದಾಂಗ್​ ಒಂದು ನಿರ್ಬಂಧಿತ ಪ್ರದೇಶವಾಗಿದ್ದು ಇಲ್ಲಿ ವಾಸಿಸಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ಆದರೆ ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್​ ಕೌರ್​ರನ್ನು ಮರಳಿ ತರಬೇಕು ಎಂದು ಹೊರಟಿದ್ದ ಪೊಲೀಸ್​ ತಂಡಕ್ಕೆ ಮಾತ್ರ ಭಾರೀ ನಿರಾಶೆಯಾಗಿದೆ . ಹರ್ಮಿಂದರ್​ ಕೌರ್​ ತಾನು ಕೈಲಾಸದಲ್ಲಿರುವ ಶಿವನನ್ನು ವರಿಸಬೇಕು ಇಲ್ಲವಾದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪಿಥೋರಗಢ ಎಸ್ಪಿ ಲೋಕೇಂದ್ರ ಸಿಂಗ್​ ಹೇಳಿದ್ದಾರೆ.


ಆದರೆ, ಆಕೆಯನ್ನು ಬಲವಂತವಾಗಿ ಧಾರ್ಚುಲಾಗೆ ಇಳಿಸಲು ದೊಡ್ಡ ತಂಡವನ್ನು ಕಳುಹಿಸಲು ನಾವು ನಿರ್ಧರಿಸಿದ್ದೇವೆ ಎಂದು ಲೋಕೇಂದ್ರ ಸಿಂಗ್​ ಹೇಳಿದರು.
ಉತ್ತರ ಪ್ರದೇಶದ ಅಲಿಗಂಜ್​ ಪ್ರದೇಶದ ನಿವಾಸಿಯಾಗಿರುವ ಈ ಮಹಿಳೆಯು ಎಸ್​ಡಿಎಂ ಧಾರ್ಚುಲಾ ನೀಡಿದ 15 ದಿನಗಳ ಅನುಮತಿಯ ಮೇರೆಗೆ ತಾಯಿಯೊಂದಿಗೆ ಗುಂಜಿಗೆ ತೆರಳಿದ್ದರು. ಆದರೆ ಮೇ 25ರಂದು ನೀಡಿದ ಅನುಮತಿಯ ಅವಧಿ ಮುಗಿದ ಬಳಿಕವೂ ನಿರ್ಬಂಧಿತ ಪ್ರದೇಶವನ್ನು ತೊರೆಯಲು ನಿರಾಕರಿಸಿದ್ದಾರೆ ಎಂದು ಪಿಥೋರಗಢ ಎಸ್ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ.


ಮಹಿಳೆಯನ್ನು ನಿರ್ಬಂಧಿತ ಪ್ರದೇಶದಿಂದ ಕರೆತರಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂವರು ಸದಸ್ಯರ ಪೊಲೀಸ್ ತಂಡವನ್ನು ಧಾರ್ಚುಲಾದಿಂದ ಕಳುಹಿಸಲಾಗಿದೆ ಆದರೆ ಬರಿಗೈಯಲ್ಲಿ ಹಿಂತಿರುಗಬೇಕಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಇದನ್ನು ಓದಿ : mandya : ಪುತ್ರಿಯ ಮೃತದೇಹದ ಜೊತೆ ನಾಲ್ಕು ದಿನ ಕಳೆದ ತಾಯಿ : ಮಂಡ್ಯದಲ್ಲೊಂದು ವಿಚಿತ್ರ ಘಟನೆ

ಇದನ್ನೂ ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

Woman Living On India-China Border Claims To Be Goddess Parvati, Wants To Marry Shiva

Comments are closed.