Vespa : ಸೂಪರ್‌ ರೆಟ್ರೊ ಲುಕ್‌ನಲ್ಲಿ ಹೊಸದಾಗಿ ಅಪ್ಡೇಟ್‌ ಆದ ವೆಸ್ಪಾ GTV ಸ್ಕೂಟರ್‌

ಬಹಳಷ್ಟು ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ತಮ್ಮ ಹಳೆಯ ಕಾಲದ ಸ್ಟೈಲ್‌ಗಳನ್ನು ಹೊಸ ದ್ವಿಚಕ್ರವಾಹನಗಳಿಗೆ ಅಳವಡಿಸಿ ಹೊಸ ಮಾಡೆಲ್‌ಗಳನ್ನಾಗಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈಗ ಅವುಗಳ ಸಾಲಿಗೆ ವೆಸ್ಪಾ (Vespa) ಸಹ ಸೇರಿದೆ. ಇಟಾಲಿಯನ್‌ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ವೆಸ್ಪಾ 2006 ರಲ್ಲಿ ಪರಿಚಯಿಸಲಾಗಿದ್ದ ಮೊದಲ ಮಾದರಿಯಿಂದ ಸ್ಪೂರ್ತಿ ಪಡೆದುಕೊಂಡಿದೆ. ಅದು ಈಗ ತನ್ನ ಅತ್ಯಂತ ಶಕ್ತಿಶಾಲಿ ಸ್ಕೂಟರ್‌ GTV ಅನ್ನು ಅನಾವರಣಗೊಳಿಸಿದೆ. ಅದರ ರೆಟ್ರೊ ಲುಕ್‌ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದೆ.

ಇದು ಸಂಪೂರ್ಣವಾಗಿ ಹಳೆಯ ಕಾಲದ ವಿನ್ಯಾಸವನ್ನೇ ಎರವಲು ಪಡೆದುಕೊಂಡಿದೆ. ಕರ್ವೀ ಪ್ಯಾನಲ್‌ಗಳು, ಅಗಲವಾದ ಹಿಂಬದಿ, ಸಿಂಗಲ್‌–ಫಿಸ್‌ ಸೀಟ್‌, ಮುಂಭಾಗದಲ್ಲಿ ಚಕ್ರದ ಮೇಲೆ ವೃತ್ತಾಕಾರದ ಹೆಡ್‌ಲೈಟ್‌ ಅನ್ನು ಅಳವಡಿಸಿಕೊಂಡಿದೆ. ಹಳೆಯ ಕಾಲದ ಥೀಮ್‌ ನಂತೆಯೇ ಎರಡು ಬಣ್ಣಗಳನ್ನು ಹೊಂದಿದೆ. ತಿಳಿ ಹಳದಿ ಮತ್ತು ಕೇಸರಿಯ ಬಣ್ಣದಿಂದ ನೋಡಲು ಸುಂದರವಾಗಿದೆ.

ವೆಸ್ಪಾ GTVಯ ಮಧ್ಯಭಾಗದಲ್ಲಿ ಲಿಕ್ವಿಡ್‌–ಕೂಲ್ಡ್‌ ತಂತ್ರಜ್ಞಾನ ಹೊಂದಿರುವ ಸಿಂಗಲ್‌–ಸಿಲಿಂಡರ್‌ನ 278cc ಎಂಜಿನ್‌ ಹೊಂದಿದೆ. ಹೆಚ್ಚಿನ ಸುರಕ್ಷತೆಗಾಗಿ ಟ್ರಾಕ್ಷನ್‌ ಕಂಟ್ರೋಲ್‌ ಅನ್ನು ಅಳವಡಿಸಿಕೊಂಡಿದೆ. ವೆಸ್ಪಾ GTV ಸ್ಕೂಟರ್‌ ಮುಂಭಾಗದಲ್ಲಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಕೀಲೆಸ್ ಕಾರ್ಯಾಚರಣೆ ಮತ್ತು ಐಚ್ಛಿಕ ಬ್ಲೂಟೂತ್ ಸಂಪರ್ಕದೊಂದಿಗೆ ಎಲ್‌ಸಿಡಿ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಹಿಂಭಾಗದಲ್ಲಿ ಶಾಕ್‌ ಅಬ್ಸಾರ್ಬರ್‌ ಹೊಂದಿದೆ. ಇದು ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆಯಲ್ಲೂ ABS ತಂತ್ರಜ್ಞಾನ ಹೊಂದಿರುವ ಡಿಸ್ಕ್‌ ಬ್ರೆಕ್‌ ಪಡೆದುಕೊಂಡಿದೆ. ಇದು ಮಿಶ್ರಲೋಹದ ಐದು–ಸ್ಟೋಕ್‌ ಇರುವ ಚಕ್ರದ ಮೇಲೆ ಓಡುತ್ತದೆ.

ಹೊಸ ವೆಸ್ಪಾ ಸ್ಕೂಟರ್ ಅನ್ನು EICMA 2022 ನಲ್ಲಿ ಪ್ರದರ್ಶಿಸಲಾಗಿದೆ ಮತ್ತು ಇದು ಶೀಘ್ರದಲ್ಲೇ ಮಾರಾಟಕ್ಕೆ ಬರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಅದಕ್ಕಿರುವ ಬೇಡಿಕೆ ಪರಿಗಣಿಸಿ, ರೆಟ್ರೊ ಸ್ಟೈಲ್‌ನ ವೆಸ್ಪಾ GTV ಸ್ಕೂಟರ್‌ ಅನ್ನು ಯಾವುದೇ ಸಮಯದಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ. ಆದರೆ ನೀವು ಇತರ ರೆಟ್ರೊ ಶೈಲಿಯ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೆ, ಕೀವೇ ಸಿಕ್ಸ್ಟೀಸ್ 300i ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದೂ ಸಹ 300cc ವಿಭಾಗದಲ್ಲಿರುವ ಸ್ಕೂಟರ್ ಆಗಿದೆ.

ಇದನ್ನೂ ಓದಿ : Honda : ಗುಡ್‌ ನ್ಯೂಸ್‌; ಈ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಿದ ಹೊಂಡಾ

ಇದನ್ನೂ ಓದಿ : DHFWS Haveri Recruitment 2022:119 ದಾದಿಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

(vespa GTV 300cc retro scooter how it looks)

Comments are closed.