Lalu Kidney transplant: ಲಾಲೂ ಪ್ರಸಾದ್ ಯಾದವ್ ಗೆ ಮಗಳಿಂದಲೇ ಕಿಡ್ನಿ ದಾನ; ಸಿಂಗಾಪುರದಲ್ಲಿ ನವೆಂಬರ್ ಅಂತ್ಯದಲ್ಲಿ ಆಪರೇಷನ್

ನವದೆಹಲಿ: Lalu Kidney transplant: ಕಳೆದ ಹಲವು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ RJD1 ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರು ಅತಿ ಶೀಘ್ರದಲ್ಲೇ ಸಿಂಗಾಪುರದಲ್ಲಿ ಕಿಡ್ನಿ ಕಸಿಗೆ ಒಳಗಾಗಲಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಲಾಲೂ ಪ್ರಸಾದ್ ಅವರಿಗೆ ಅವರ ಪುತ್ರಿಯೇ ಕಿಡ್ನಿ ದಾನ ಮಾಡಲಿದ್ದಾರೆ.

ಇದನ್ನೂ ಓದಿ: Jadeja’s wife gets BJP ticket : ಪತ್ನಿಗೆ ಬಿಜೆಪಿ ಟಿಕೆಟ್ : ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ರವೀಂದ್ರ ಜಡೇಜಾ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅಪ್ಪನನ್ನು ಉಳಿಸಿಕೊಳ್ಳಲು ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಮ್ಮ ಕಿಡ್ನಿ ದಾನ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ವೈದ್ಯರು ಕೂಡಾ ಸಮ್ಮತಿಸಿದ್ದು, ನವೆಂಬರ್ ತಿಂಗಳಾಂತ್ಯದಲ್ಲಿ ಸಿಂಗಾಪುರದಲ್ಲಿ ಆಪರೇಷನ್ ನಡೆಯಲಿದೆ. ಸದ್ಯ ರೋಹಿಣಿ ಕೂಡಾ ಸಿಂಗಾಪುರದಲ್ಲಿ ನೆಲೆಸಿದ್ದು, ತನ್ನದೇ ಕಿಡ್ನಿ ದಾನ ಮಾಡುವ ಮೂಲಕ ಅಪ್ಪನನ್ನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾರೆ.

ಈ ಮೊದಲು ಲಾಲೂ ಪ್ರಸಾದ್ ಯಾದವ್ ಅವರು ಸಿಂಗಾಪುರದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೆ ದೆಹಲಿಗೆ ವಾಪಸ್ ಆಗಿ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಶೀಘ್ರದಲ್ಲೇ ಅವರಿಗೆ ಮೂತ್ರಪಿಂಡ ಕಸಿ ಮಾಡಬೇಕು ಎಂದು ಸಿಂಗಾಪುರದ ವೈದ್ಯರು ಸೂಚಿಸಿರುವ ಹಿನ್ನೆಲೆ ನವೆಂಬರ್ 20ರಿಂದ 24ರೊಳಗೆ ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಮಗಳು ರೋಹಿಣಿ ಕಿಡ್ನಿ ದಾನ ಮಾಡಲು ಲಾಲೂ ಪ್ರಸಾದ್ ಯಾದವ್ ಅವರು ಮೊದಲಿಗೆ ಒಪ್ಪಿರಲಿಲ್ಲ. ಆದರೆ ಕೊನೆಗೂ ರೋಹಿಣಿ ಅವರ ಒತ್ತಡಕ್ಕೆ ಮಣಿದು ಆಪರೇಷನ್ ಗೆ ಒಳಗಾಗಲಿದ್ದಾರೆ.

ಇದನ್ನೂ ಓದಿ: Drunken elephants: ಕಂಠಪೂರ್ತಿ ಕುಡಿದು ಮಲಗಿದ ಆನೆಗಳಿಗೆ ಗಾಢನಿದ್ರೆ; ಎಬ್ಬಿಸುವಷ್ಟರಲ್ಲಿ ಅರಣ್ಯಾಧಿಕಾರಿಗಳು ಸುಸ್ತೋ ಸುಸ್ತು..!

ಅಕ್ಟೋಬರ್ 9 ಮತ್ತು 10ರಂದು ದೆಹಲಿಯಲ್ಲಿ RJDಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಅದರಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಸತತ 12ನೇ ಬಾರಿಗೆ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಳಿಕ ಅಕ್ಟೋಬರ್ 12ರಂದು ತಪಾಸಣೆಗಾಗಿ ಪತ್ನಿ ಹಾಗೂ ಹಿರಿಯ ಪುತ್ರಿ ಜೊತೆ ಸಿಂಗಾಪುರಕ್ಕೆ ತೆರಳಿದ್ದರು. ಸಿಂಗಾಪುರದಲ್ಲಿ ಎಲ್ಲಾ ರೀತಿಯ ತಪಾಸಣೆಗಳನ್ನು ಮಾಡಿದ್ದ ವೈದ್ಯರು ಕಿಡ್ನಿ ಕಸಿ ಮಾಡಿಸುವುದು ಅತೀ ಅಗತ್ಯ ಎಂದು ಸಲಹೆ ನೀಡಿದ್ದರು. ಹೀಗಾಗಿ ಎರಡನೇ ಪುತ್ರಿ ರೋಹಿಣಿ ಕಿಡ್ನಿ ದಾನಕ್ಕೆ ನಿರ್ಧರಿಸಿದ್ದು, ವೈದ್ಯರು ಆಕೆಯ ತಪಾಸಣೆ ನಡೆಸಿ ಒಪ್ಪಿಗೆ ಸೂಚಿಸಿದ್ದಾರೆ.

Lalu Kidney transplant: Lalu Yadav’s daughter to donate kidney to ailing father

Comments are closed.