Drunken elephants: ಕಂಠಪೂರ್ತಿ ಕುಡಿದು ಮಲಗಿದ ಆನೆಗಳಿಗೆ ಗಾಢನಿದ್ರೆ; ಎಬ್ಬಿಸುವಷ್ಟರಲ್ಲಿ ಅರಣ್ಯಾಧಿಕಾರಿಗಳು ಸುಸ್ತೋ ಸುಸ್ತು..!

ಒಡಿಶಾ: Drunken elephants: ಸಾಮಾನ್ಯವಾಗಿ ಮನುಷ್ಯರು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಬಿದ್ದುಕೊಂಡಿರೋದನ್ನು ನೋಡಿರ್ತೀವಿ. ಆದ್ರೆ ಆನೆಗಳು ಮದ್ಯ ಸೇವನೆ ಮಾಡಿ ಗಂಟೆಗಟ್ಟಲೇ ನಿದ್ರೆಗೆ ಶರಣಾದ ಘಟನೆ ಒಡಿಶಾದ ಕಾಡಿನಲ್ಲಿ ನಡೆದಿದೆ. ಅಮಲಿಗೆ ನಿದ್ದೆಗೆ ಶರಣಾದ ಆನೆಗಳನ್ನು ಎಬ್ಬಿಸುವಷ್ಟರಲ್ಲಿ ಅರಣ್ಯಾಧಿಕಾರಿಗಳು ಫುಲ್ ಸುಸ್ತಾಗಿದ್ದಾರೆ.

ಇದನ್ನೂ ಓದಿ: Crime News : ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ !

ಹಳ್ಳಿಯೊಂದರ ಜನರು ಮದ್ಯ ತಯಾರಿಸಲು ಕಾಡಿಗೆ ಹೋದಾಗ ಆನೆಗಳ ಹಿಂಡು ಅವರು ಮಾಡಿದ ಮದ್ಯವನ್ನು ಸೇವಿಸಿವೆ. ಅಮಲೇರುವ ಹೂಗಳಿಂದ ತಯಾರಿಸಲಾಗಿದ್ದ ಮಹುವಾ ಮದ್ಯವನ್ನು ಸೇವಿಸಿದ್ದರಿಂದ ಆನೆಗಳು ಅಲ್ಲೇ ನಿದ್ದೆಗೆ ಶರಣಾಗಿವೆ.

ಅಸಲಿಗೆ ನಡೆದಿದ್ದು ಇಷ್ಟೆ:

ಒಡಿಶಾದ ಕಿಯೋಂಜಾರ್ ಜಿಲ್ಲೆಯ ಕಾಡಿನೊಳಗೆ ಮಹುವಾ ಎಂಬ ಸಾಂಪ್ರಾದಾಯಿಕ ಮದ್ಯವನ್ನು ತಯಾರಿಸಲು ತೆರಳಿದ್ದ ಗ್ರಾಮಸ್ಥರು 24 ಆನೆಗಳು ದೇಶ ನಿರ್ಮಿತ ಮದ್ಯ ಸೇವಿಸಿ ಗಾಢ ನಿದ್ರೆಯಲ್ಲಿ ಮಲಗಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಶಿಲಿಪಾದ ಗೋಡಂಬಿ ಅರಣ್ಯದ ಬಳಿ ವಾಸಿಸುವ ಗ್ರಾಮಸ್ಥರು ಹೇಳುವ ಪ್ರಕಾರ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಹುವಾ ತಯಾರಿಸಲು ಕಾಡಿಗೆ ತೆರಳಿದಾಗ 9 ಗಂಡಾನೆಗಳು, 6 ಹೆಣ್ಣಾನೆಗಳು ಮತ್ತು 9 ಮರಿ ಆನೆಗಳನ್ನೊಳಗೊಂಡ ಗಜಪಡೆ ದೊಡ್ಡ ಕುಂಡಗಳಲ್ಲಿ ನೀರಿನಲ್ಲಿ ಮಹುವಾ ಹೂಗಳನ್ನು ಇಡುವ ಸ್ಥಳದ ಬಳಿ ಮಲಗಿದ್ದವು. ಅಲ್ಲದೇ ಮಡಕೆಗಳೆಲ್ಲಾ ಒಡೆದು ನೀರು ನಾಪತ್ತೆಯಾಗಿತ್ತು. ಹೀಗಾಗಿ ಆನೆಗಳು ಸಂಸ್ಕರಿಸಲಾಗದ ಮದ್ಯವನ್ನು ಸೇವಿಸಿದ್ದಾವೆಂದು ಗ್ರಹಿಸಲಾಗಿದೆ.

ಇದನ್ನೂ ಓದಿ: Jadeja’s wife gets BJP ticket : ಪತ್ನಿಗೆ ಬಿಜೆಪಿ ಟಿಕೆಟ್ : ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ರವೀಂದ್ರ ಜಡೇಜಾ

ಗ್ರಾಮಸ್ಥರು ಆನೆಗಳನ್ನು ಎಬ್ಬಿಸಿದರಾದರೂ ಅವುಗಳು ಎಚ್ಚರಗೊಳ್ಳಲೇ ಇಲ್ಲ. ಹೀಗಾಗಿ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಲಾಯಿತು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಎಷ್ಟು ಪ್ರಯತ್ನಿಸಿದರೂ ಗಜಪಡೆ ಅಲ್ಲಾಡಲಿಲ್ಲ. ಕೊನೆಗೆ ಡ್ರಮ್ ಬಾರಿಸಿದ ಮೇಲೆ ಆನೆಗಳು ಎಚ್ಚರಗೊಂಡು ಕಾಡಿನೊಳಗೆ ಓಡಿದವು. ಈ ಬಗ್ಗೆ ಅರಣ್ಯಾ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರ ಮಾಹಿತಿ ನೀಡಿದ್ದಾರೆ.

Drunken elephants: 24 Elephants Doze Off After Drinking Country Liquor, Forest Officials Beat Drums To Wake Them

Comments are closed.