ಎಲ್ಐಸಿ ಇನ್ನು ಖಾಸಗಿ ಸೊತ್ತು : ಪಾಲಿಸಿದಾರರೇ ನೀವೆಷ್ಟು ಸೇಫ್ ?

0

ನವದೆಹಲಿ : ಇಷ್ಟು ದಿನ ಜನರು ತಮ್ಮ ಭವಿಷ್ಯದ ದೃಷ್ಟಿಯಿಂದ ಜೀವ ವಿಮಾ ಪಾಲಿಸಿ ಮಾಡಿಸ್ತಾ ಇದ್ರು. ಸರಕಾರಿ ಸ್ವಾಮ್ಯದ ಸಂಸ್ಥೆ ಅನ್ನೋ ಭರವಸೆಯಲ್ಲಿಯೇ ಕೋಟ್ಯಾಂತರ ರೂಪಾಯಿಯನ್ನು ಹೂಡಿಕೆ ಮಾಡುತ್ತಿದ್ರು. ಆದ್ರೀಗ ಕೇಂದ್ರ ಸರಕಾರ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಸರ್ಕಾರದ ಸ್ವಲ್ಪ ಪಾಲು ಮಾರಾಟಕ್ಕೆ ನಿರ್ಧಾರಿಸಿದ್ದು, ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿದೆ.
ಪ್ರಸಕ್ತ ಸಾಲಿನ ಬಜೆಟ್ ಮಂಡನೆಯ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಎಲ್ಐಸಿ (ಭಾರತೀಯ ಜೀವ ವಿಮಾ ಸಂಸ್ಥೆ) ಸಂಕಷ್ಟದಲ್ಲಿದೆ. ಹೀಗಾಗಿ ಭಾರತೀಯ ಜೀವವಿಮಾ ನಿಗಮದಲ್ಲಿ ಸರಕಾರದ ಸ್ವಲ್ಪ ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಹೇಳಿಕೆ ಇದೀಗ ಪಾಲಿಸಿದಾರರ ಆತಂಕಕ್ಕೆ ಕಾರಣವಾಗಿದೆ.ದೇಶದಲ್ಲಿ ಸಾಕಷ್ಟು ವಿಮಾ ಸಂಸ್ಥೆಗಳಿದ್ದರೂ ಕೂಡ ಭಾರತೀಯರು ಮಾತ್ರ ಸರಕಾರಿ ಸ್ವಾಮ್ಯದ ಎನ್ ಐಸಿಯನ್ನೇ ನೆಚ್ಚಿಕೊಂಡಿದ್ದರು. ಖಾಸಗಿ ಸ್ವಾಮ್ಯದ ಸಂಸ್ಥೆಗಳಲ್ಲಿ ಪಾಲಿಸಿ ಹಣ ಹಿಂಪಡೆಯುವಾಗ ಎದುರಾಗುವ ಸಮಸ್ಯೆಗಳಿಂದಾಗಿಯೇ ಜನರೆಲ್ಲಾ ಎಲ್ ಐಸಿಯನ್ನು ನೆಚ್ಚಿಕೊಂಡಿದ್ದರು. ಅಲ್ಲದೇ ಜೀವ ವಿಮಾನಿಗಮದಲ್ಲಿ ಪಾಲಿಸಿ ಮಾಡಿದ್ರೆ ಸೇಫ್ ಅನ್ನೋ ಭರವಸೆಯಲ್ಲಿದ್ದರು. ಆದ್ರೀಗ ಕೇಂದ್ರದ ನಡೆ ಕೊಂಚ ನಡುಕ ಹುಟ್ಟಿಸಿದೆ. ಎಲ್ ಐಸಿಯ ಶೇರು ಮಾರಾಟಕ್ಕೆ ಮುಂದಾಗಿರೋದು ಕೇಂದ್ರದ ಕ್ರಮಕ್ಕೆ ವಿರೋಧ ಪಕ್ಷಗಳು ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಆದ್ರೆ ಕೇಂದ್ರ ಸರಕಾರ ಜೀವ ವಿಮಾ ನಿಗಮಕ್ಕೆ ಖಾಸಗಿ ಹೂಡಿಕೆಗೆ ಮುಕ್ತ ಆಹ್ವಾನ ನೀಡಿದೆ. ಸಂಪೂರ್ಣವಾಗಿ ಖಾಸಗಿಕರಣ ಮಾಡುತ್ತಾ, ಇಲ್ಲಾ ಸರಕಾರ ತನ್ನ ಹಿಡಿತದಲ್ಲಿಯೇ ನಿಗಮವನ್ನು ಇಟ್ಟುಕೊಂಡು ಖಾಸಗಿ ಹೂಡಿಕೆಗಷ್ಟೇ ಅವಕಾಶ ನೀಡುತ್ತಾ ಅನ್ನೋ ಕುರಿತು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕಿದೆ. ಒಟ್ಟಿನಲ್ಲಿ ನಂಬಿಕೆಯ ಸಂಸ್ಥೆಯಾಗಿದ್ದ ಭಾರತೀಯ ಜೀವವಿಮಾ ನಿಗಮ ಖಾಸಗಿ ಸೊತ್ತಾದ್ರೆ ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತಾ ಅನ್ನೋದು ಜನರ ಪ್ರಶ್ನೆ.

Leave A Reply

Your email address will not be published.